ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ವಿದ್ಯಾಲಯದಲ್ಲಿ ಸಾರ್ವಜನಿಕ ಗಣೇಶೋತ್ಸವ, ಪ್ರವೇಶ ದ್ವಾರದ ಉದ್ಘಾಟನೆ

0

ಆಲಂಕಾರು: ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ವಿದ್ಯಾಲಯದಲ್ಲಿ 22 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗು ಮುಖ್ಯದ್ವಾರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯರವರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಮುಖ್ಯದ್ವಾರ ಉದ್ಘಾಟಿಸಿ ಮಾತನಾಡಿ ವಿದ್ಯಾಸಂಸ್ಥೆ ಎಂದರೆ ಒಂದು ಊರಿಗೆ ದೇಗುಲವಿದ್ದಂತೆ.ಅಡಳಿತ ಮಂಡಳಿ ಹಾಗು ಊರಿನವರು ಒಟ್ಟು ಸೇರಿ ಕೆಲಸ ಮಾಡಿದಾಗ ವಿದ್ಯಾಸಂಸ್ಥೆ ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತದೆ. ನಾವು ಮಕ್ಕಳಲ್ಲಿ ಸಂಸ್ಕಾರ,ಸಂಸ್ಕೃತಿಯನ್ನು ಬೆಳೆಸಬೇಕು ಎಂದರು. ಗಣೇಶೋತ್ಸವದ ಆಚರಣೆಯ ವಿಶೇಷತೆಯನ್ನು ಅಧ್ಯಕ್ಷರು ಸಭೆಗೆ ತಿಳಿಸಿ ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜ್ ನ ಅಭಿವೃದ್ದಿಗೆ ತನ್ನಿಂದಾದ ಸಹಕಾರ ನೀಡುವುದಾಗಿ ತಿಳಿಸಿದರು.

ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂ. ಲಿ ನಿವೃತ್ತ ಪ್ರಬಂಧಕರಾದ ಅಶೋಕ ಕುಮಾರ್ .ಬಿ ಯವರು ಧಾರ್ಮಿಕ ಉಪನ್ಯಾಸ ನೀಡಿ ಭಾರತ ಎಂದರೆ ಜ್ಞಾನ ಮತ್ತು ಬೆಳಕಿನ ಸಂಕೇತ. ಇಲ್ಲಿ ದೇವರನ್ನು ಅವರವರ ಭಾವನೆಗೆ ಅನುಗುಣವಾಗಿ ಅರಾಧಿಸುತ್ತಾರೆ.ಭಗವಂತನ ಅರಾಧನೆಯಿಂದ ಮನುಷ್ಯನಿಗೆ ನೆಮ್ಮದಿ ಹಾಗು ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು. ತಾಲೂಕು ಕರ್ನಾಟಕ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ ಮಾರಂಗ ಮಾತನಾಡಿ ಗಣೇಶ ಹಬ್ಬವನ್ನು ರಾಷ್ಟ್ರೀಯ ಹಬ್ಬವನ್ನಾಗಿ ದೇಶದೆಲ್ಲೆಡೆ ಆಚರಣೆ ಮಾಡುತ್ತಾರೆ. ನಮ್ಮ ಆಚಾರ,ವಿಚಾರಗಳು ಸಂಸ್ಕಾರ,ಸಂಸ್ಕೃತಿಯ ಉಳಿವಿಗೋಸ್ಕರ ಮತ್ತು ಸಮಾಜದಲ್ಲಿ ಸೌಹಾರ್ದತೆಯನ್ನು ಕಾಪಾಡುವುದಕ್ಕೋಸ್ಕರ ಸಾರ್ವಜನಿಕ ಗಣೇಶೋತ್ಸವವನ್ನು ವಿಜ್ರಂಭಣೆಯಿಂದ ಆಚರಣೆ ಮಾಡಬೇಕು ಎಂದರು. ಆಲಂಕಾರು ಗ್ರಾ.ಪಂ ಅಧ್ಯಕ್ಷೆ ಸುಶೀಲ ಕೊಂಡಾಡಿ, ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ದಾಮೋದರ ಗೌಡ ಕಕ್ವೆ ಸಂದರ್ಭೋಚಿತವಾಗಿ ಮಾತನಾಡಿ ಗಣೇಶ ಹಬ್ಬದ ಶುಭಾಶಯ ತಿಳಿಸಿದರು.

