ನೆಲ್ಯಾಡಿ: ಪುತ್ತೂರಿನ ಅಬ್ರಾಡ್ ಮಲ್ಟಿಪ್ಲೆಕ್ಸ್ ಸಭಾಂಗಣದಲ್ಲಿ ಅ.28 ಮತ್ತು 29ರಂದು ನಡೆದ 2023ನೇ ಸಾಲಿನ ಜೇಸಿ ವಲಯ ಸಮ್ಮೇಳನದಲ್ಲಿ ನೆಲ್ಯಾಡಿ ಜೇಸಿಐಗೆ ಹಲವು ಪ್ರಶಸ್ತಿ ಲಭಿಸಿದೆ.
ಜೇಸಿ ಸಪ್ತಾಹವನ್ನು ಅಚ್ಚುಕಟ್ಟಾಗಿ ನೆರವೇರಿಸಿರುವುದು, ಜೇಸಿ ತಿಂಗಳ ಮಾಸಪತ್ರಿಕೆ “ಪ್ರಗತಿ”ಯ 10 ಸಂಚಿಕೆಗಳನ್ನು ಪೂರೈಸಿರುವುದಕ್ಕೆ ವಲಯ ವಿನ್ನರ್ ಪ್ರಶಸ್ತಿ ಹಾಗೂ ಪ್ರಸ್ತುತ ವರ್ಷ ಆಯೋಜಿಸಿರುವ ಹಲವು ಕಾರ್ಯಕ್ರಮ ಗುರುತಿಸಿ ಡೈಮಂಡ್ ಘಟಕ ಪ್ರಶಸ್ತಿ ಮತ್ತು ವಲಯ ಸಮ್ಮೇಳನದಲ್ಲಿ 25 ಸದಸ್ಯರ ನೋಂದಾವಣೆಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು. ಪ್ರಶಸ್ತಿಗಳನ್ನು ವಲಯ್ಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಮತ್ತು ವಲಯದ ಪೂರ್ವ ಅಧ್ಯಕ್ಷರು, ವಲಯ ಅಧಿಕಾರಿಗಳು ನೀಡಿ ಗೌರವಿಸಿದರು. ನೆಲ್ಯಾಡಿ ಜೇಸಿಐ ಘಟಕಾಧ್ಯಕ್ಷ ದಯಾಕರ ರೈ, ಪೂರ್ವಾಧ್ಯಕ್ಷರಾದ ಡಾ.ಸದಾನಂದ ಕುಂದರ್, ಜಯಂತಿ, ಚಂದ್ರಶೇಖರ ಬಾಣಜಾಲು, ಶಿವಪ್ರಸಾದ್, ಪುರಂದರ ಗೌಡ, ಜಯಾನಂದ ಬಂಟ್ರಿಯಾಲ್, ಮೋಹನ್ ವಿ, ರವಿಚಂದ್ರ ಹೊಸವಕ್ಲು, ನಾರಾಯಣ್ ಎನ್.ಬಲ್ಯ, ಇಸ್ಮಾಯಿಲ್, ಜಾನ್ ಪಿ.ಎಸ್, ದಯಾನಂದ ಆದರ್ಶ, ಲಕ್ಷ್ಮಣ್ ಜಿ.ಎ., ಜೇಸಿರೆಟ್ ಅಧ್ಯಕ್ಷೆ ರಶ್ಮಾ ದಯಾಕರ ರೈ, ಕಾರ್ಯದರ್ಶಿ ಸುಚಿತ್ರ ಬಂಟ್ರಿಯಾಲ್, ಪದಾಧಿಕಾರಿಗಳಾದ ಡಾ.ಸುಧಾಕರ್ ಶೆಟ್ಟಿ, ಸುಪ್ರೀತಾ ರವಿಚಂದ್ರ, ಲೀಲಾ ಮೋಹನ್, ಜಾಹ್ನವಿ ಪುರಂದರ ಗೌಡ, ಪುಷ್ಪ ಡಿ ಉಪಸ್ಥಿತರಿದ್ದರು.