ಈಶ್ವರಮಂಗಲ ಶ್ರೀ ಗಜಾನನ ಆ.ಮಾ ಶಾಲೆಯಲ್ಲಿ ಅಕ್ಟೋಬರ್ ತಿಂಗಳ ಸಾಮೂಹಿಕ ಹುಟ್ಟುಹಬ್ಬ ಆಚರಣೆ

0

ಈಶ್ವರಮಂಗಲ :ಹನುಮಗಿರಿ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಜನಿಸಿದ ವಿದ್ಯಾರ್ಥಿಗಳ ಸಾಮೂಹಿಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮುಖ್ಯ ಅತಿಥಿ ಮೀನಾಕ್ಷಿ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ’ದೇಹ ನಶ್ವರ ದೇಶ ಶಾಶ್ವತ, ದೇಶಕ್ಕಾಗಿ ಜೀವನವನ್ನು ಮುಡಿಪಾಗಿಡಿ’ ಎಂದರು. ಪೋಷಕರಾದ ಉದಯ ಕುಮಾರ್, ಶ್ರೀದೇವಿ ಭಟ್, ದೀಪ್ತಿ ಹಾಗೂ ಜಯಂತಿ ರೈ ಉಪಸ್ಥಿತರಿದ್ದರು. ಹುಟ್ಟುಹಬ್ಬ ಆಚರಿಸುತ್ತಿರುವ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕಿಯರು ತಿಲಕವನ್ನಿಟ್ಟು, ಆರತಿ ಬೆಳಗಿ ಕಿರುಕಾಣಿಕೆಯನ್ನು ನೀಡಿದರು.
ಪ್ರಾಂಶುಪಾಲ ಕೆ ಶಾಮಣ್ಣ ಸ್ವಾಗತಿಸಿ , ಕಾವ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಮುಖ್ಯಗುರು ಅಮರನಾಥ ಬಿ ಪಿ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here