ದುರ್ಗಾಂಬಾ ಪ.ಪೂರ್ವ ಕಾಲೇಜಿನ ಬಾಲಕಿಯರ ವಾಲಿಬಾಲ್, ಕಬಡ್ಡಿ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಆಲಂಕಾರು: ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಬಾಲಕಿಯರ ವಾಲಿಬಾಲ್, ಕಬಡ್ಡಿ ತಂಡ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ಸರಕಾರಿ ಪದವಿ ಪೂರ್ವ ಕಾಲೇಜು ಸವಣೂರಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಾಟದಲ್ಲಿ ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜು, ಅಲಂಕಾರಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ವಿದ್ಯಾರ್ಥಿಗಳಾದ ತೃಪ್ತಿ ಬಿ, ಅನುಷಾ ಎಮ್, ಧನ್ಯಶ್ರೀ, ದೀಕ್ಷಾ, ರೂಪಿಕ ಬಿ, ಕೃತಿ ಕೆ ಎಸ್, ಚೈತ್ರ, ಹರ್ಷ, ಹರ್ಷಿತ, ಶ್ರಾವ್ಯ ಐ, ಸಂದ್ಯಾ, ಅನಗಲಕ್ಷ್ಮಿ, ಲತೀಕ್ಷ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಪ್ರಜ್ಞಾ ಮತ್ತು ಮೈತ್ರಿ ಇವರು ತಂಡವನ್ನು ಪ್ರತಿನಿಧಿಸಿದ್ದರು. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಶ್ರೇಯಸ್ಸು ರೈ ತರಬೇತಿ ನೀಡಿದ್ದರು. ಹಿಂದಿ ಶಿಕ್ಷಕ ಮಹೇಶ್ ಲಮಾಣಿ ತಂಡದ ಮೇಲ್ವಿಚಾರಕರಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here