ತಾಲೂಕು ಮಟ್ಟದ ಕ್ರೀಡಾಕೂಟ-ವಿವೇಕಾನಂದ ಆ.ಮಾ ಶಾಲಾ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ಹಿರೇಬಂಡಾಡಿ ಮತ್ತು ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ, ಮೂರು ಸಮಗ್ರತಂಡ ಪ್ರಶಸ್ತಿಯೊಂದಿಗೆ ಅನೇಕ ಪದಕಗಳನ್ನು ಮತ್ತು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

17ರ ವಯೋಮಾನದ ಬಾಲಕರ ವಿಭಾಗ :
ಸಾತ್ವಿಕ್ ಆರ್ 10ನೇ ತರಗತಿ ತ್ರಿವಿಧ ಜಿಗಿತ ಪ್ರಥಮ, ಉದ್ದ ಜಿಗಿತ ಪ್ರಥಮ ಮತ್ತು 110 ಮೀಟರ್ ಹರ್ಡಲ್ಸ್ ಪ್ರಥಮ. ಸಚಿತ್ ಪಿಕೆ 10ನೇ ತರಗತಿ 400 ಮೀಟರ್ ಪ್ರಥಮ, 800 ಮೀಟರ್ ಪ್ರಥಮ. ಯಶ್ವಿತ್ ಡಿ ಪಿ 10ನೇ ತರಗತಿ ಎತ್ತರ ಜಿಗಿತ ಪ್ರಥಮ. ಚವನ್ ಕುಮಾರ್  10ನೇ ತರಗತಿ ತ್ರಿವಿಧ ಜಿಗಿತ  ದ್ವಿತೀಯ. ಕೃಪಾಲ್ ಕೆ 9ನೇ ತರಗತಿ 1500 ಮೀಟರ್ ದ್ವಿತೀಯ .ಮಿಲನ್ ಬಿ 10ನೇ ತರಗತಿ ಗುಂಡು ಎಸೆತ ಪ್ರಥಮ.  ಮನ್ವಿತ್ ನೆಕ್ಕರೆ 9ನೇ ತರಗತಿ 110 ಮೀಟರ್ ಹರ್ಡಲ್ಸ್ ತೃತೀಯ. 4*100 ಮೀಟರ್ ರಿಲೇ ಪ್ರಥಮ. ( ಮನ್ವಿತ್ ನೆಕ್ಕರೆ, ಮನೋಹರ ಕೆ, ಸಚಿತ್ ಪಿ ಕೆ ಮತ್ತು ಸಾತ್ವಿಕ್ ಆರ್ ) ಈ ವಿಭಾಗದಲ್ಲಿ ಸಾತ್ವಿಕ್ ಆರ್ 15 ಅಂಕಗಳೊಂದಿಗೆ  ವೈಯಕ್ತಿಕ ಚಾಂಪಿಯನ್ಆಗಿರುತ್ತಾನೆ. ಹಾಗೂ ಈ ವಿಭಾಗದ ಬಾಲಕರು 50 ಅಂಕಗಳೊಂದಿಗೆ  ಪ್ರಥಮ ಸಮಗ್ರ ಪ್ರಶಸ್ತಿಯನ್ನು ಗಳಿಸಿರುತ್ತಾರೆ.

 17ರ ವಯೋಮಾನದ  ಬಾಲಕಿಯರ ವಿಭಾಗ : ಡಿಂಪಲ್ ಶೆಟ್ಟಿ 400 ಮೀಟರ್ ಪ್ರಥಮ, 200 ಮೀಟರ್ ಪ್ರಥಮ ಮತ್ತು 100 ಮೀಟರ್ ದ್ವಿತೀಯ. ಸಮೃದ್ಧಿ ಜೆ ಶೆಟ್ಟಿ 10ನೇ ತರಗತಿ ಉದ್ದ ಜಿಗಿತ ಪ್ರಥಮ,  100 ಮೀಟರ್ ಹರ್ಡಲ್ಸ್ ದ್ವಿತೀಯ  ಮತ್ತು ಎತ್ತರ ಜಿಗಿತ ತೃತೀಯ. ಎಮ್ ಪವಿತ್ರ 10ನೇ ತರಗತಿ ಹ್ಯಾಮರ್ ಎಸೆತ ಪ್ರಥಮ ಮತ್ತು ಚಕ್ರ ಎಸೆತ ದ್ವಿತೀಯ. ಶ್ರೀ ವರ್ಣ ಪಿ ಡಿ 9ನೇ ತರಗತಿ. 100 ಮೀಟರ್ ಹರ್ಡಲ್ಸ್ ಪ್ರಥಮ, ಎತ್ತರ ಜಿಗಿತ ದ್ವಿತೀಯ. ಸಾನ್ವಿ ಎಸ್ ಪಿ 10ನೇ ತರಗತಿ ತ್ರಿವಿಧ ಜಿಗಿತ ಪ್ರಥಮ,  100 ಮೀಟರ್ ತೃತೀಯ. ಕೃತಿ ಕೆ 9ನೇ ತರಗತಿ 1500 ಮೀಟರ್ ತೃತೀಯ. 4*100  ಮೀಟರ್ ರಿಲೇ ಪ್ರಥಮ ( ಡಿಂಪಲ್ ಶೆಟ್ಟಿ, ರಿಧಿ ಸಿ ಶೆಟ್ಟಿ, ಕೃತಿ ಕೆ ಮತ್ತು ಸಾನ್ವಿ ಎಸ್ ಪಿ ). ಈ ವಿಭಾಗದಲ್ಲೂ ತಮ್ಮ ವಿದ್ಯಾರ್ಥಿಗಳು 55 ಅಂಕಗಳೊಂದಿಗೆ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ.

