ವಳಕಡಮ: 6ನೇ ವರ್ಷದ ಗಣೇಶೋತ್ಸವ

0

ಉಪ್ಪಿನಂಗಡಿ: ಕೊಯಿಲ ಗ್ರಾಮದ ವಳಕಡಮ ಶ್ರೀ ದೇವಿ ಭಜನಾ ಮಂದಿರದಲ್ಲಿ 6ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.19ರಂದು ನಡೆಯಿತು.
ಬೆಳಿಗ್ಗೆ ಗಣಪತಿ ವಿಗ್ರಹವನ್ನು ನೆಹರುತೋಟದಿಂದ ಮಂದಿರಕ್ಕೆ ಮೆರವಣಿಗೆಯಲ್ಲಿ ತರಲಾಯಿತು. ಬಳಿಕ ದೇವರ ಪ್ರತಿಷ್ಠಾಪನೆ, ಗಣಹೋಮ, ಪೂಜಾ ವಿಧಿವಿಧಾನಗಳು ನಡೆಯಿತು.


ಪುತ್ತಿಲ ಭೇಟಿ:
ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿದ್ದ ಪುತ್ತಿಲ ಪರಿವಾರದ ಮುಖ್ಯಸ್ಥ, ಹಿಂದೂ ಸಂಘಟನೆಗಳ ಮುಖಂಡ ಅರುಣ್‌ಕುಮಾರ್ ಪುತ್ತಿಲ ಅವರು ಆಗಮಿಸಿದ್ದರು. ಇವರನ್ನು ಕುಣಿತ ಭಜನಾ ತಂಡ ಮತ್ತು ಅಭಿಮಾನಿ ಬಳಗದಿಂದ ವಿಶೇಷ ರೀತಿಯಲ್ಲಿ ಬರಮಾಡಿಕೊಳ್ಳಲಾಯಿತು. ಈ ವೇಳೆ ಮಾತನಾಡಿದ ಅರುಣ್‌ಕುಮಾರ್ ಪುತ್ತಿಲ, ಹಿಂದೂ ಸಮಾಜದ ರಕ್ಷಣೆ, ಸಂಸ್ಕಾರ, ಆಚಾರ,ವಿಚಾರಗಳನ್ನು ನಾವು ಒಗ್ಗಟ್ಟಿನಿಂದ ಉಳಿಸಬೇಕು ಮತ್ತು ಬೆಳೆಸಬೇಕೆಂದು ಹೇಳಿದರು.


ಧಾರ್ಮಿಕ ಸಭೆ:
ಗಣೇಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ವಿಭಾಗದ ಸಾಮರಸ್ಯ ಸಹ ಸಂಯೋಜಕ್ ಆದ ಶಿವಪ್ರಸಾದ್ ಮಲೆಬೆಟ್ಟು ಅವರು ಉಪನ್ಯಾಸ ನೀಡಿದರು. ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಬಂಡಾಡಿ, ವಳಕಡಮ ಸರಕಾರಿ ಕಿ.ಪ್ರಾ.ಶಾಲಾ ಶಿಕ್ಷಕಿ ಸಂಧ್ಯಾಸತೀಶ್ ಅತಿಥಿಗಳಾಗಿದ್ದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಮನೋಹರ ಗೌಡ ಬಲ್ತಕುಮೇರು ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವಾಧ್ಯಕ್ಷ ಆನಂದ ಗೌಡ ಗುಂಡಿಜೆ, ಶ್ರೀದೇವಿ ಭಜನಾ ಮಂಡಳಿಯ ಅಧ್ಯಕ್ಷ ಗಿರಿಧರ ಗೌಡ ಬಿರ್ಮಿಜಾಲು, ಎಪಿಎಂಸಿ ಮಾಜಿ ಸದಸ್ಯ ಶೀನಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಗಣೇಶೋತ್ಸವದ ಅಂಗವಾಗಿ ಸೆ.10ರಂದು ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ನಡೆದ ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶರತ್ ಪೆಲತ್ತಡಿ ಸ್ವಾಗತಿಸಿದರು. ರಾಧಿಕಾ ನಿರೂಪಿಸಿದರು. ಚೈತನ್ಯ ವಂದಿಸಿದರು.


ಕುಣಿತ ಭಜನೆ:
ಬೆಳಿಗ್ಗೆ ಶ್ರೀ ದೇವಿ ಭಜನಾ ಮಂಡಳಿಯ ಮಹಿಳಾ ಸದಸ್ಯೆಯರಿಂದ ಕುಣಿತ ಭಜನೆ ನಡೆಯಿತು. ಸಂಜೆ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ ಕೊನೆಮಜಲು ಇವರಿಂದ ಕುಣಿತ ಭಜನೆ, ಬಳಿಕ ಶ್ರೀ ದೇವಿ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ಸಂಜೆ ಗಣಪತಿ ದೇವರಿಗೆ ಮಹಾಮಂಗಳಾರತಿ ನಡೆಯಿತು. ಬಳಿಕ ಶೋಭಾಯಾತ್ರೆ ನಡೆದು ಕುಮಾರಧಾರ ನದಿಯಲ್ಲಿ ವಿಗ್ರಹದ ಜಲಸ್ತಂಭನಗೊಳಿಸಲಾಯಿತು.

LEAVE A REPLY

Please enter your comment!
Please enter your name here