ಕಾಣಿಯೂರು: ಬೆಳಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯುಎಸಿ ಮತ್ತು ಉದ್ಯೋಗ ಭರವಸಾ ಕೋಶ ಹಾಗೂ ನಾಂದಿ ಫೌಂಡೇಷನ್(ಮಹೇಂದ್ರ ಪ್ರೈಡ್ ಕ್ಲಾಸ್ ರೂಂ) ಸಹಯೋಗದಲ್ಲಿ ವಿದ್ಯಾರ್ಥಿನಿಯರಿಗಾಗಿ ಆರು ದಿನಗಳ ಔದ್ಯೋಗಿಕ ಕೌಶಲ್ಯ ತರಬೇತಿ ಕಾರ್ಯಕ್ರಮ ನಡೆಯಿತು.
ಕಾಲೇಜಿನ ಹಿತೈಷಿ ವಚನಾ ಪ್ರದೀಪ್ ಅರುವಗುತ್ತು ಅವರು ದೀಪ ಬೆಳಗಿಸಿ ಉದ್ಘಾಟಿಸಿ,ಪ್ರಸ್ತುತ ಕಾಲಮಾನದಲ್ಲಿ ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸಿಕೊಳ್ಳಲು ಹೊಂದಬೇಕಾದ ಮೌಲ್ಯಗಳು ಕೌಶಲ್ಯಗಳ ಬಗ್ಗೆ ತಿಳಿ ಹೇಳಿ ಪ್ರತಿ ವಿದ್ಯಾರ್ಥಿಗಳು ತಮ್ಮದೇ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದುವ ಮೂಲಕ ಸಾಧನೆ ಮಾಡುವಂತೆ ಪ್ರೇರಿಪಿಸಿದರು. ನಾಂದಿ ಫೌಂಡೇಷನ್ ನ.ಚಂದ್ರಶೇಖರ ಅರೂರ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಬೆಳಂದೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಂಕರ ಭಟ್ ಪಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಐಕ್ಯುಎಸಿ ಮತ್ತು ಉದ್ಯೋಗ ಭರವಸಾ ಕೋಶದ ಸಂಚಾಲಕ ಸ್ವಾಮಿ.ಎಸ್ ಪ್ರಸ್ತಾವನೆಗೈದರು.
ವಿದ್ಯಾರ್ಥಿಗಳಾದ ಕು.ಕೀರ್ತನಾ ಸ್ವಾಗತಿಸಿ ಕು.ಸುಸ್ಮಿತಾ ವಂದಿಸಿದರು.ಕು.ಅಕ್ಷಯಾ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿ ನಾಂದಿ ಫೌಂಡೇಷನ್ ನ.ಚಂದ್ರಶೇಖರ ಅರೂರ ತರಬೇತಿ ನೀಡಿದರು.