ಅ.7ರಿಂದ ಕಲ್ಲೇಗದಲ್ಲಿ ಉಚಿತ ಯೋಗಶಿಕ್ಷಣ ತರಗತಿ ಪ್ರಾರಂಭ

0

ಪುತ್ತೂರು: ಎಸ್‌ಪಿವೈಎಸ್‌ಎಸ್ ಕರ್ನಾಟಕ ನೇತ್ರಾವತಿ ವಲಯ, ಶ್ರೀ ಭಾರತ್ ಮಾತಾ ಸಮುದಾಯ ಭವನ ಕಲ್ಲೇಗ ನೆಹರುನಗರ ಇವರ ಸಹಯೋಗದೊಂದಿಗೆ ಉಚಿತ ಯೋಗ ಶಿಕ್ಷಣ ತರಗತಿ ನೆಹರುನಗರ ಕಲ್ಲೇಗ ಶ್ರೀ ಭಾರತ್ ಮಾತಾ ಸಮುದಾಯ ಭವನದಲ್ಲಿ ಅ.7ರಂದು ಬೆಳಿಗ್ಗೆ 6 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ತರಗತಿಯು 48 ದಿನಗಳ ಕಾಲ ಬೆಳಿಗ್ಗೆ 5 ಗಂಟೆಯಿಂದ 6.30 ಗಂಟೆಯವರೆಗೆ ನಡೆಯಲಿದೆ. ಮಧುಮೇಹ, ರಕ್ತದೊತ್ತಡ, ಬೊಜ್ಜಿನ ಸಮಸ್ಯೆ, ಮೂಲವ್ಯಾಧಿ, ಆಸಿಡಿಟಿ, ಅಜೀರ್ಣ, ಸಂಧಿವಾತ, ನಿದ್ರಾಹೀನತೆ, ವಾತರೋಗ, ಮಾನಸಿಕ ಒತ್ತಡ, ಮಂಡಿನೋವು ಮತ್ತು ಬೆನ್ನುನೋವು ಇವುಗಳಿಗೆ ಸೂಕ್ತ ಚಿಕಿತ್ಸಾಕ್ರಮವನ್ನು ಯೋಗದ ಮೂಲಕ ನೀಡಿ ಗರಿಷ್ಟ ಪ್ರಮಾಣದಲ್ಲಿ ನಿಯಂತ್ರಿಸಬಹುದು. ಕೇಂದ್ರ ಸಮಿತಿಯಿಂದ ತರಬೇತಿ ಪಡೆದ ಶಿಕ್ಷಕರಿಂದ ತರಗತಿಗಳನ್ನು ನಡೆಸಲಾಗುವುದು. 10ರಿಂದ ಮೇಲ್ಪಟ್ಟ ಎಲ್ಲಾ ವಯಸ್ಸಿನವರು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9449318792, 9449332306, 9845207443 ಸಂಪರ್ಕಿಸಬಹುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here