ಪಡುಮಲೆ ಮದಕ ಶ್ರೀ ರಾಜರಾಜೇಶ್ವರಿ ಸನ್ನಿಧಿಯಲ್ಲಿ ನವರಾತ್ರಿ ಪೂಜಾ ಕಾರ್ಯಕ್ರಮ

0

ಬಡಗನ್ನೂರುಃ ಪಡುಮಲೆ ಮದಕ  ಶ್ರೀ ರಾಜರಾಜೇಶ್ವರಿ ಸನ್ನಿಧಿಯಲ್ಲಿ ಅ.15 ರಂದು ಆರಂಭಗೊಂಡು ಸತತ 9 ದಿವಸಗಳ ಕಾಲ ನಡೆದ ನವರಾತ್ರಿ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅ.23 ರಂದು ಸಂಪನ್ನಗೊಂಡಿತ್ತು. ಅ.23 ರಂದು ಸಪ್ತಸತಿ ಪಾರಾಯಣ ಬಳಿಕ ರಾಜರಾಜೇಶ್ವರಿ ದೇವಿಗೆ ಹೂವಿನ ಅಲಂಕಾರ ಪೂಜೆ, ಮಹಾ ಮಂಗಳಾರತಿ ಪ್ರಸಾದ ವಿತರಣೆ ನಡೆಯಿತು.

ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿತು.ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಮದಕ ಶ್ರೀ ರಾಜರಾಜೇಶ್ವರಿ ಸಾನಿಧ್ಯ ಪ್ರತಿಷ್ಠಾಪನೆಗೊಂಡಿತು.ಅದರಿಂದ ಪ್ರಥಮ ನವರಾತ್ರಿ ಪೂಜಾ ಕೈಂಕಾರ್ಯಗಳು ನಡೆದುದರಿಂದ ಊರಿಗೆ ಊರೇ ಸೇರಿಬಂದ ಭಕ್ತ ಮಹಾಸಾಗರದಲ್ಲಿ ಶ್ರೀ ರಾಜರಾಜೇಶ್ವರಿ ತಾಯಿ ಗೆ ಭಕ್ತರು ವಿಶೇಷ ಹೂವಿನ ಅಲಂಕಾರ ಪೂಜೆ, ಹೂವಿನ ಪೂಜೆ, ಸಲ್ಲಿಸುವ ಮುಂಖಾತರ ಅದ್ದೂರಿಯಾಗಿ ನವರಾತ್ರಿ ಮಹೋತ್ಸವ ಆಚಾರಣೆ ಮಾಡಲಾಯಿತು

ಭಜನಾ ಸಂಕೀರ್ತನೆ;-
ನವರಾತ್ರಿ 9 ದಿವಸಗಳಲ್ಲಿ ವಿವಿಧ ಭಜನಾ ಮಂಡಳಿ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಿತು..
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಸಿ.ಯಚ್, ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ಭಟ್ ಪಿ, ನವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಆಳ್ವ, ಕಾರ್ಯದರ್ಶಿ ಸುಬ್ಬಯ್ಯ ರೈ ಹಲಸಿನಡಿ, , ಅಯುಧ ಪೂಜಾ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ಮಂಗಳಾದೇವಿ, ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ ಪಲ್ಲತ್ತಾರು, ಕೋಶಾಧಿಕಾರಿ ರಾಜೇಶ್ ಮೇಗಿನಮನೆ, ಉತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ಲಿಲು, ಅನಂತ ರೈ ಮೂಡಾಯೂರು, ಪದ್ಮನಾಭ ರೈ ಅರೆಪ್ಪಾಡಿ, ರಘರಾಮ ಪಾಟಾಳಿ  ಪುರಂದರ  ರೈ ಸೇನರಮಜಲು, ಸುಳ್ಯಪದವು ಶ್ರೀ ಅಯ್ಯಪ್ಪ ಭಜನಾ ಮ‌ಂದಿರದ ಟ್ರಸ್ಟ್ ನ ಕೋಶಾಧಿಕಾರಿ ಚಿನ್ನಪ್ಪ ಗೌಡ ಶಬರಿನಗರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here