ಕೌಕ್ರಾಡಿ: ವಿದ್ಯುತ್ ತಂತಿ ಮೇಲೆ ಬಿದ್ದ ಮರ – 7 ಕಂಬ, ವಿದ್ಯುತ್ ತಂತಿಗೆ ಹಾನಿ

0

ನೆಲ್ಯಾಡಿ: ವಿದ್ಯುತ್ ತಂತಿ ಮೇಲೆ ಮರಬಿದ್ದ ಪರಿಣಾಮ ಸುಮಾರು 7 ವಿದ್ಯುತ್ ಕಂಬ ತುಂಡಾಗಿ ವಿದ್ಯುತ್ ತಂತಿಗಳೂ ಹಾನಿಗೊಂಡಿರುವ ಘಟನೆ ಕೌಕ್ರಾಡಿ ಗ್ರಾಮದ ಕಂಚರಮಕ್ಕಿ ಭಾಗದಲ್ಲಿ ಸೆ.3೦ರಂದು ಮಧ್ಯಾಹ್ನ ನಡೆದಿದೆ.
ಕೌಕ್ರಾಡಿ ಬೈಲು ದೈವಸ್ಥಾನದ ಬಳಿಯ ಟಿ.ಸಿಯಿಂದ ಹಾದು ಹೋಗಿರುವ ವಿದ್ಯುತ್ ಲೈನ್‌ನ ಮೇಲೆ ಅನ್ನುಗುಂಡಿ ವಸಂತ ಎಂಬವರಿಗೆ ಸೇರಿದ ಬೃಹತ್ ಮಾವಿನ ಮರವೊಂದು ಮುರಿದು ಬಿದ್ದಿದೆ. ಇದರಿಂದಾಗಿ ಸುಮಾರು 7 ವಿದ್ಯುತ್ ಕಂಬ ಹಾಗೂ ತಂತಿಗಳು ಹಾನಿಗೊಂಡಿದೆ. ವಾರಿಜ ಎಂಬವರ ಕೃಷಿ ಜಾಗಕ್ಕೆ ಮರ ಮುರಿದು ಬಿದ್ದಿರುವುದರಿಂದ ಕೃಷಿಯೂ ಹಾನಿಗೊಂಡಿದೆ ಎಂದು ವರದಿಯಾಗಿದೆ. ವಿದ್ಯುತ್ ಕಂಬ ತುಂಡಾಗಿರುವುದರಿಂದ ಈ ಭಾಗದ ಸುಮಾರು 6 ಮನೆಗಳಿಗೆ ವಿದ್ಯುತ್ ಪೂರೈಕೆಗೆ ಅಡಚಣೆಯುಂಟಾಗಿದೆ.

LEAVE A REPLY

Please enter your comment!
Please enter your name here