ಪುತ್ತೂರು: ಬ್ಯಾಂಕ್ ಆಫ್ ಬರೋಡಾ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನ ಮಂಗಳೂರು ಇದರ ಮಹಾಸಭೆಯು ಅ. 31 ರಂದು ಮಂಗಳೂರಿನ ಮೋತಿಮಹಲ್ ಸಭಾಂಗಣದಲ್ಲಿ ಜರಗಿತು. ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಟಾನಕ್ಕೆ ಹೊಸ ಚೈತನ್ಯವನ್ನು ನೀಡಲು ಯುವಕರನ್ನು ಕಾರ್ಯಕಾರಿಣಿ ಸಮಿತಿಗೆ ಸೇರಿಸಿಕೊಂಡು ಪುನಃಶ್ಚೇತನಗೊಳಿಸುವಂತೆ ವಿಆರ್‌ಡಿಎಫ್ ಕಾರ್ಯಕಾರಿ ಸಮಿತಿ ಸದಸ್ಯ ಕಡಮಜಲು ಸುಭಾಸ್ ರೈ ಆಗ್ರಹಿಸಿದರು.
ಇದೇ ಉದ್ದೇಶದೊಂದಿಗೆ ಕಾರ್ಯಕಾರಿಣಿ ಸದಸ್ಯತ್ವಕ್ಕೆ ಈ ಹಿಂದೆಯೇ ಸ್ವಯಂನಿವೃತ್ತಿ ಘೋಷಿಸಿ ಸುಭಾಸ್ ರೈಯವರು ಪತ್ರ ಬರೆದಿದ್ದರು. ಸಭೆಯಲ್ಲಿ ಇದನ್ನುಅಂಗೀಕರಿಸಲಾಯಿತಲ್ಲದೇ ಮಾದರಿ ನಡೆಗಾಗಿ ಪ್ರತಿಷ್ಠಾನದಿಂದ ರೈಯವರನ್ನು ವಿಶೇಷವಾಗಿ ಅಭಿನಂದನೆ ಸಲ್ಲಿಸಲಾಯಿತು. ವಿಆರ್‌ಡಿಎಫ್ ಕಾರ್ಯದರ್ಶಿ ಬಿ. ರಾಜೇಂದ್ರ ರೈಯವರು ಸುಭಾಸ್ ರೈಯವರ ಕೃಷಿ ಸಾಧನೆ ಮತ್ತು ಪ್ರತಿಷ್ಟಾನದ ಸೇವೆಯನ್ನು ಶ್ಲಾಘಿಸಿದರು. ಬ್ಯಾಂಕ್ ಆಫ್ ಬರೋಡಾದ ಜನರಲ್ ಮೆನೇಜರ್ ಹಾಗೂ ಪ್ರತಿಷ್ಟಾನದ ಅಧ್ಯಕ್ಷೆ ಗಾಯತ್ರಿ ಆರ್. ರವರು ಸನ್ಮಾನಿಸಿದರು. ಪ್ರತಿಷ್ಟಾನದ ಉಪಾಧ್ಯಕ್ಷ ಎಂ. ಪ್ರೇಮನಾಥ ಆಳ್ವ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸಚಿನ್ ಹೆಗ್ಡೆ ಉಪಸ್ಥಿತರಿದ್ದರು.