ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮ

0

ಪುತ್ತೂರು: ಯಾವುದೇ ರೀತಿಯ ಖಾಯಿಲೆಗಳಿಗೆ ಪ್ರಾಥಮಿಕ ಹಂತದಲ್ಲಿಯೇ ತಜ್ಞ ವೈದ್ಯರುಗಳಿಂದ ಔಷದೋಪಚಾರಗಳನ್ನು ಮಾಡಿಸಿದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಮಂಗಳೂರು ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನ ಬ್ರೆಸ್ಟ್ ಹಾಗೂ ಎಂಡೋಕ್ರೈಂ ಸರ್ಜನ್ ಡಾ.ಸ್ಮಿತಾ.ಎಸ್.ರಾವ್ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಟೆಕ್ನಾಲಜಿಯ ಕಾಲೇಜು ಆಂತರಿಕ ದೂರು ಸಮಿತಿ ಹಾಗೂ ಕುಂದುಕೊರತೆ ನಿವಾರಣಾ ಪ್ರಕೋಷ್ಟ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತಾಡಿದರು.

ಕ್ಯಾನ್ಸರ್ ಪ್ರಾಥಮಿಕ ಹಂತದಲ್ಲಿಯೇ ಗುರುತಿಸಲ್ಪಟ್ಟರೆ ಅದನ್ನು ಗುಣಪಡಿಸಬಹುದು ಆದರೆ ಹೆಚ್ಚಿನ ಸಂದರ್ಭದಲ್ಲಿ ನಾಚಿಕೆಪಟ್ಟು ಇತರರೊಡನೆ ಹೇಳಿಕೊಳ್ಳದೆ ನಾವು ಮಾಡುವ ಸ್ವಯಂ ವೈದ್ಯ ಪದ್ದತಿಯಿಂದ ಖಾಯಿಲೆಗಳು ಗುಣಪಡಿಸಲಾರದ ಮಟ್ಟಕ್ಕೆ ಹೋಗುತ್ತವೆ. ಅತಿಯಾದ ನೋವು ಮತ್ತು ರಕ್ತಸ್ರಾವ ಕ್ಯಾನ್ಸರ್ ರೋಗದ ಅಂತಿಮ ಘಟ್ಟ ಎಂದು ಅವರು ಹೇಳಿದರು. ನಮ್ಮ ದೇಹದಲ್ಲಿ ಅಸಹಜ ಬೆಳವಣಿಗೆಗಳು ಕಂಡುಬಂದ ತಕ್ಷಣ ತಜ್ಞ ವೈದ್ಯರುಗಳನ್ನು ಸಂಪರ್ಕಿಸಬೇಕು. 10% ಸ್ತನ ಕ್ಯಾನ್ಸರ್ ಅನುವಂಶಿಕವಾಗಿ ಬರಬಹುದು ಆದರೆ 90% ಜನರಲ್ಲಿ ಯಾವುದೇ ಕಾರಣವಿಲ್ಲದೆ ಸ್ತನ ಕ್ಯಾನ್ಸರ್ ಬರಬಹುದು ಎಂದರು. 40 ವರ್ಷ ಹರೆಯದ ನಂತರ ಪ್ರತಿ ಎರಡು ವರ್ಷಕ್ಕೊಮ್ಮೆ ನಿಯಮಿತವಾಗಿ ಪರೀಕ್ಷೆ ಮಾಡಿಸುವ ಮೂಲಕ ಸ್ತನ ಕ್ಯಾನ್ಸರ್‌ನ ಸಂಭಾವ್ಯ ಅಪಾಯದಿಂದ ಪಾರಾಗಬಹುದು ಎಂದರು.


ಕಾಲೇಜು ಆಂತರಿಕ ದೂರು ಸಮಿತಿಯ ಮುಖ್ಯಸ್ಥೆ ಡಾ.ಸೌಮ್ಯ.ಎನ್.ಜೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಕಾಲೇಜಿನ ಉಪನ್ಯಾಸಕಿಯರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಸಮಾರಂಭದಲ್ಲಿ ಹಾಜರಿದ್ದರು.ಸ್ನೇಹಾ.ಬಿ ಅತಿಥಿಗಳನ್ನು ಪರಿಚಯಿಸಿದರು. ಮೇಖಲಾ.ವಿ.ರಾವ್ ಸ್ವಾಗತಿಸಿ, ಹರ್ಷಿತಾ.ಬಿ ವಂದಿಸಿದರು. ನಿವೀತಾ.ಬಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here