ಅಕ್ಷಯ ಕಾಲೇಜಿನಲ್ಲಿ ಫ್ಯಾಷನ್ ಡಿಸೈನ್ ಸಂಘ “FACERA”ದ ಉದ್ಘಾಟನೆ

0

ಸಂಪ್ಯ: ಅಕ್ಷಯ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಫ್ಯಾಷನ್ ಡಿಸೈನ್ ವಿಭಾಗ ಮತ್ತು ಐಕ್ಯುಎಸಿ ಇದರ ಸಹಯೋಗದೊಂದಿಗೆ FACERA ಫ್ಯಾಷನ್ ಡಿಸೈನ್ ಅಸೋಸಿಯೇಷನ್ ಉದ್ಗಾಟನಾ ಸಮಾರಂಭವು ನಡೆಯಿತು.
ದೀಪಕ್ ಗಂಗೂಲಿ ಮಾಲಕರು Pathway Enterprises, ಮಂಗಳೂರು ಇವರು FACERA ಫ್ಯಾಷನ್ ಡಿಸೈನ್ ಸಂಘವನ್ನು ಉದ್ಘಾಟಿಸಿ, ಪ್ರಸ್ತುತ ಕಾಲಘಟ್ಟದಲ್ಲಿ ಫ್ಯಾಷನ್ ಎಂಬುದು ಅತೀ ಮುಖ್ಯ ಅದೇ ರೀತಿ ಈ ಕ್ಷೇತ್ರದಲ್ಲಿ ಒಳ್ಳೆ ಭವಿಷ್ಯ ಇದೆ ಎಂದು ಹೇಳುತ್ತಾ FACERA ಸಂಘಕ್ಕೆ ಶುಭ ಹಾರೈಸಿದರು. ಬಳಿಕ Vanzova Facito ಸೀಸನ್ -1 ಫ್ಯಾಷನ್ ಶೋವನ್ನು ಕನ್ನಡ ಚಿತ್ರ ನಟ ಆರ್ಯನ್ ಅವರು ಉದ್ಘಾಟಿಸಿ ಮಾತನಾಡಿ, ಚಿತ್ರ ರಂಗದಲ್ಲಿ ಫ್ಯಾಷನ್ ಎಂಬುದು ಬಹುಪಾಲು ವಹಿಸಿದೆ, ಹಾಗೆಯೇ ಈ ಕಾಲೇಜಿನಿಂದ  ಫ್ಯಾಷನ್ ರಂಗಕ್ಕೆ ಇನಷ್ಟು ಪ್ರತಿಭೆಗಳು ಮೂಡಿ ಬರಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಯಂತ್ ನಡುಬೈಲು ಇವರು Aqiula ಬ್ಲಾಗ್ ಪೇಜ್ ಅನ್ನು ಉದ್ಘಾಟಿಸಿ ಶುಭ ಕೋರಿದರು.ಬಳಿಕ ಮಿಸ್ಟರ್ ಕರ್ನಾಟಕ ಸ್ಪರ್ಧೆಯಲ್ಲಿ ವಿಜೇತರಾದ ವಚನ್.ಎಸ್ ರವರಿಗೆ ಗೌರವಿಸಲಾಯಿತು.

ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್, ಪ್ರಾಂಶುಪಾಲರು ಸಂಪತ್ ಕೆ ಪಕ್ಕಳ, ಫ್ಯಾಷನ್ ಡಿಸೈನ್ ವಿಭಾಗದ ಮುಖ್ಯಸ್ಥರಾದ ಕಿಶನ್ ಎನ್ ರಾವ್,  ಅಸೋಸಿಯೇಷನ್ ಸಂಯೋಜಕಿ ದೀಪ್ತಿ, ಇವರು ಉಪಸ್ಥಿತರಿದ್ದರು. ಅಸೋಸಿಯೇಷನ್ ಅಧ್ಯಕ್ಷೆ ವಿದ್ಯಾಶ್ರೀ ಸ್ವಾಗತಿಸಿ,ಫ್ಯಾಷನ್ ಡಿಸೈನ್ ವಿಭಾಗದ ಮುಖ್ಯಸ್ಥ ಕಿಶನ್ ಎನ್ ರಾವ್ ಪ್ರಾಸ್ತಾವಿಕ ಮಾತನಾಡಿದರು ಕಾರ್ಯದರ್ಶಿ ಶ್ರದ್ದಾ ವಂದಿಸಿದರು. ಧಕ್ಷಿತಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here