ಡಿ.16:ಲಯನ್ಸ್ ಪುತ್ತೂರು ಕಾವುಗೆ ರೀಜ್ಹನ್ ಚೇರ್ ಪರ್ಸನ್, ಝೋನಲ್ ಚೇರ್ ಪರ್ಸನ್ ರವರ ಅಧಿಕೃತ ಭೇಟಿ

0

ಪುತ್ತೂರು: ಅಂತರರಾಷ್ಟ್ರೀಯ ಲಯನ್ಸ್ ಇದರ ಲಯನ್ಸ್ ಜಿಲ್ಲೆ 317ಡಿ, ರೀಜ್ಹನ್ 7, ವಲಯ ಎರಡರ ಲಯನ್ಸ್ ಕ್ಲಬ್ ಪುತ್ತೂರು ಕಾವು ಇದರ ರೀಜ್ಹನ್ ಚೇರ್ ಪರ್ಸನ್ ಹಾಗೂ ಝೋನಲ್ ಚೇರ್ ಪರ್ಸನ್ ರವರ ಅಧಿಕೃತ ಭೇಟಿ ಕಾರ್ಯಕ್ರಮ ಡಿ.16 ರಂದು ಕಾವು ಮುಖ್ಯ ರಸ್ತೆಯ ಸಮುದಾಯ ಭವನದಲ್ಲಿ ಸಂಜೆ ಜರಗಲಿದೆ.
ಲಯನ್ಸ್ ಕ್ಲಬ್ ಪುತ್ತೂರು ಕಾವು ಸಂಸ್ಥೆಯ ಆನೇಕ ಸಮಾಜಮುಖಿ ಕಾರ್ಯಗಳನ್ನು ರೀಜ್ಹನ್ ಚೇರ್ ಪರ್ಸನ್ ಎಂ.ಆನಂದ ರೈ ಪಿ ಹಾಗೂ ಝೋನಲ್ ಚೇರ್ ಪರ್ಸನ್ ಜಗನ್ನಾಥ ರೈ ಗುತ್ತುರವರು ಅನಾವರಣಗೊಳಿಸಲಿದ್ದಾರೆ ಎಂದು ಲಯನ್ಸ್ ಕ್ಲಬ್ ಪುತ್ತೂರು ಕಾವು ಅಧ್ಯಕ್ಷ ಕೆ.ಇಬ್ರಾಹಿಂ ಹಾಜಿ, ಕಾರ್ಯದರ್ಶಿ ದೇರಣ್ಣ ರೈ, ಕೋಶಾಧಿಕಾರಿ ರಮೇಶ್ ಆಳ್ವ ಎ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here