ಪುತ್ತೂರು: “ಮಿಡಿತ” ಕನ್ನಡ ಕಿರುಚಿತ್ರದ ಪೋಸ್ಟರ್ ಅನ್ನು ಪ್ರಜ್ಞಾ ಆಶ್ರಮದ ಮಕ್ಕಳಿಂದ ಬಿಡುಗಡೆಗೊಳಿಸಲಾಯಿತು.ಸಮಾಜಕ್ಕೆ ಉತ್ತಮ ಸಂದೇಶವಿರುವ ಸಂಬಂಧವನ್ನು ಬೆಸೆಯುವ ಕಥೆಯುಳ್ಳ ಮಿಡಿತ ಕನ್ನಡ ಕಿರುಚಿತ್ರವು Talkies ಕನ್ನಡ You Tube channel ನಲ್ಲಿ ಅ. 14ರಂದು ಸಂಜೆ 6ಗಂಟೆಗೆ ಬಿಡುಗಡೆಗೊಳ್ಳಲಿದೆ,ಇದರ ಸಾಂಕೇತಿಕ ಬಿಡುಗಡೆಯನ್ನು ಪ್ರಜ್ಞಾ ಆಶ್ರಮ ಬಿರುಮಲೆಯಲ್ಲಿ ವಿಶೇಷ ಚೇತನ ಮಕ್ಕಳಿಂದ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಪ್ರಜ್ಞಾ ಆಶ್ರಮದ ಅಣ್ಣಪ್ಪ ಹಾಗೂ ಜ್ಯೋತಿ ದಂಪತಿಗಳು, ಹಾಗೂ ಚಿತ್ರ ತಂಡದ ಸುಶಾಂತ್ ಆಚಾರ್ಯ ಮರೀಲ್, ಡಿ .ಕೆ ಶೇಷಪ್ಪ ಪೂಜಾರಿ ಪುರುಷರಕಟ್ಟೆ ,ಜಗದೀಶ್ ಶೆಟ್ಟಿ ಕೆರೆಮೂಲೆ, ವೆಂಕಪ್ಪ ಬರೆಪ್ಪಾಡಿ,ಪ್ರವೀಣ್ ಕುಮಾರ್ ಮುಲಾರ್, ಸೂರಜ್ ಶೆಟ್ಟಿ ಪಂಜಳ ,ವಿಕ್ರಮ್ ನಾಯಕ್, ದೀಪಕ್ ಆಚಾರ್ಯ, ಉಮೇಶ್ S.K , ಪ್ರಜ್ವಲ್ ಶೆಟ್ಟಿ ತಿಂಗಳಾಡಿ,ಅನುಪ್ತ ರವಿಚಂದ್ರ ರೈ ಹಾಗೂ ಮುರಳೀದರ ಆಚಾರ್ಯ ಸಂಪ್ಯ,ವಿಲ್ಸನ್ ಮರೀಲ್, ಮೋಕ್ಷಿತ್ ಮತ್ತು ಯತಿನ್ ಉಪಸ್ಥಿತರಿದ್ದರು.
ಚಿತ್ರದ ನಿರ್ದೇಶಕ ರವಿಚಂದ್ರ ರೈ ಮುಂಡೂರು ಚಿತ್ರದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜಕ್ಕೆ ಉತ್ತಮ ಸಂದೇಶವುಳ್ಳ ಚಿತ್ರವು ನಿಮ್ಮ ಮುಂದೆ ಬರುತ್ತಿದೆ, ಕಲಾಭಿಮಾನಿಗಳೇ ನಮ್ಮ ಸ್ಟಾರ್ ಪ್ರಚಾರಕರು ಎಂಬ ದ್ಯೇಯದೊಂದಿಗೆ ಈ ಸಲ ನಾವು ಈ ಚಿತ್ರದ ಪ್ರಚಾರ ಮಾಡಿದ್ದು ,ಅಜ್ಜನ ಮಾಯೆ ಚಿತ್ರಕ್ಕೆ ಕೊಟ್ಟಂತಹ ಬೆಂಬಲ ಈ ಚಿತ್ರಕ್ಕಿರಲಿ ಎಂದು ಕೇಳಿಕೊಂಡರು .ಚಿತ್ರದ ಮುಖ್ಯ ಪಾತ್ರಧಾರಿ ಡಿ ಕೆ ಶೇಷಪ್ಪ ಪೂಜಾರಿ ಚಿತ್ರದ ಬಗ್ಗೆ ಮಾತನಾಡಿದರು, ಪ್ರಜ್ಞಾ ಆಶ್ರಮದ ಅಣ್ಣಪ್ಪ ಶುಭ ಹಾರೈಸಿದರು .ಉಮೇಶ್ ಅವರು ಕಾರ್ಯಕ್ರಮ ನಿರೂಪಿಸಿದರು ..
