ಹಿಂದೂ ಸಮಾಜದ ಒಗ್ಗಟ್ಟಿಗೆ ಶಕ್ತಿ‌ಯಾರಾಧನೆ ಅಗತ್ಯ – ಸಂಪ್ಯ ಪುತ್ತೂರು ದಸರಾ ಮಹೋತ್ಸವದಲ್ಲಿ ಕಿಶೋರ್ ಬೊಟ್ಯಾಡಿ

0

ಪುತ್ತೂರು: ರಾಜಕೀಯ, ಜಾತಿ‌ ಕಾರಣ ಇರಬಹುದು ಬೇರೆ ಬೇರೆಯಾಗಿ ವಿಭಾಗವಾಗಿ ಹೋಗಿದ್ದೇವೆ. ಅವರನ್ನೆಲ್ಲ ಒಂದು ಮಾಡಬೇಕಾದರೆ ಇಂತಹ ಶಕ್ತಿ ಆರಾಧಾನೆಯ ಧಾರ್ಮಿಕ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಹಿಂದು ಸಂಘಟನೆಗಳ ಮುಖಂಡ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು.
ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಪುತ್ತೂರು ದಸರಾ ಮಹೋತ್ಸವದ 2ನೇ ದಿನವಾದ ಅ.16ರಂದು ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಧಾರ್ಮಿಕ ಸಭೆಯ ಮೂಲಕ ಒಗ್ಗಟ್ಡಿನ ಸೂಚನೆ ಸಿಗುತ್ತದೆ. ಹಿಂದು ಸಮಾಜ ಒಗ್ಗಟ್ಟಾಗಲು ತಾಯಂದಿರ ಮನಸ್ಸು ಅಗತ್ಯ. ಈ ನಿಟ್ಟಿನಲ್ಲಿ ಹಿಂದು ಸಮಾಜ ಎಲ್ಲಾ ಬೇಧಬಾವ ಬಿಟ್ಟು ಒಗ್ಗಟ್ಟಾಗಿ ಜೀವಿಸಬೇಕು. ಇದಕ್ಕಾಗಿ ಶಕ್ತಿಯ ಆರಾಧನೆ
ನವದುರ್ಗೆಯರನ್ನು ಪೂಜೆ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣವಾಗಲಿ ಎಂದರು.
ಕೋಲ್ಪೆ ರಾಜರಾಮ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ದಸರಾ ಉತ್ಸವ ಸಮಿತಿ ಸಾಂಸ್ಕ್ರತಿಕ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಸ್ವಾಗತಿಸಿ, ಸಮಿತಿ ಪ್ರಧಾನ ಕಾರ್ಯದರ್ಶಿ ಉಮೇಶ್ ಎಸ್ ಕೆ ವಂದಿಸಿದರು. ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸುನಾದ ಕಲಾ ಶಾಲೆಯ ವಿದ್ವಾನ್ ಈಶ್ವರ ಭಟ್ ಅವರ ಶಿಷ್ಯರಿಂದ ಶಾಸ್ತ್ರೀಯ ಸಂಗೀತ ನಡೆಯಿತು.

LEAVE A REPLY

Please enter your comment!
Please enter your name here