ಬಿಜೆಪಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಿಎಲ್‌ಎ 2 ಕಾರ್ಯಗಾರ

0

ಭ್ರಷ್ಟಾಚಾರ ರಹಿತ ಆಡಳಿತಕೊಟ್ಟ ಇತಿಹಾಸವಿದ್ದರೆ ಅದು ನರೇಂದ್ರ ಮೋದಿ ಸರಕಾರ ಮಾತ್ರ- ಸುದರ್ಶನ್ ಮೂಡಬಿದ್ರೆ
ಮತದಾರ ಮತದಾನಿಂದ ವಂಚಿತರಾಗರಬಾರದು- ಗೋಪಾಲಕೃಷ್ಣ ಹೇರೆಳೆ
ಪಕ್ಷದ ಸೂಚನೆ ಮೇರೆಗೆ ಬಿಎಲ್‌ಒಗಳ ಕಾರ್ಯಾಗಾರ – ಸಾಜ ರಾಧಾಕೃಷ್ಣ ಆಳ್ವ

ಪುತ್ತೂರು: ಕಳೆದ 9 ವರ್ಷದಲ್ಲಿ ಭ್ರಷ್ಟಾಚಾರ ರಹಿತ ಆಡಳಿತಕೊಟ್ಟ ಇತಿಹಾಸ ಇದ್ದರೆ ಅದು ನರೇಂದ್ರ ಮೋದಿ ಸರಕಾರದಲ್ಲಿ ಮಾತ್ರ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅವರು ಹೇಳಿದ್ದಾರೆ.


ಅವರು ಬಿಜೆಪಿ ಪುತ್ತೂರ ಮಂಡಲದ ವತಿಯಿಂದ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ಸೆ.27ರಂದು ನಡೆದ ಬಿಜೆಪಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಿಎಲ್‌ಎ 2ರ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಲಾಲ್ ಬಹದ್ದೂರು ಶಾಸ್ತ್ರಿ ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟಿದ್ದರು. ಅವರು ಜೈ ಜವಾನ್, ಜೈ ಕಿಸಾನ್ ಘೋಷಣೆ ಮಾಡಿದರು. ಅವರ ಬಳಿಕ ಬಂದ ಆಡಳಿತದ ಕಾರ್ಯವೈಖರಿ ಘೋಷವಾಕ್ಯವಾಗಿಯೇ ಉಳಿಯಿತು. ಆ ಘೋಷಣೆಯನ್ನು ಅನುಷ್ಠಾನ ಮಾಡಿದವರು ಪ್ರಧಾನಿ ನರೇಂದ್ರ ಮೋದಿಯವರು. ಕಾಂಗ್ರೆಸ್ ಮಹಾತ್ಮಾ ಗಾಂಧಿಯವರ ಭಾವಚಿತ್ರ ಅಳವಡಿಸಿದ್ದು ಮಾತ್ರ. ಗಾಂಧೀಜಿ ಕನಸನ್ನು ನನಸು ಮಾಡುವ ಮನಸ್ಸೇ ಮಾಡಿಲ್ಲ. ಆದರೆ ನರೇಂದ್ರ ಮೋದಿಯವರು ಸ್ವಚ್ಚ ಭಾರತದ ಮೂಲಕ ಪರಿಸರ ಮಾತ್ರವಲ್ಲ ಪ್ರತಿಯೊಬ್ಬರ ಹೃದಯವನ್ನೂ ಸ್ವಚ್ಛ ಮಾಡುವ ಮೂಲಕ ಸ್ವಚ್ಛ ಆಡಳಿತ ಮಾಡಿದರು. ಇವತ್ತು ಜಗತ್ತು ಭಾರತವನ್ನು ಒಪ್ಪಿಕೊಳ್ಳುವಂತೆ ಮೋದಿ ಮಾಡಿದ್ದಾರೆ. ಜಗತ್ತು ಉಳಿಯಲು ಭಾರತ ಉಳಿಯಬೇಕಿದೆ ಎಂಬ ಸತ್ಯ ಜಗತ್ತಿಗೆ ತಿಳಿದಿದೆ. ಈ ನಿಟ್ಟಿನಲ್ಲಿ ಭಾರತವನ್ನು ಭಾರತವನ್ನಾಗಿ ಉಳಿಸಲು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಿ ಬರಬೇಕಾಗಿದೆ ಎಂದರು.


