ಒಂದು ತಿಂಗಳಿನಿಂದ ಪಂಚಾಯತ್ ಮಟ್ಟದಲ್ಲಿ ಶಿಬಿರ ನಡೆಯುತ್ತಿದೆ – ಡಾ.ಧರ್ಮಪಾಲ್
ಪುತ್ತೂರು: ರೇಬಿಸ್ ರೋಗಕ್ಕೆ ಲಸಿಕೆ ಅಭಿವೃದ್ಧಿಪಡಿಸಿದ ಲೂಯಿಸ್ ಪಾಶ್ಚರ್ ಅವರ ಸ್ಮರಣೆಯ ದಿನವಾದ ಸೆ.28ನ್ನು, 2007ರಿಂದ ‘ವಿಶ್ವ ರೇಬಿಸ್ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ರೇಬಿಸ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ರೇಬಿಸ್ ನಿರ್ಮೂಲನೆಯಲ್ಲಿ ಈವರೆಗಿನ ಸಾಧನೆಯನ್ನು ಗುರುತಿಸಿವುದು ಈ ಆಚರಣೆಯ ಉದ್ದೇಶವಾಗಿದ್ದು ಪುತ್ತೂರು ಪಶು ಪಾಲನೆ ಮತ್ತು ಪಶು ವೈದ್ಯ ಇಲಾಖೆಯಲ್ಲಿ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ಶಿಬಿರ ನಡೆಸಲಾಯಿತು.
ಒಂದು ತಿಂಗಳಿನಿಂದ ಪಂಚಾಯತ್ ಮಟ್ಟದಲ್ಲಿ ಶಿಬಿರ ನಡೆಯುತ್ತಿದೆ :
ಪುತ್ತೂರು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಧರ್ಮಪಾಲ ಗೌಡ ಅವರು ಬೆಳಿಗ್ಗೆ ಶ್ವಾನಕ್ಕೆ ಚುಚ್ಚು ಮದ್ದು ಹಾಕುವ ಮೂಲಕ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ರೇಬಿಸ್ ರೋಗಕ್ಕೆ ಲಸಿಕೆ ಅಭಿವೃದ್ಧಿಪಡಿಸಿದ ಲೂಯಿಸ್ ಪಾಶ್ಚರ್ ಅವರ ಸ್ಮರಣೆಯ ದಿನವನ್ನು ವಿಶ್ವ ರೇಬಿಸ್ ದಿನವನ್ನಾಗಿ ಆಚರಿಸಲಾಗುತ್ತಿದೆ. ನಮ್ಮಲ್ಲಿ ಈಗಾಗಲೇ ಸೆ.25 ರಿಂದ ಒಂದು ತಿಂಗಳ ಅಭಿಯಾನ ಆರಂಭಿಸಲಾಗಿದೆ. ಪಂಚಾಯತ್ ಮಟ್ಟದಲ್ಲಿ ಲಸಿಕೆ ಶಿಬಿರಗಳು ನಡೆಯುತ್ತಿದೆ. ಕುರಿಯ, ಕೆದಂಬಾಡಿ, ಪಾಣಾಜೆ ಗ್ರಾ.ಪಂ ವ್ಯಾಪ್ತಿಯಲ್ಲಿ ಈಗಾಗಲೇ ಲಸಿಕೆ ಅಭಿಯಾನ ನಡೆದಿದೆ ಎಂದರು. ಈ ಸಂದರ್ಭ ಪಶು ಇಲಾಖೆಯ ಇತರ ವೈದ್ಯರು, ಸಿಬ್ಬಂದಿಗಳು , ಸಾರ್ವಜನಿಕರು ಉಪಸ್ಥಿತರಿದ್ದರು.
ರೇಬಿಸ್ ತಡೆಯಲು ಕ್ರಮ ಕೈಗೊಳ್ಳಿ:ನಾಯಿ ಕಚ್ಚಿದಾಗ ನಾಯಿ ಕಚ್ಚಿದ ಜಾಗವನ್ನು ತಕ್ಷಣವೇ ನೀರು–ಸೋಪು ಮತ್ತು ಸೋಂಕು ನಿವಾರಕ ದ್ರಾವಣ ಬಳಸಿ ತೊಳೆಯಬೇಕು. ವಿಳಂಬ ಮಾಡದೇ ವೈದ್ಯರನ್ನು ಕಾಣಬೇಕು. ಚಿಕಿತ್ಸೆ ಪಡೆಯಬೇಕು ವೈದ್ಯರು ಸೂಚಿಸುವ ಔಷಧಗಳನ್ನು ಪೂರ್ಣ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಲಸಿಕೆ ಮತ್ತು ಚುಚ್ಚುಮದ್ದಿನ ಎಲ್ಲಾ ಡೋಸ್‌ಗಳನ್ನು ತಪ್ಪದೇ ತೆಗೆದುಕೊಳ್ಳಬೇಕು. ಬೀದಿ ನಾಯಿಗಳಿಗೆ, ಸಾಕುನಾಯಿಗಳಿದ್ದರೆ ಅವಕ್ಕೆ ಪ್ರತಿ ವರ್ಷ ರೇಬಿಸ್ ಲಸಿಕೆ ಹಾಕಿಸಬೇಕು. ಆಗ ರೇಬಿಸ್ ಹರಡುವುದನ್ನು ತಡೆಗಟ್ಟಬಹುದು
ಡಾ.ಧರ್ಮಪಾಲ್ , ಸಹಾಯಕ ನಿರ್ದೇಶಕರು, ಪಶು ಇಲಾಖೆ ಪುತ್ತೂರು.