 14ರ ವಯೋಮಾನದ ಬಾಲಕರ ವಿಭಾಗ : ಚೇತಸ್ ಪಿ ವೈ 8ನೇ ತರಗತಿ 400 ಮೀಟರ್ ಪ್ರಥಮ 600 ಮೀಟರ್ ಪ್ರಥಮ ಮತ್ತು 200 ಮೀಟರ್ ದ್ವಿತೀಯ.  4*100 ಮೀಟರ್ ರಿಲೇ ದ್ವಿತೀಯ. ಈ ವಿಭಾಗದಲ್ಲಿ ಚೇತಸ್ ಪಿ ವೈ 13 ಅಂಕಗಳೊಂದಿಗೆ  ವೈಯಕ್ತಿಕ ಚಾಂಪಿಯನ್ ಆಗಿರುತ್ತಾನೆ. ಹಾಗೂ  ಈ ವಿಭಾಗದ ಬಾಲಕರು  19 ಅಂಕಗಳೊಂದಿಗೆ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ.

 14ರ ವಯೋಮಾನದ ಬಾಲಕಿಯರ ವಿಭಾಗ : ದಿವಿಜ್ಞಾ ಯು ಎಸ್ 8ನೇ ತರಗತಿ  200 ಮೀಟರ್ ಪ್ರಥಮ,400 ಮೀಟರ್ ಪ್ರಥಮ, 600 ಮೀಟರ್ ಪ್ರಥಮ ಹಾಗೂ ಈ ವಿಭಾಗದಲ್ಲಿ 15 ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್ ಆಗಿರುತ್ತಾಳೆ. ಚಿಂತನ ಸಿ 8ನೇ ತರಗತಿ 80 ಮೀಟರ್ ಹರ್ಡಲ್ಸ್ ಪ್ರಥಮ. ರವೀನಾ 8ನೇ ತರಗತಿ ಎತ್ತರ ಜಿಗಿತ ತೃತೀಯ. ಈ ವಿಭಾಗದಲ್ಲಿ ಬಾಲಕಿಯರ ತಂಡ 21 ಅಂಕಗಳೊಂದಿಗೆ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ.

 14ರ ವಯೋಮಾನದ ಬಾಲಕರ ಪ್ರಾಥಮಿಕ  ವಿಭಾಗ  : ವೈಭವ್ ಕಾಮತ್ 7ನೇ ತರಗತಿ 100 ಮೀಟರ್ ದ್ವಿತೀಯ, 200 ಮೀಟರ್ ತೃತೀಯ ಮತ್ತು ಉದ್ದ ಜಿಗಿತ ತೃತೀಯ. ಧನುಷ್ ಪಿ ಡಿ 7ನೇ ತರಗತಿ 80 ಮೀಟರ್ ಹರ್ಡಲ್ಸ್ ದ್ವಿತೀಯ. ಕೃತಿಕ್  ಆರ್  80ಮೀಟರ್ ಹರ್ಡಲ್ಸ್ ತೃತೀಯ. 4*100 ಮೀಟರ್ ರಿಲೇ ದ್ವಿತೀಯ. ಈ ವಿಭಾಗದಲ್ಲಿ  ಬಾಲಕರ ತಂಡವು 14 ಅಂಕಗಳೊಂದಿಗೆ  ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಗಳಿಸಿಕೊಂಡಿದೆ.

 14ರ ವಯೋಮಾನದ ಬಾಲಕಿಯರ ಪ್ರಾಥಮಿಕ ವಿಭಾಗ : ಆತ್ಮಿ ಕೆ ಎಲ್ 6ನೇ ತರಗತಿ  100 ಮೀಟರ್ ಪ್ರಥಮ, 200 ಮೀಟರ್ ಪ್ರಥಮ. ನಿಧಿ ಶ್ರೀ ಕೆ 7ನೇ ತರಗತಿ 80 ಮೀಟರ್ ಹರ್ಡಲ್ಸ್ ಪ್ರಥಮ, 100 ಮೀಟರ್ ತೃತೀಯ. ವಂಶಿತಾ 6ನೇ ತರಗತಿ ಉದ್ದ ಜಿಗಿತ ಪ್ರಥಮ. ಶ್ರೀರಕ್ಷಾ 7ನೇ ತರಗತಿ 600 ಮೀಟರ್ ದ್ವಿತೀಯ. ತನ್ವಿ ಬಿ ವಿ 7ನೇ ತರಗತಿ ಎತ್ತರ ಜಿಗಿತ ತೃತೀಯ.  ಹಾಗೂ 4*100 ಮೀಟರ್ ರಿಲೇಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಈ ವಿಭಾಗದಲ್ಲಿ ಬಾಲಕಿಯರ ತಂಡವು 31 ಅಂಕಗಳೊಂದಿಗೆ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದು, ನಮ್ಮ ಶಾಲಾ ವಿದ್ಯಾರ್ಥಿಗಳು ಮೂರು ವಿಭಾಗದಲ್ಲಿ ಪ್ರಥಮ , ಮೂರು ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಗಳು ಹಾಗೂ ಮೂರು ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಗಳೊಂದಿಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 24 ವಿದ್ಯಾರ್ಥಿಗಳು  ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯ ಗುರು ಸತೀಶ್ ಕುಮಾರ್ ರೈ ಇವರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here