ಗಾನಸಿರಿಯಲ್ಲಿ ವಿಜಯದಶಮಿ ಪ್ರಯುಕ್ತ ವಿಶೇಷ ವಿದ್ಯಾರಂಭ ಮತ್ತು ಭಜನಾ ಸೇವೆ

0

ಪುತ್ತೂರು: ಕಳೆದ 21 ವರ್ಷಗಳ ಕಲಾ ಸೇವೆಯಲ್ಲಿ ದಾಖಲೆಯ 28 ಸಾವಿರ ವಿದ್ಯಾರ್ಥಿಗಳಿಗೆ ಗಾಯನ ತರಬೇತಿ ನೀಡಿದ ಕರ್ನಾಟಕದ ಹೆಸರಾಂತ ಸಂಗೀತ ಸಂಸ್ಥೆ ಗಾನಸಿರಿ ಕಲಾ ಕೇಂದ್ರದ ಪುತ್ತೂರು ಶಾಖೆಯಲ್ಲಿ ಅಕ್ಟೋಬರ್ 24 ರಂದು ವಿಜಯ ದಶಮಿ ಪ್ರಯುಕ್ತ ವಿಶೇಷವಾಗಿ ವಿದ್ಯಾರ್ಥಿಗಳಿಂದ ಶಾರದಾ ಪೂಜೆ, ಗುರುವಂದನೆ ಮತ್ತು ಹೊಸದಾಗಿ ಸೇರಲಿಚ್ಭಿಸುವ ವಿದ್ಯಾರ್ಥಿಗಳಿಗೆ ವಿದ್ಯಾರಂಭ ಮತ್ತು ದಾಖಲಾತಿ ನಡೆಯಲಿದೆ.


ಈ ದಿನ ಗಾನಸಿರಿಯ ಪ್ರಧಾನ ಶಾಖೆ ಪುತ್ತೂರು, ಉಪ್ಪಿನಂಗಡಿ, ವಿಟ್ಲ, ರಾಮಕುಂಜ, ಬಿ.ಸಿರೋಡ್ , ಸುಳ್ಯ ಮತ್ತು ಆನ್ ಲೈನ್ ತರಗತಿಗಳಿಗೆ ದಾಖಲಾತಿ ನಡೆಯಲಿದ್ದು ಗಾಯನ ತರಬೇತಿ ಮಾತ್ರವಲ್ಲದೆ ಚಿತ್ರಕಲೆ, ತಬಲಾ, ಕೊಳಲು ತರಗತಿಗಳಿಗೂ ದಾಖಲಾತಿ ನಡೆಯಲಿದೆ.ವಿದ್ಯಾರಂಭಕ್ಕೆ ಅತಿ ಸೂಕ್ತವಾದ ವಿಜಯ ದಶಮಿಯ ವಿಶೇಷವಾದ ದಿನ ಗಾನಸಿರಿಯಲ್ಲಿ ತಮ್ಮ ಕಲಾ ಪಯಣಕ್ಕೆ ಮುನ್ನುಡಿ ಬರೆಯುವ ಇಚ್ಛೆ ಉಳ್ಳವರು ಮೊಬೈಲ್ ಸಂಖ್ಯೆ 9901555893 ಯಲ್ಲಿ ಸಂಸ್ಥೆಯ ಮುಖ್ಯಸ್ಥರು ಡಾ. ಕಿರಣ್ ಕುಮಾರ್ ಗಾನಸಿರಿ ಯವರನ್ನು ಸಂಪರ್ಕಿಸಲು ಗಾನಸಿರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here