ಪುತ್ತೂರು: ಸ.ಉ.ಹಿ.ಪ್ರಾ ಶಾಲೆ ಸವಣೂರುನಲ್ಲಿ ಅ.28ರಂದು ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಶಾಲಾ ಮುಖ್ಯ ಗುರು ನಿಂಗರಾಜು ಕೆ ಪಿ ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಕೆ, ಮಹರ್ಷಿ ವಾಲ್ಮೀಕಿ ಜಯಂತಿಯ ಮಹತ್ವದ ಬಗ್ಗೆ ಮತ್ತು ರಾಮಾಯಣದಲ್ಲಿ ಮಹರ್ಷಿಗಳ ಪಾತ್ರದ ಬಗ್ಗೆ ಮತ್ತು ಸೀತಾಮಾತೆಯನ್ನು ಅವರು ಸಂರಕ್ಷಿಸಿ, ಲವಕುಶರಿಗೆ ತನ್ನ ಆಶ್ರಮದಲ್ಲಿ ವಿದ್ಯಾಭ್ಯಾಸ ಕೊಡಿಸಿದ ಬಗ್ಗೆ, ಒಬ್ಬ ಸಾಮಾನ್ಯ ವ್ಯಕ್ತಿ ಮಹರ್ಷಿ ಆದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಮ್ ಸಿ ಸದಸ್ಯರಾದ ಶಾಂತರಾಮ ಪೂಜಾರಿ, ಹಿರಿಯ ಶಿಕ್ಷಕಿ ತುಳಸಿ ಎಚ್, ಮೇಬಲ್ ರೋಡ್ರಿಗಸ್, ಆಶಾ ಎಮ್, ನಳಿನಿ, ಮೋಕ್ಷ ಜೆ ರೈ, ಹರ್ಷಿಣಿ, ಅಶ್ವಿನಿ ಉಪಸ್ಥಿತರಿದ್ದರು.