





ಪುತ್ತೂರು: ನವರಾತ್ರಿ ಉತ್ಸವದ ಪ್ರಯುಕ್ತ ಶಿವನಗರದ ಬಿಂಗಾರ ಮಜಲು ರಕ್ತೇಶ್ವರಿ ದೇವಸ್ಥಾನದಲ್ಲಿ ಶಿವಮಣಿ ಭಜನಾ ತಂಡದಿಂದ 44ನೇ ಭಜನಾ ಸಂಗಮ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಪ್ರಮುಖ ಭಜಕರಾದ ಅರುಣ , ಶ್ರೀಮಾನ್ ಘಾಟೆ, ವಿನೋದ್ ಆಚಾರ್ಯ ಹಾಗೂ ಶಿವಮಣಿ ಕಲಾಸಂಘದ ಅಧ್ಯಕ್ಷ ಸುದರ್ಶನ್ ಪುತ್ತೂರು, ಉಪಾಧ್ಯಕ್ಷ ಕಲಾವಿದ ಕೃಷ್ಣಪ್ಪ ,ಜೊತೆ ಕಾರ್ಯದರ್ಶಿ ನಳಿನಿ ಶ್ರೀಧರ್ ಹಾಗೂ ಕಲಾಪೋಷಕರಾದ ಶಾರದಾ ಶಿವಮಣಿಯ ಬಾಲ ಕಲಾವಿದರು, ಮಕ್ಕಳ ಪೋಷಕರು ಭಾಗವಹಿಸಿದ್ದರು. ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತಾಭಿಮಾನಿಗಳು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.











