ಪುತ್ತೂರು: ಸವಣೂರು ಪೆರಿಯಡ್ಕ ಶ್ರೀ ಆದಿಶಕ್ತಿ ಭಜನಾ ಮಂಡಳಿ ಮತ್ತು ಶ್ರೀ ಆದಿಶಕ್ತಿ ಉತ್ಸವ ಸಮಿತಿ ಇದರ ವತಿಯಿಂದ ಅ. 24 ರಂದು ಅಪರಾಹ್ನ 3 ರಿಂದ ಸವಣೂರು ಪೆರಿಯಡ್ಕ ಬಸ್ ತಂಗುದಾಣದ ಬಳಿ 520 ಕೆ.ಜಿಯ, 7 ಜನರ ಪುರುಷರ ಮುಕ್ತ ಸಿಂಗಲ್ ಗ್ರಿಪ್ ಹಾಗೂ 7 ಜನ ಮಹಿಳೆಯರ ಮುಕ್ತ ಹಗ್ಗ ಜಗ್ಗಾಟ ನಡೆಯಲಿದೆ. ಅಪರಾಹ್ನ 3 ಕ್ಕೆ ಪಂದ್ಯಾಟದ ಉದ್ಘಾಟನೆಯನ್ನು ಹಿಂದು ಸಂಘಟನೆ ಮುಖಂಡ ಅರುಣ್‌ಕುಮಾರ್ ಪುತ್ತಿಲರವರು ನೆರವೇರಿಸಲಿದ್ದಾರೆ. ಪಂದ್ಯಾಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸವಣೂರು ಗ್ರಾ.ಪಂ, ಅಧ್ಯಕ್ಷೆ ಸುಂದರಿ ಬಿ.ಎಸ್, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಕುದ್ಮಾರು ಸ್ಕಂದಶ್ರೀ ಪೆಟ್ರೋಲ್ ಪಂಪು ಮಾಲಕ ಚೆನ್ನಪ್ಪ ಗೌಡ ನೂಜಿ, ಸವಣೂರು ಗ್ರಾ.ಪಂ, ಸದಸ್ಯ ಗಿರಿಶಂಕರ್ ಸುಲಾಯ, ಕಡಬ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ.ಸವಣೂರು, ಎಲೆಕ್ಟ್ರಿಕಲ್ ಗುತ್ತಿಗೆದಾರ ಜಯರಾಮ ಸವಣೂರು, ಪಿಡಬ್ಲ್ಯೂಡಿ ಗುತ್ತಿಗೆದಾರ ಪ್ರಜ್ವಲ್ ಕೆ.ಆರ್. ಭಾಗವಹಿಸಲಿದ್ದಾರೆ ಎಂದು ಸವಣೂರು ಪೆರಿಯಡ್ಕ ಶ್ರೀ ಅದಿಶಕ್ತಿ ಭಜನಾ ಮಂಡಳಿಯ ಗೌರವಾಧ್ಯಕ್ಷ ರಾಜರಾಮ್ ಪ್ರಭು ಅಶ್ವಿನಿ ಫಾರ್ಮ್ಸ್, ಅಧ್ಯಕ್ಷ ಹರೀಶ್ ಕುಕ್ಕುಜೆ, ಕಾರ‍್ಯದರ್ಶಿ ಪ್ರವೀಣ್ ಪೆರಿಯಡ್ಕ ಹಾಗೂ ಶ್ರೀ ಅದಿಶಕ್ತಿ ಉತ್ಸವ ಸಮಿತಿಯ ಅಧ್ಯಕ್ಷ ಯತೀಶ್ ಪೂವರವರುಗಳು ತಿಳಿಸಿದ್ದಾರೆ.