ದುರ್ಗಾಂಬಾ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಮುಖ್ಯದ್ವಾರ ನಿರ್ಮಾಣ ಮಾಡಿದ್ದಕ್ಕೆ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮನೋಹರ್ ಎಣ್ಣೆತ್ತೋಡಿ ಮತ್ತು ಕಾರ್ಯದರ್ಶಿ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಹರಿಶ್ಚಂದ್ರ (ಮುಖ್ಯ ಗುರುಗಳು ಸೈಂಟ್ ಜಾರ್ಜ್ ಪ್ರೌಢಶಾಲೆ ಕುಂತೂರು ಪದವು) ಹಾಗೂ ನಿರ್ಮಾಣಕ್ಕೆ ಸಹಕರಿಸಿದ ಆಶೋಕ ಪಜ್ಜಡ್ಕ ಸೇರಿದಂತೆ ಹಲವರನ್ನು ಸಭೆಯಲ್ಲಿ ಗೌರವಿಸಲಾಯಿತು
ನಂತರ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮನೋಹರ ಎಣ್ಣೆತ್ತೋಡಿ, ಕಾರ್ಯದರ್ಶಿ ಹರಿಶ್ಚಂದ್ರರವರು, ಶ್ರೀ ದುರ್ಗಾಂಬಾ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ನಿರ್ಮಿಸಲಾದ ಮುಖ್ಯದ್ವಾರ ಕ್ಕೆ ಸಹಕರಿಸಿದ ಹಿರಿಯ ವಿದ್ಯಾರ್ಥಿಗಳಿಗೆ, ಅಡಳಿತ ಮಂಡಳಿಗೆ ಮತ್ತು ಊರವರಿಗೆ ಅಭಿನಂದನೆ ತಿಳಿಸಿದರು. ಈ ಸಂದರ್ಭದಲ್ಲಿ ವಿಶೇಷವಾಗಿ ತುಳುನಾಡಿನ ಪಾರಂಪರಿಕ ವಸ್ತುಗಳ ಪ್ರದರ್ಶನ ಆಯೋಜನೆ ಮಾಡಿದ ಮನವಳಿಕೆ ವಸ್ತು ಸಂಗ್ರಹಾಲಯ ಇವರಿಗೆ ಗೌರವಾರ್ಪಣೆ ಮಾಡಲಾಯಿತು. ನಂತರ ಹಿರಿಯ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಹಗ್ಗ ಜಗ್ಗಾಟ ಸ್ಪರ್ಧೆ ವಿಜೇತರಿಗೆ ಬಹುಮಾನವನ್ನು ಸಭೆಯಲ್ಲಿ ವಿತರಿಸಲಾಯಿತು. ಸಭಾಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತುರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಅಡಳಿತ ಮಂಡಳಿಯ ಕಾರ್ಯದರ್ಶಿ ಈಶ್ವರ ಗೌಡ ಪಜ್ಜಡ್ಕರವರು ಧನ್ಯವಾದ ಸಮರ್ಪಿಸಿದರು. ಕನ್ನಡ ಉಪನ್ಯಾಸಕಿ ರೂಪಾ ಜೆ.ರೈ ಯವರು ಕಾರ್ಯಕ್ರಮ ನಿರೂಪಿಸಿದರು.

ಆಡಳಿತ ಮಂಡಳಿಯ ಸದಸ್ಯರಾದ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ರಾಮರಾಜ ನಗ್ರಿ, ತಾರನಾಥ ರೈ ನಗ್ರಿ, ದಯಾನಂದ ಗೌಡ ಆಲಡ್ಕ, ಇಂದುಶೇಖರ ಶೆಟ್ಟಿ ಕುಕ್ಕೇರಿ, ವಿಜಯ ಕುಮಾರ್ ರೈ ಮನವಳಿಕೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ರೀನಾಥ್ ಗೌಡ ಮಾಪಲ, ಮುಖ್ಯಗುರು ಶ್ರೀಪತಿ ರಾವ್, ಪ್ರಾಂಶುಪಾಲ ನವೀನ್ ರೈ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಬೋಧಕ,ಬೋಧಕೇತರ ವರ್ಗದವರು, ವಿದ್ಯಾರ್ಥಿ, ವಿಧ್ಯಾರ್ಥಿನಿಯರು ಸಹಕರಿಸಿದರು.
ಸೆ.20ರಂದು ಬೆಳಗ್ಗೆ ಗಂಟೆ 5ರಿಂದ 6ರತನಕ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಬಂಧುಗಳಿಂದ ಗಣಪತಿ ನಮಸ್ಕಾರ ನಡೆದು 8ರಿಂದ ಶ್ರೀ ಗಣಪತಿ ಹೋಮ ನಂತರ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಹಳೆನೇರೆಂಕಿಯವರಿಂದ ಭಜನೆ ನಡೆದು ನಂತರ ಧಾರ್ಮಿಕ ಉಪನ್ಯಾಸ ನಡೆದು ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ನಂತರ ಶ್ರೀ ಆದಿಶಕ್ತಿ ಮಹಿಳಾ ಭಜನಾ ಮಂಡಳಿ, ಶರವೂರು ಇವರಿಂದ ಭಜನೆ ನಡೆದು ಸಂಜೆ ಮಹಾಪೂಜೆಯಾಗಿ ಶ್ರೀ ಗಣೇಶ ವಿಗ್ರಹದ ಶೋಭಾಯಾತ್ರೆ ಆಲಂಕಾರಿನಿಂದ ಕುಂತೂರುವರೆಗೆ ನಡೆದು ಕುಂತೂರಿನಲ್ಲಿ ಶ್ರೀ ಗಣೇಶ ವಿಗ್ರಹದ ಜಲಸ್ತಂಭನ ನಡೆಯಿತು.

LEAVE A REPLY

Please enter your comment!
Please enter your name here