





ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ, ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದ ಸದಸ್ಯ ಸಂಸ್ಥೆ ಹಾಗೂ ಮಂಗಳೂರು ಪಬ್ಲಿಕ್ ಪದವಿಪೂರ್ವ ಕಾಲೇಜು ಹಾಸನ ಇದರ ಆಶ್ರಯದಲ್ಲಿ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಅಖಿಲ ಭಾರತೀಯ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಹನುಮಗಿರಿ ಈಶ್ವರಮಂಗಲ ಇಲ್ಲಿಯ 10ನೇ ತರಗತಿ ವಿದ್ಯಾರ್ಥಿನಿ ಸೃಷ್ಟಿ ಎಸ್ ಆರ್ ರೈ (ದೇಲಂಪಾಡಿ ನಿವಾಸಿ ರಘುನಾಥ ರೈ ಎಸ್ ಕೆ ಮತ್ತು ಮಲ್ಲಿಕಾ ಆರ್ ರೈ ಇವರ ಪುತ್ರಿ) ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಡಿಸೆಂಬರ್ ತಿಂಗಳ 12ರಿಂದ 17ನೇ ತಾರೀಕಿನವರೆಗೆ ಉತ್ತರ ಪ್ರದೇಶದಲ್ಲಿ ನಡೆಯುವ SGFI ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.



ಶಾಲಾ ಆಡಳಿತ ಮಂಡಳಿ, ಶಿಕ್ಷಕ-ರಕ್ಷಕ ಸಂಘ,ಶಾಲಾ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳ ಸಹಕಾರದೊಂದಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಶಾಂತ್ ರೈ ಹಾಗೂ ಹರ್ಷಿತ್ ಕೆ ಇವರು ತರಬೇತಿಯನ್ನು ನೀಡಿರುತ್ತಾರೆ.















