ನೆಲ್ಯಾಡಿ: ಶಿರಾಡಿ ಗ್ರಾಮ ಪಂಚಾಯತದ 2022-23ನೇ ಜಮಾಬಂಧಿ ಸಭೆ ಅ.12 ರಂದು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು.
ಪುತ್ತೂರು ಉಪ ವಿಭಾಗದ ಪಂಚಾಯತ್ ರಾಜ್ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಭರತ್ ಬಿ.ಎಂ.ಅವರು ಜಮಾಬಂಧಿ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟರು. ಗ್ರಾಮ ಪಂಚಾಯತ್ ವತಿಯಿಂದ 2022-23 ನೇ ಸಾಲಿನಲ್ಲಿ ನಡೆದ ಕಾಮಗಾರಿಗಳ ಲೆಕ್ಕ ಪತ್ರ ಪರಿಶೀಲನೆ ಸಭೆಯಲ್ಲಿ ಮಾಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾರ್ತಿಕೇಯನ್ ಕೆ.ಎನ್.ಅವರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವಿನಿತ ಎಂ.ಬಿ.ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸದಸ್ಯರಾದ ಸಣ್ಣಿ ಜಾನ್, ಲಕ್ಷ್ಮಣ ಕುದ್ಕೋಳಿ, ಸುಮಿತ್ರಾ , ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಯಶವಂತ ಬೆಳ್ಚಡ ಅವರು ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಶಾರದ ಪಿ.ಎ., ವರದಿ ವಾಚಿಸಿದರು. ಸಿಬ್ಬಂದಿಗಳಾದ ಏಲಿಯಾಸ್ ಕೆ.ಸಿ., ರಮ್ಯ, ಸ್ಮಿತಾಮನೋಜ್, ವಿಜಯಕುಮಾರಿ, ವಿಆರ್ ಡಬ್ಲ್ಯೂ ಸುನಿಲ್,ಗ್ರಂಥಾಲಯ ಮೇಲ್ವಿಚಾರಕಿ ರೇಖಾ, ನೀರು ನಿರ್ವಾಹಕ ತೋಮಸ್ ವಿ.ಎ., ಸಹಕರಿಸಿದರು. ಸಭೆಯ ಬಳಿಕ ಶಿರ್ವತ್ತಡ್ಕ ಘನತ್ಯಾಜ್ಯ ಘಟಕ, ಬಾಗಿಲುಗದ್ದೆ ಪ.ಜಾತಿ ಕಾಲೋನಿ ರಸ್ತೆ ಕಾಂಕ್ರಿಟೀಕರಣ ಹಾಗೂ ಎಂಜಿಎಂ ಅಪ್ಪಾರ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಪರಿಶೀಲನೆ ಮಾಡಲಾಯಿತು.