ಆಲಂಕಾರು: ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಆಲಂಕಾರು ಇದರ ಧನಲಕ್ಷ್ಮಿ ಸ್ವ ಸಹಾಯ ಸಂಘದ ಸದಸ್ಯರಾದ ಕೀರ್ತಿಕ ಇವರ ಪತಿ ಹೃದಯಾಘಾತದಿಂದ ನಿಧನ ಹೊಂದಿದ್ದು, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ನಿಂದ ನೀಡುವ ಸಹಾಯಧನ ಚೆಕ್ನ್ನು ಅಲಂಕಾರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಮೆನೇಜರ್ ರೇವತಿಯವರು ಮೃತರ ಪತ್ನಿಗೆ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಮೇಲ್ವಿಚಾರಕರಾದ ವಿಜಯ ಕುಮಾರ್, ಪ್ರೇರಕರಾದ ಲಲಿತಾ, ಸಂಘದ ಸದಸ್ಯರು ಉಪಸ್ಥಿತರಿದ್ದರು.