





ಬಡಗನ್ನೂರು: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಿರ್ಗತಿಕರ ಕುಟುಂಬಕ್ಕೆ ಮಂಜೂರುಗೊಂಡ ವಾತ್ಸಲ್ಯ ಮನೆಯ ಬಗ್ಗೆ ಪೂರ್ವ ಭಾವಿ ಸಭೆಯನ್ನು ಮನೆಯ ಫಲಾನುಭವಿ ನೆಟ್ಟಣಿಗೆ ಮೂಡ್ನೂರು ಗ್ರಾಮದ ನೀರಳಿಕೆ ಚಂದ್ರವತಿರವರ ಮನೆಯಲ್ಲಿ ನಡೆಸಲಾಯಿತು.



ಈ ಸಭೆಯಲ್ಲಿ ಊರಿನ ಗಣ್ಯರಾದ ಗೋಪಾಲ ಕೃಷ್ಣ ಕುಂಜಾತ್ತಾಯ, ಕೃಷ್ಣ ಪ್ರಧಾದ್ ಎ ಎಸ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಮ ಮೇನಾಲ , ಸದಸ್ಯರಾದ ವೆಂಕಪ್ಪ ನಾಯ್ಕ ಮೇನಾಲ, ಶಶಿಕಲಾ , ಒಕ್ಕೂಟದ ವಲಯ ಅಧ್ಯಕ್ಷ ದಿನೇಶ್ ರೈ ಕುತ್ಯಾಳ , ಮಾಜಿ ಅಧ್ಯಕ್ಷ ಬಾಲಕೃಷ್ಣ ರೈ ಮೇನಾಲ , ಅರುಣಾ ಮೆಣಸಿನಕಾನ , ಸಾಮಾಜಿಕ ಕಾರ್ಯಕರ್ತರಾದ ರಾಜೇಂದ್ರ ಪ್ರಸಾದ್ ರೈ, ರಾಮಣ್ಣ ನಾಯ್ಕ ಬಸಿರಾಡ್ಕ, ಈಶ್ವರ ನಾಯ್ಕ ಮೆಣಸಿನ ಕಾನ, ಆಶಾ ಕಾರ್ಯಕರ್ತೆ ಉಮಾವತಿ, ಶ್ರೀಧರ ಮುಖಾರಿ ಹಾಗೂ ಮನೆಯವರು ಉಪಸ್ಥಿತರಿದ್ದರು.





ವಾತ್ಸಲ್ಯ ಮನೆಯ ರೋಪುರೇಷೆಯ ಬಗ್ಗೆ ತಾಲೂಕು ಸಮನ್ವಯಧಿಕಾರಿ ಕಾವ್ಯ ಮತ್ತು ವಲಯ ಮೇಲ್ವಿಚಾರಕ ಹರೀಶ್ ಕುಲಾಲ್, ವಿವರಿಸಿದರು. ಸೇವಾಪ್ರತಿನಿಧಿ ಸುಂದರ್ ಜಿ ಸ್ವಾಗತಿಸಿ ವಂದಿಸಿದರು.