ಇನ್ಸ್ಫೈರ್ ಚಿತ್ರತಂಡದ ಅಜ್ಜನಮಾಯೆ ಖ್ಯಾತಿಯ ರವಿಚಂದ್ರ.ರೈ.ಬಿ ಮುಂಡೂರು ಕಥೆ-ಚಿತ್ರಕಥೆ-ನಿರ್ದೇಶನದ, ಕಾಂತಾರ ಖ್ಯಾತಿಯ ಚಲನಚಿತ್ರ ನಟ ಪ್ರಕಾಶ್.ಕೆ.ತುಮಿನಾಡು ರವರ ಸಲಹೆ ಸಹಕಾರವಿರುವ ಈ ಕಿರುಚಿತ್ರದಲ್ಲಿ ಪ್ರಕಾಶ್ ತುಮಿನಾಡು ಅವರ ಮಗ ಖುಷಿತ್ ತುಮಿನಾಡು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು ಈ ಚಿತ್ರಕ್ಕೆ ಸೂರಜ್ ಪಂಜಳ ರವರ ಕ್ಯಾಮರ ವರ್ಕ್, ಪ್ರಜ್ವಲ್ ಇವರ ಡ್ರೋನ್ ಕ್ಯಾಮರ, ರವಿ ಸಿಂಗೇರಿ ಹಾಗೂ ಅನುಪ್ತ.ಶೆಟ್ಟಿ ಯವರ ಪ್ರಸಾದನ, ವಿಕ್ರಮ್ ನಾಯಕ್ ರವರ ಸಂಕಲನ,ಚೇತನ್ ಮೊಟ್ಟೆತಡ್ಕ ರವರ ಸಾಹಿತ್ಯ,ದೀಪಕ್ ಆಚಾರಿ ಅವರ ಟೈಟಲ್,ವಿಜಯಶ್ರೀ ಮುಳಿಯ ರವರ ಗಾಯನ,ಸವಿ ಸಂಗೀತ ಸ್ಟುಡಿಯೋ ರವರ ಸಂಗೀತ ಈ ಚಿತ್ರಕ್ಕಿದೆ. ಈ ಚಿತ್ರಕ್ಕೆ ಧ್ವನಿ ಮುದ್ರಣ CAD Media ಮಂಗಳೂರು ಮಾಡಿದ್ದಾರೆ .
ಈ ಚಿತ್ರದಲ್ಲಿ ಹರೀಶ್ ಆಲಂಗಾಜೆ, ಡಿ.ಕೆ.ಶೇಷಪ್ಪ ಪೂಜಾರಿ ಪುರುಷರಕಟ್ಟೆ, ವಿಜಯ ಅತ್ತಾಜೆ, ರಮಿತಾ ರಾವ್, ಪ್ರವೀಣ್ ಮುಲಾರ್, ವೆಂಕಪ್ಪ ಬರೆಪಾಡಿ, ಜಗದೀಶ್.ಶೆಟ್ಟಿ ಕೆರೆಮೂಲೆ, ಉಮೇಶ್.ಎಸ್.ಕೆ, ಪ್ರತೀಕ್ ತುಮಿನಾಡು ಅಭಿನಯಿಸಿದ್ದಾರೆ.ಸುಶಾಂತ್ ಮರೀಲ್ ಇವರ ಸಹಕಾರ ಚಿತ್ರತಂಡ ತಿಳಿಸಿದೆ.