ಪುತ್ತೂರಿನಲ್ಲಿ ಬೃಹತ್ ಮಿಲಾದ್ ಸಮಾವೇಶ-ಆಕರ್ಷಣೀಯ ವಾಹನ ರ್‍ಯಾಲಿ – ನೂರಾರು ವಾಹನಗಳಲ್ಲಿ ಸಾವಿರಾರು ಮಂದಿ ಜಾಥಾದಲ್ಲಿ ಭಾಗಿ

0

ಪುತ್ತೂರು: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆ ಅಂಗವಾಗಿ ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಮತ್ತು ಈದ್ ಮಿಲಾದ್ ಸಮಿತಿ ಪುತ್ತೂರು ಜಂಟಿ ಆಶ್ರಯದಲ್ಲಿ 31ನೇ ವರ್ಷದ ಮಿಲಾದ್ ಸಮಾವೇಶ ಮತ್ತು ವಾಹನ ಜಾಥಾ ಸೆ.28ರಂದು ಸಂಜೆ ಪುತ್ತೂರಿನಲ್ಲಿ ನಡೆಯಿತು.

ಸಂಜೆ ಕಬಕ ಪೇಟೆಯಿಂದ ಪುತ್ತೂರು ಕಿಲ್ಲೆ ಮೈದಾನದ ತನಕ ನಡೆದ ವಾಹನ ಜಾಥಾವನ್ನು ಕಬಕದಲ್ಲಿ ಟೈಲರ್ ಇಸ್ಮಾಯಿಲ್ ಸಾಹೇಬ್ ಅವರು ಉದ್ಘಾಟಿಸಿದರು. ಈಸ್ಟರ್ನ್ ಗ್ರೂಪ್ಸ್‌ನ ಮಾಲಕ ಖಲಂದರ್ ಧ್ವಜ ಹಸ್ತಾಂತರ ಮಾಡಿ,ಅಬ್ದುಲ್ ಹಮೀದ್ ಬಾಖವಿ ದುವಾ ಆಶೀರ್ವಚನ ನೀಡಿ ವಾಹನ ಜಾಥಾಕ್ಕೆ ಚಾಲನೆ ನೀಡಿದರು. ಕಬಕ ಜಂಕ್ಷನ್ ಬಳಿಯಿಂದ ಹೊರಟ ಆಕರ್ಷಕ ವಾಹನ ರ್‍ಯಾಲಿಯು ಮುಖ್ಯರಸ್ತೆಯಾಗಿ ಕಬಕ, ಪೋಳ್ಯ, ಮುರ,ನೆಹರುನಗರ, ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವಾಗಿ ದರ್ಬೆ, ಬೈಪಾಸ್ ಮೂಲಕ ತೆರಳಿ ಕಿಲ್ಲೆ ಮೈದಾನದಲ್ಲಿ ಸಮಾವೇಶಗೊಂಡಿತು. ಸುಮಾರು 8 ಕಿ.ಮೀ ತನಕ ನಡೆದ ಈ ಜಾಥಾದಲ್ಲಿ ನೂರಾರು ವಾಹನಗಳಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಚಘೋಷಣೆಗಳನ್ನು ಕೂಗುತ್ತಾ ಸಾಗಿದರು.ಕಿ.ಮೀ. ದೂರದಲ್ಲಿ ವಾಹನಗಳ ಸಾಲು ಕಂಡು ಬಂದಿತ್ತು. ಯಾವುದೇ ಅಹಿತಕರ ಘಟನೆಗಳಾಗದಂತೆ ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.

ವಾಹನ ಜಾಥ ಉದ್ಘಾಟನಾ ಸಂದರ್ಭದಲ್ಲಿ ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್, ಕೆ.ಬಿ.ಕಾಸಿಂ ಹಾಜಿ ಮಿತ್ತೂರು, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹರ್ಷದ್ ದರ್ಬೆ, ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ, ಪ್ರಧಾನ ಕಾರ್ಯದರ್ಶಿ ಅಶ್ರಫ್ ಬಾವು, ರಾಜ್ಯ ಸಂಚಾಲಕ ಎಂ.ಪಿ.ಅಬೂಬಕ್ಕರ್, ಕೋಶಾಧಿಕಾರಿ ನ್ಯಾಯವಾದಿ ಶಾಕೀರ್ ಹಾಜಿ ಮಿತ್ತೂರು, ಈದ್ ಮಿಲಾದ್ ಸಮಿತಿ ಅಧ್ಯಕ್ಷ ಬಶೀರ್ ಪರ್ಲಡ್ಕ, ಪ್ರಧಾನ ಕಾರ್ಯದರ್ಶಿ ದರ್ಶಿ ಇಫಾಜ್ ಬನ್ನೂರು, ಕೋಶಾಧಿಕಾರಿ ಅಝೀರಂ ಬಪ್ಪಳಿಗೆ, ಸಾಬಾ ಕಬಕ, ಎಂ.ಪಿ.ಉಮ್ಮರ್ ಮಲ್ನಾಡ್, ಕಬಕ ಮಿಲಾದ್ ಸಮಿತಿ ಗೌರವಾಧ್ಯಕ್ಷ ಇಸ್ಮಾಯಿಲ್ ಪೋಳ್ಯ ಬ್ರೈಟ್, ಅಧ್ಯಕ್ಷ ಉಮ್ಮರ್ ಫಾರೂಕ್ ಕಬಕ, ಕಾರ್ಯದರ್ಶಿ ಆಶೀಫ್, ಕೋಶಾಧಿಕಾರಿ ಅನ್ವರ್ ಕಬಕ, ಸಂಚಾಲಕ ಖಾದರ್ ಕಬಕ, ಪದಾಧಿಕಾರಿಗಳಾದ ಶಾಕೀರ್ ರಾಜಧಾನಿ, ಹರ್ಷದ್ ಕೆ.ಎಸ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದು, ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಈದ್ ಮಿಲಾದ್ ಸಮಿತಿ ಕಬಕರವರಿಂದ ಪಾನೀಯ ಮತ್ತು ಸಿಹಿ ತಿಂಡಿ ವಿತರಣೆ ನಡೆಯಿತು. ಖಾಸಗಿ ವಾಹನಗಳಲ್ಲದೆ ಅಲಂಕೃತ ಟಿಪ್ಪರ್, ಲಾರಿಗಳಲ್ಲಿಯೂ ನೂರಾರು ಮಂದಿ ರ್‍ಯಾಲಿಯಲ್ಲಿ ಆಗಮಿಸಿದ್ದರು.ಕೆಲವರು ಕಾರಿನ ಹಿಂಬದಿಯ ಡಿಕ್ಕಿಯಲ್ಲೂ ಕೂತು, ಕೆಲವರು ಕಾರುಗಳ ಬಾಗಿಲ ಮೇಲ್ಭಾಗದಲ್ಲಿ ಕುಳಿತು ಕೊಂಡಿರುವುದು ಕಂಡು ಬಂತು.ತಾಲೂಕಿನಾದ್ಯಂತ ಮಿಲಾದುನ್ನೆಬಿ ಆಚರಣೆ ನಡೆದಿದೆ.

LEAVE A REPLY

Please enter your comment!
Please enter your name here