ವಲಯ ಮಟ್ಟದ ಕ್ರೀಡಾಕೂಟ: ಫಿಲೋಮಿನಾ ಪ್ರೌಢಶಾಲಾ ವಿದ್ಯಾರ್ಥಿಗಳ ತಂಡಕ್ಕೆ ಸಮಗ್ರ ಪ್ರಶಸ್ತಿ

0

ಪುತ್ತೂರು: ‌ಕರ್ನಾಟಕ ಸರಕಾರ, ಶಾಲಾ ಶಿಕ್ಷಣ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕುಡಿಪಾಡಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಇವರ ವತಿಯಿಂದ ನಡೆದ ಪುತ್ತೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಂತ ಫಿಲೋಮಿನಾ ಪ್ರೌಢಶಾಲಾ 14ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಫಿಲೋಮಿನಾ ಪ್ರೌಢಶಾಲಾ ವಿದ್ಯಾರ್ಥಿಗಳ ತಂಡಕ್ಕೆ ಸಮಗ್ರ ಪ್ರಶಸ್ತಿ ಹಾಗೂ 17ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ನಿಪೇಶ್ ವೈಯಕ್ತಿಕ ಚಾಂಪಿಯನ್ ಪಡೆದುಕೊಂಡಿದ್ದಾರೆ.


17ರ ವಯೋಮಿತಿಯ ವಿಭಾಗದಲ್ಲಿ ನಿಪೇಶ್ ಜಾವಲಿನ್ ಎಸೆತ ಚಿನ್ನ ಹಾಗೂ ಗುಂಡು ಎಸೆತ ಚಿನ್ನ. ಮೊಹಮ್ಮದ್ ಫೌಂಜನ್ 100 ಮೀಟರ್ ಬೆಳ್ಳಿ, ರೋಹನ್ ಬೋಪಣ್ಣ 200 ಮೀಟರ್ ಮತ್ತು 400 ಮೀಟರ್ ನಲ್ಲಿ ಬೆಳ್ಳಿ, ಪ್ರಿನ್ಶನ್ ಡಿಸೋಜಾ 1500 ಮೀಟರ್ ಕಂಚು, ಶಾನ್ ಶವನ್ ಉದ್ದ ಜಿಗಿತದಲ್ಲಿ ಕಂಚು, ನಿಶ್ಚಿತ್ ಉದ್ದ ಜಿಗಿತ ಬೆಳ್ಳಿ, ಎತ್ತರ ಜಿಗಿತ ಕಂಚು, ದಿಶಾನ್ ಜಾವೆಲಿನ್ ಎಸೆತ ಕಂಚಿನ ಪದಕ. ಜೀವಿತ ಉದ್ದ ಜಿಗಿತ ಬೆಳ್ಳಿ ಪದಕ 17ರ ವಯೋಮಿತಿಯ ರಿಲೇ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದುಕೊಂಡಿರುತ್ತಾರೆ.
14ರ ವಯೋಮಿತಿಯ ವಿಭಾಗದಲ್ಲಿ ಯಶ್ವಿತ್ 100 ಮೀಟರ್, 200 ಮೀಟರ್, 400 ಮೀಟರ್ ವಿಭಾಗದಲ್ಲಿ ಬೆಳ್ಳಿಯ ಪದಕ. ಮೊಹಮ್ಮದ್ ಸುಫೈ ಎತ್ತರ ಜಿಗಿತ ಚಿನ್ನದ ಪದಕ, ಶಾನ್ ಜೋಸೆಫ್, ಮೌಶಿಲ್, ತರುಣ್ ರಿಲೇ ವಿಭಾಗದಲ್ಲಿ ಚಿನ್ನದ ಪದಕ.
ಬಾಲಕಿಯರ ವಿಭಾಗದ ರಿಲೇ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.ಈ ಮೇಲಿನ ವಿದ್ಯಾರ್ಥಿಗಳು ಅ. 26 ಮತ್ತು 27ರಂದು ನಡೆಯುವ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here