ಕಾಣಿಯೂರು: ಕಾಣಿಯೂರು ಗ್ರಾಮ ಪಂಚಾಯತ್ ನಲ್ಲಿ ಸ್ವಚ್ಛ ಸಂಕೀರ್ಣ ಘನ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ಕಾರ್ಯಾರಂಭಗೊಂಡಿದ್ದು, ಸ್ವಚ್ಛ ಸಂಕೀರ್ಣ ವಾಹನದ ಕೀ ಯನ್ನು ಕಾಣಿಯೂರು ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಕೊಪ್ಪ ಅವರು ಕಾಣಿಯೂರು ಉಜ್ವಲ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಸುಚಿತ್ರಾ ಕಟ್ಟತ್ತಾರು ಅವರಿಗೆ ಕಾಣಿಯೂರು ಗ್ರಾ. ಪಂ. ಸಭಾಂಗಣದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಪಂಚಾಯತ್ ಅಭಿವೃದ್ದಿ ಅಧಿಕಾರಿ ದೇವರಾಜ್, ಸದಸ್ಯರಾದ ಗಣೇಶ್ ಉದನಡ್ಕ, ರಾಮಣ್ಣ ಗೌಡ ಮುಗರಂಜ, ಪ್ರವೀಣ್‌ಚಂದ್ರ ರೈ ಕುಮೇರು, ವಸಂತ ಪೆರ್ಲೋಡಿ, ದೇವಿಪ್ರಸಾದ್ ದೋಳ್ಪಾಡಿ, ಲೋಕಯ್ಯ ಪರವ ದೋಳ್ಪಾಡಿ, ತಾರಾನಾಥ ಇಡ್ಯಡ್ಕ, ಲಲಿತಾ ದರ್ಖಾಸು, ಸುನಂದ ಅಬ್ಬಡ, ಕೀರ್ತಿಕುಮಾರಿ ಅಂಬುಲ, ತೇಜಕುಮಾರಿ ಉದ್ಲಡ್ಡ, ಸುಲೋಚನಾ ಮಿಯೋಳ್ಪೆ, ಅಂಬಾಕ್ಷಿ ಕೂರೇಲು, ಮೀರಾ, ಎಂ.ಬಿ. ಕೆ ಸುಮನಾ,ಎಲ್.ಸಿ. ಆರ್.ಪಿ ಚಂದ್ರಿಕಾ ಹಾಗೂ, ಒಕ್ಕೂಟದ ಪದಾಧಿಕಾರಿಗಳು, ಗ್ರಾ. ಪಂ.ಸಿಬ್ಬಂದಿಗಳು ಉಪಸ್ಥಿತರಿದ್ದರು.