ಮತದಾರ ಮತದಾನಿಂದ ವಂಚಿತರಾಗರಬಾರದು:
ಬಿಜೆಪಿ ಜಿಲ್ಲಾ ವಿಭಾಗ ಸಹಸಂಚಾಲಕ ಗೋಪಾಲಕೃಷ್ಣ ಹೇರಳೆ ಮಾತನಾಡಿ ನಮ್ಮ ಪ್ರಧಾನಿ ನರೇಂದ್ರ ಮೋದಿ ದಿನದ 24 ಗಂಟೆ ಕೆಲಸ ಮಾಡಿ, ಒಂದೇ ಒಂದು ದಿನ ರಜೆಯೂ ಮಾಡದೆ, ಭ್ರಷ್ಟಾಚಾರ ರಹಿತವಾಗಿ ದೇಶವನ್ನು ಮುನ್ನಡೆಸುತ್ತಿರುವುದನ್ನು ನಮ್ಮ ವಿರೋಧಿಗಳೇ ಹೇಳುತ್ತಾರೆ. ಹಾಗಾಗಿ ನಮಗೆ ಅವರೇ ಪ್ರಧಾನಿಯಾಗಿ ಬರಬೇಕಾಗಿದೆ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷವನ್ನು ಗೆಲ್ಲಿಸುವ ಕೆಲಸ ಬಿಎಲ್‌ಎ 2 ಮಾಡಬೇಕು. ಯಾವ ಬೂತ್‌ನಲ್ಲೂ ಮತದಾರ ಮತದಾನದಿಂದ ವಂಚಿತರಾಗದಂತೆ ನೋಡಬೇಕು ಎಂದರು.


ಪಕ್ಷದ ಸೂಚನೆ ಮೇರೆಗೆ ಬಿಎಲ್‌ಎಗಳ ಕಾರ್ಯಾಗಾರ:
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿ ಮಾತನಾಡಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯ ಅಧ್ಯಕ್ಷರ ಸೂಚನೆಯ ಮೇರೆಗೆ ಬಿಎಲ್‌ಒಗಳ ಕಾರ್ಯಗಾರ ಮಾಡಲಾಗುತ್ತಿದೆ. ಮುಂದೆ ಬೂತ್ ಮಟ್ಟದಲ್ಲಿ ಅವರಿಗೆ ಜವಾಬ್ದಾರಿ ಹೆಚ್ಚಾಗಾಲಿದೆ ಎಂದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಕಾರ್ಯದರ್ಶಿ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಜಿಲ್ಲಾ ಬಿಎಲ್‌ಎ 2 ಸಹಸಂಚಾಲಕ ದೇವದಾಸ್ ಶೆಟ್ಟಿ, ಹಿಂದುಳಿದ ಮೋರ್ಚಾದ ಜಿಲ್ಲಾಧ್ಯಕ್ಷ ಆರ್ ಸಿ ನಾರಾಯಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯೆ ಗೌರಿ ಬನ್ನೂರು ಪ್ರಾರ್ಥಿಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಎಲ್‌ಎ 1 ಸಂಚಾಲಕ ಹರೀಶ್ ಬಿಜತ್ರೆ. ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ ಕಾರ್ಯಕ್ರಮ ನಿರೂಪಿಸಿರು. ಮತ್ತು ನಿತೀಶ್ ಕುಮಾರ್ ಶಾಂತಿವನ ವಿವಿಧ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಾರ್ಯಾಗಾರ ನಡೆಯಿತು.

