






ಪುತ್ತೂರು: ಹಾರಾಡಿಯಲ್ಲಿ ಹಲವು ವರ್ಷಗಳಿಂದ ಜಿನಸು ವ್ಯಾಪಾರ ನಡೆಸುತ್ತಿರುವ ಭಾಮಿ ಸುಧಾಕರ್ ಶೆಣೈ ಸೆ.26ರಂದು ರಾತ್ರಿ ನಿಧನರಾದರು.
ಮೂಲತಃ ಕೊಂಬೆಟ್ಟು ನಿವಾಸಿಯಾಗಿರುವ ಭಾಮಿ ಸುಧಾಕರ್ ಶೆಣೈ ಅವರು ಹಾರಾಡಿಯಲ್ಲಿ ಜಿನಸು ವ್ಯಾಪಾರ ಆರಂಭಿಸಿದ್ದರು ಬಳಿಕ ಹಾರಾಡಿಯಲ್ಲೇ ವಾಸ್ತವ್ಯ ಹೊಂದಿದ್ದರು. ರಾತ್ರಿ ಮನೆಯಲ್ಲಿ ಅವರು ನಿಧನರಾದರು. ಮೃತರು ಪತ್ನಿ ಸುಮನಾ, ಪುತ್ರರಾದ ಪ್ರಶಾಂತ್, ಪ್ರವೀಣ್, ಪ್ರಸನ್ನ ಅವರನ್ನು ಅಗಲಿದ್ದಾರೆ.











