ಕೆಯ್ಯೂರು: ಸವಣೂರು ವಲಯಮಟ್ಟದ ಕ್ರೀಡಾಕೂಟದಲ್ಲಿ ಕೆಪಿಎಸ್ ಕೆಯ್ಯೂರಿನ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳು ವೈಯಕ್ತಿಕ ವಿಭಾಗದ ಹಲವು ಸ್ಪರ್ಧೆಗಳಲ್ಲಿ ಬಹುಮಾನ ಪಡೆದುಕೊಂಡು ಹದಿನೇಳರ ಒಳಗಿನ ವಯೋಮಾನದ ಹುಡುಗರು ಹಾಗೂ ಹುಡುಗಿಯರ ವಿಭಾಗ ಎರಡರಲ್ಲೂ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕಿ ಇಂದಿರಾ.ಪಿ ಯವರು ಇವರಿಗೆ ತರಬೇತಿ ನೀಡಿದ್ದರು. ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ ಎಸ್ ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಚೇತನ್ 100 ಮೀ ಪ್ರಥಮ, 200 ಮೀ ಪ್ರಥಮ, ಈಟಿ ಎಸೆತ ದ್ವಿತೀಯ.ಪ್ರಶ್ವಿತ್ 800 ಮೀ ಪ್ರೈಮ, 400 ಮೀ ದ್ವಿತೀಯ, ಉದ್ದಜಿಗಿತ ತೃತೀಯ.ಕೆ.ಇ. ಮಹಮ್ಮದ್ ಮಿಕ್ ದಾದ್ ಚಕ್ರ ಎಸೆತ ಪ್ರಥಮ,ಗುಂಡೆಸೆತ ದ್ವಿತೀಯ. ಮಹಮ್ಮದ್ ಸುಹೈಲ್ 100 ಮೀ ದ್ವಿತೀಯ, 200 ಮೀ ದ್ವಿತೀಯ.4×100ಮೀ ರಿಲೇ ದ್ವಿತೀಯ (ಚೇತನ್, ಪ್ರಶ್ವಿತ್, ಸುಹೈಲ್, ಜಂಶೀದ್ ಇವರ ತಂಡ)ಆಯಿಷತ್ ಅಂಸೀನಾ 3000ಮೀ ದ್ವಿತೀಯ, 1500 ಮೀ ಪ್ರಥಮ. ಖದೀಜತುಲ್ ಶಹೀಮ ಗುಂಡೆಸೆತ ತೃತೀಯ, 400 ಮೀ ತೃತೀಯ.ಅಫ್ರೀನಾ 200 ಮೀ ಪ್ರಥಮ .ಯಕ್ಷಿತಾ ಈಟಿ ಎಸೆತ ತೃತೀಯ, ಉದ್ದ ಜಿಗಿತ ತೃತೀಯ.ಇಶಾನ ಉದ್ದಜಿಗಿತ ಪ್ರಥಮ,ಚೈತ್ರಾ 100 ಮೀ ಪ್ರಥಮ, ನವ್ಯಶ್ರೀ 800 ಮೀ ದ್ವಿತೀಯ, 400 ಮೀ ಪ್ರಥಮ.4×100 ಮೀ ರಿಲೇ ಪ್ರಥಮ (ಶಹಮ, ಅಫ್ರೀನಾ, ಫಾತಿಮತ್ ಅಫ್ರೀನಾ, ಚೈತ್ರಾ).
ಹದಿನಾಲ್ಕರ ವಯೋಮಾನದ ಹುಡುಗಿಯರ ವಿಭಾಗದಲ್ಲಿ
ಲಿಖಿತಾ 200 ಮೀ ತೃತೀಯ, 100 ಮೀ ಪ್ರಥಮ.4×100 ಮೀ ರಿಲೇ ತೃತೀಯ (ಲಿಖಿತಾ, ಧನ್ವಿ, ಜಝೀಲ, ಶಿಫಾನ ಇವರ ತಂಡ)
14 ರ ವಯೋಮಾನದ ಹುಡುಗರ ವಿಭಾಗದಲ್ಲಿ
ಮಹಮ್ಮದ್ ಹಲೀ 200 ಮೀ ಪ್ರಥಮ, ಭವಿತ್ 400ಮೀ ತೃತೀಯ.