





ವಿಟ್ಲ: ಯಕ್ಷಗಾನ ಸಮಿತಿ ಮಾಣಿ ಇದರ ಆಶ್ರಯದಲ್ಲಿ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ 40ನೇ ವರ್ಷದ ತಾಳಮದ್ದಲೆ ಕೂಟ ನಡೆಯಿತು. ನಲ್ವತ್ತರ ಸಂಭ್ರಮದ ಸಲುವಾಗಿ ಕೂಟದ ಕಲಾವಿದರನ್ನು ಗೌರವಿಸಲಾಯಿತು.
ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಮಾಣಿಗುತ್ತು ಸಚಿನ್ ರೈಯವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಬಾಲವಿಕಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪ್ರಹ್ಲಾದ್ ಜೆ. ಶೆಟ್ಟಿ, ಧಾರ್ಮಿಕ ಪ್ರವಚನಕಾರ ಕೈಯ್ಯೂರು ನಾರಾಯಣ ಭಟ್, ಲೆಕ್ಕ ಪರಿಶೋಧಕ ಶಿವಾನಂದ ಪೈ, ಮಂಗಳೂರು ಜ್ಯೋತಿ ಲ್ಯಾಬ್ಸ್ ನ ಮ್ಯಾನೇಜರ್ ಆನಂದ ರಾವ್ ಭಾಗವಹಿಸಿದ್ದರು. ಯಕ್ಷಗಾನ ಸಮಿತಿಯ ಅಧ್ಯಕ್ಷ ಮೋಹನ್ ಪೈ ಮಾಣಿ ಸ್ವಾಗತಿಸಿದರು. ಸಮಿತಿಯ ಸದಸ್ಯ ಕೆ.ವಿ.ರಮಣ್ ಅಭಿನಂದನಾ ಮಾತುಗಳನ್ನಾಡಿದರು. ಕಾರ್ಯದರ್ಶಿ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.