ಸೋಲೆ ಗೆಲುವಿನ ಸೋಪಾನ
ವಿಧಾನಸಭೆ ಚುನಾವಣೆಯಲ್ಲಿ ಯಾಕೆ ನಮಗೆ ಸೋಲಾಯಿತು. ಪುತ್ತೂರಿನಲ್ಲೂ ಸಹಿತ ಹಲವು ಕಡೆ ಬಿಜೆಪಿಗೆ ಸೋಲಾಗಿದೆ. ಆದರೆ ಬಿಜೆಪಿ ಗೆಲುವಿನಿಂದ ಪ್ರಾರಂಭಗೊಂಡ ಪಕ್ಷವಲ್ಲ. ಬಿಜೆಪಿ ಸೋಲಿನಿಂದಲೇ ಪ್ರಾರಂಭವಾದದ್ದು ನೆನಪಿರಲಿ. ಜನಸಂಘ ಆರಂಭದಲ್ಲಿ ಗೆದಿಲ್ಲ. ನಮ್ಮ ಪಕ್ಷ ಪ್ರಾರಂಭವಾದದ್ದು ಸೋಲಿನಿಂದ. ಸೋಲೆ ಗೆಲುವಿನ ಸೋಪಾನ. ಆದರೆ ಮೊನ್ನೆ ನಡೆದ ಚುನಾವಣೆಯಲ್ಲಿ ಸುಮಾರು 35 ರಿಂದ 40 ಕ್ಷೇತ್ರಗಳಲ್ಲಿ ಅತ್ಯಲ್ಪ ಮತಗಳಿಂದ ಸೋತಿದ್ದೇವೆ. ಮುನ್ನೂರು,ನಾಲ್ನೂರು ಮತಗಳಿಂದ ಸೋತು ಅಲ್ಲಿಯ ಕಾರ್ಯಕರ್ತರು ಇವತ್ತು ಪಶ್ಚಾತಾಪ ಪಡುತ್ತಿದ್ದಾರೆ. ಮತದಾರರ ಪರಿಷ್ಕರಣೆಯ ಸಂದರ್ಭದಲ್ಲಿ ನಾವು ಆದಷ್ಟು ಸೇರ್ಪಡೆ ಕಾರ್ಯ ಮಾಡುತ್ತಿದ್ದರೆ ಇವತ್ತು ನಮಗೆ ಸೋಲು ಬರುತ್ತಿರಲಿಲ್ಲ. ಇವತ್ತು ಚುನಾವಣಾ ಆಯೋಗ ಕೂಡಾ ಬೇರೆ ಬೇರೆ ಆಯಾಮದ ಮೂಲಕ ಮತದಾರ ಪಟ್ಟಿಗೆ ಸೇರ್ಪಡೆಗೊಳಿಸುವ ವಿಶೇಷ ಆದ್ಯತೆಯನ್ನು ನೀಡಿದೆ. ಈ ನಿಟ್ಟಿನಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಬಿಎಲ್‌ಎ 2 ಕಾರ್ಯಗಾರ ಮಾಡಲಾಗುತ್ತಿದೆ.ಕಾರ್ಯಗಾರದ ಉದ್ದೇಶ ನಿಮ್ಮ ಜವಾಬ್ದಾರಿಯನ್ನು ನೆನಪು ಮಾಡುವುದಾಗಿದೆ. ಮುಂದೆ ಲೋಕಸಭಾ ಚುನಾವಣೆ ಬರಲಿದೆ. ಕಾರ್ಯಕರ್ತರು ಮುಂದೆ ಜವಾಬ್ದಾರಿಯುತವಾಗಿ ಪಕ್ಷಕ್ಕೆ ಸಮಯ ಕೊಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಹೇಳಿದರು.

LEAVE A REPLY

Please enter your comment!
Please enter your name here