*ಜಪಾನ್ನಿಂದ ಆಮದಿತ ಸ್ವಯಂ ಚಾಲಿತ ಎನಲೈಸರ್
*ಮೆಟ್ರೋಸಿಟಿಗಳಲ್ಲಿ ಲಭ್ಯವಾಗುವ ವಿವಿಧ ರಕ್ತತಪಾಸಣೆ
*ದಕ್ಷಿಣ ಕರ್ನಾಟಕದಲ್ಲೇ ಪುತ್ತೂರಿನಲ್ಲಿ ಮೊದಲು
ಪುತ್ತೂರು:ಕಳೆದ ಎರಡು ದಶಕಗಳಿಂದ ಪುತ್ತೂರಿನಲ್ಲಿ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದು, ಹೊಸ ತಂತ್ರಜ್ಞಾನಗಳೊಂದಿಗೆ ಹಲವು ಪ್ರಥಮಗಳನ್ನು ಪುತ್ತೂರಿಗೆ ಪರಿಚಯಿಸುತ್ತಿರುವ ಪುತ್ತೂರಿನ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯು ಇದೀಗ, ಮೆಟ್ರೋಸಿಟಿಗಳಲ್ಲಿ ಲಭ್ಯವಾಗುವ ವಿವಿಧ ರಕ್ತತಪಾಸಣೆಗಳನ್ನು ಒಂದೇ ಸೂರಿನಲ್ಲಿ ನೀಡುವ ನಿಟ್ಟಿನಲ್ಲಿ ವೈಹೆಚ್ಎಲ್ಒ, ಜಪಾನ್ನಿಂದ ಆಮದಿತ ಸಂಪೂರ್ಣ ಸ್ವಯಂಚಾಲಿತ ಎನಲೈಸರ್ ಅನ್ನು ಅಳವಡಿಸಿದೆ.
ದಕ್ಷಿಣ ಕರ್ನಾಟಕದಲ್ಲೇ ಪ್ರಥಮವಾಗಿ ಧನ್ವಂತರಿ ಲ್ಯಾಬೊರೇಟರಿಯಲ್ಲಿ ಇದನ್ನು ಅಳವಡಿಸಿದ್ದು, ಈ ಯಂತ್ರವು ಹೆಸರಾಂತ ಸಿಎಮ್ಸಿ ವೆಲ್ಲೂರುನಲ್ಲಿ ಮತ್ತು ಪ್ರಖ್ಯಾತ ಆನಂದ ಡಯಾಗ್ನೋಸ್ಟಿಕ್ಸ್ ಬೆಂಗಳೂರು ಮುಂತಾದ ಕಡೆಗಳಲ್ಲಿ ಅಳವಡಿಸಲಾಗಿದೆ.ಪುತ್ತೂರಿಗೆ ಪ್ರಥಮ ಬಾರಿಗೆ ವಿಟಮಿನ್ ಬಿ-12, ಪ್ಯಾರಾಥೈರಾಡ್ ಹಾರ್ಮೋನ್, ಸೀರಮ್ ಕಾರ್ಟಿಸಾಲ್, ಫಾಸ್ಟಿಂಗ್ ಇನ್ಸುಲಿನ್, ಆಂಟಿಮುಲ್ಲೇರಿಯನ್, ಹಾರ್ಮೋನ್, ಕ್ಯಾನ್ಸರ್ ಮತ್ತು ಟ್ಯೂಮರ್ ಮಾರ್ಕರ್ಸ್ಗಳಾದ ಸಿಎ-125, ಸಿಎ 19.9, ಸಿಇಎ, ಪಿಎಸ್ಎ, ಎಎ-ಪಿ, ರಕ್ತ ಹೀನತೆಗೆ ಫೆರಿಟಿನ್ ಸಂಬಂಽತ ಹಾಗು ಇನ್ನಿತರ ಹಾರ್ಮೋನ್ಸ್ ಪರೀಕ್ಷೆಗಳು ಕ್ಲಪ್ತ ಸಮಯದಲ್ಲಿ ಲಭ್ಯವಾಗಲಿದೆ.
ರೋಗಪತ್ತೆಯಾದಾಗ ಮಾತ್ರ ಚಿಕಿತ್ಸೆ ನೀಡಲು ಸಾಧ್ಯ.ಕ್ಷಣಕ್ಷಣವೂ ಹೊಸಹೊಸ ರೋಗಗಳು, ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಅವುಗಳನ್ನು ಸದೆ ಬಡಿಯಲು, ವೈದ್ಯಲೋಕದ ಜೊತೆ ಸಾಥ್ ನೀಡಿರುವುದು ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಹೆಗ್ಗಳಿಕೆ.ವೈದ್ಯರು ಮತ್ತು ರೋಗಿಗಳ ನಡುವಣ ವಿಶ್ವಾಸಾರ್ಹತೆ ಗಟ್ಟಿಯಾದಾಗ ರೋಗದ ತೀವ್ರತೆಯೂ ಕಡಿಮೆಯಾಗುತ್ತದೆ.ಈ ವಿಶ್ವಾಸಾರ್ಹತೆಯನ್ನು ಗಟ್ಟಿಗೊಳಿಸುವ ಕಾಯಕವನ್ನು ಚೇತನ್ ಪ್ರಕಾಶ್ ಕಜೆ ಅವರ ನೇತೃತ್ವದಲ್ಲಿ ವಿಭಿನ್ನ, ವಿಶಿಷ್ಟತೆಯ ಆರೋಗ್ಯ ಸೇವೆಯ ಮೂಲಕ ಧನ್ವಂತರಿ ಲ್ಯಾಬೋರೇಟರಿ ನಡೆಸುತ್ತಾ ಬಂದಿದೆ.