ಉಪ್ಪಿನಂಗಡಿ : ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಬೆಥನಿ ಆಂಗ್ಲಮಾಧ್ಯಮ ಶಾಲೆ ಪುತ್ತೂರು ಇಲ್ಲಿ ಸೆಪ್ಟಂಬರ್ 20ರಂದು ನಡೆದ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ 14ರ ವಯೋಮಾನದ ಬಾಲಕರ ತಂಡವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದೆ.
ಹಾಗೂ ಬಾಲಕಿಯರ ತಂಡವು ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿರುತ್ತಾರೆ. 14 ರ ವಯೋಮಾನದ ಬಾಲಕರ ತ್ರೋಬಾಲ್ ವಿಭಾಗದಲ್ಲಿ ೭ನೇ ತರಗತಿಯ ಸಮೃದ್ಧ್ ಜೈನ್, ಆಯತುಲ್ಲ ಸಲೀಂ, ಜಿತೇಶ್ ಎಸ್. ವಿ., ಶ್ರೇಯಸ್, ಪ್ರೀತಮ್, ಮೊಹಮ್ಮದ್ ಅಝ್ಮಲ್, 6ನೇ ತರಗತಿಯ ಶಿಶಿರ್ ಜೆ. ಸಾಲ್ಯಾನ್, ಇರಾಝ್, ಸುಜಿತ್, ಸ್ವರ್ಣೇಶ್, ಆಯುಶ್ ಡಿ. ಪೂಜಾರಿ, ವಚನ್ ಕನ್ಯಾನ, ನಿಕೇತನ್ ಸಿ. ಟಿ, ಆರ‍್ಯನ್ ಎಸ್. ಹೆಗ್ಡೆ ಭಾಗವಹಿಸಿರುತ್ತಾರೆ. 14 ರ ವಯೋಮಾನದ ಬಾಲಕಿಯರ ತ್ರೋಬಾಲ್ ವಿಭಾಗದಲ್ಲಿ ೭ನೇ ತರಗತಿಯ
ಅನುಶ್ರೀ, ಅದಿತಿ, ಲಿಬಾ ಮರಿಯಮ್, ಎಂ. ಧನ್ವಿ ಶೆಟ್ಟಿ, ಅಪೂರ್ವ, ಸ್ತುತಿ ಶೆಟ್ಟಿ 6ನೇ ತರಗತಿಯ ತೃಷಾ, ಹಂಸಿನಿ, ಶರಣ್ಯ. ಎಸ್, ಭಾಗವಹಿಸಿರುತ್ತಾರೆ. ಅನುಶ್ರೀ ಉತ್ತಮ ಎಸೆತಗಾರಗಾಗಿ, ಶಿಶಿರ್ ಜೆ. ಸಾಲ್ಯಾನ್ ಉತ್ತಮ ಹಿಡಿತಗಾರನಾಗಿ, ಆಯತುಲ್ಲಾ ಸಲೀಂ ಸವ್ಯಸಾಚಿ ಆಟಗಾರರಾಗಿ ಆಯ್ಕೆಯಾಗಿರುತ್ತಾರೆ.
ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಗೋಪಿನಾಥ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ವಿದ್ಯಾ ಮತ್ತು ಶ್ರೀರಂಜಿನಿ ತರಬೇತಿ ನೀಡಿದ್ದಾರೆ ಎಂದು ಸಂಸ್ಥೆಯ ಮುಖ್ಯ
ಶಿಕ್ಷಕಿ ವೀಣಾ ಆರ್ ಪ್ರಸಾದ್ ತಿಳಿಸಿದ್ದಾರೆ.