ನಾಳೆ(ಅ.15): ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಪುನರುತ್ಥಾನ ಕಾರ್ಯ ಕ್ಕೆ ಭಕ್ತರ ಮಹಾಸಭೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಹಲವು ಮಹತ್ವದ ಪುನರುತ್ಥಾನದ ಕಾರ್ಯಗಳು ಪ್ರಗತಿಯಲ್ಲಿದ್ದು ಇದೀಗ ಅನ್ನಛತ್ರ ನಿರ್ಮಾಣ, ಪುಷ್ಕರಣಿಯ ಪುನರುತ್ಥಾನ ನಿಧಿ ಸಂಚಯನ ಕುರಿತು ಭಕ್ತರ ಮಹಾಸಭೆಯು ಅ.15ರಂದು ಬೆಳಗ್ಗೆ ದೇವಳದ ಕಚೇರಿಯಲ್ಲಿ ನಡೆಯಲಿದೆ.

ಈಗಾಗಲೇ ರೂ.33 ಲಕ್ಷ ವೆಚ್ಚದಲ್ಲಿ ಶಿಲಾಮಯ ವರುಣ ಮಂಟಪ, ರೂ.35ಲಕ್ಷದಲ್ಲಿ ಮಹಾಲಿಂಗೇಶ್ವರ ಸಭಾಭವನದ ನವೀಕರಣ, ರೂ.95ಲಕ್ಷ ವೆಚ್ಚದಲ್ಲಿ ಅನ್ನಛತ್ರ ನೆಲಅಂತಸ್ತು ನಿರ್ಮಾಣ, ರೂ.29ಲಕ್ಷ ವೆಚ್ಚದಲ್ಲಿ ಘನತ್ಯಾಜ್ಯ ಘಟಕ, ದಾನಿಗಳ ನೆರವಿನಿಂದ ರೂ.15ಲಕ್ಷ ವೆಚ್ಚದಲ್ಲಿ ವೀರಮಂಗಲ ಕಟ್ಟೆ ನವೀಕರಣ, ಶಾಸಕರ ಮೂಲಕ ಸಣ್ಣನೀರಾವರಿ ಇಲಾಖೆಯಿಂದ ರೂ.50 ಲಕ್ಷ ವೆಚ್ಚದಲ್ಲಿ ವೀರಮಂಗಲ ತಡೆಗೋಡೆ, ರೂ.30 ಲಕ್ಷ ವೆಚ್ಚದಲ್ಲಿ ದೇವಸ್ಥಾನದ ಬಳಿಯ ರಾಜಕಾಲುವೆ ತಡೆಗೋಡೆ ನಿರ್ಮಾಣ ಪೂರ್ಣಗೊಂಡಿದೆ. ಇದಲ್ಲದೆ ಇನ್ನಷ್ಟು ಸಣ್ಣಮಟ್ಟದ ಕಾಮಗಾರಿಗಳು ಸೇರಿ ದೇವಳದ ಆದಾಯದಿಂದ ಈಗಾಗಲೇ ಸುಮಾರು ರೂ.2 ಕೋಟಿಗೂ ಮಿಕ್ಕಿ ಕಾಮಗಾರಿಗಳನ್ನು ಮಾಡಲಾಗಿದೆ. ಶಾಸಕರ ಅನುದಾನದಿಂದ ರೂ. 80 ಲಕ್ಷ, ನಗರಾಭಿವೃದ್ಧಿ ಯೋಜನಪ್ರಾಧಿಕಾರದಿಂದ ಕೆರೆ ಅಭಿವೃದ್ಧಿಗೆ ರೂ. 35ಲಕ್ಷ ಖರ್ಚು ಮಾಡಲಾಗಿದೆ. ಇನ್ನಷ್ಟು ಅಭಿವೃದ್ಧಿಗೆ ಸಂಪನ್ಮೂಲ ಕ್ರೋಢೀಕರಣಕ್ಕೆ ಪುತ್ತೂರು ಸೀಮೆಯ ಭಕ್ತರ ಸಹಯೋಗ ಅಗತ್ಯವಿದೆ. ಈ ನಿಟ್ಟಿಲ್ಲಿ ಭಕ್ತರು ಅ.15ರಂದು ಬೆಳಿಗ್ಗೆ ಗಂಟೆ 10ರ ನಂತರ ಸಂಸದರು , ಶಾಸಕರು, ನಿಕಟಪೂರ್ವ ಶಾಸಕರ ಹಾಗೂ ಪುತ್ತೂರಿನ ಹಿಂದು ಬಾಂಧವರ ಉಪಸ್ಥಿತಿಯಲ್ಲಿ ದೇವಳದ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಸಲಹೆ ಸೂಚನೆ ನೀಡುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮಳಿಯ ಮತ್ತು ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here