ವಸ್ತ್ರ ವಿತರಣೆ ಕಾರ್ಯಕ್ರಮ‌‌: ಜನರ ಜೊತೆ ಸಹಭೋಜನಕ್ಕಾಗಿ ವಸ್ತ್ರ ವಿತರಣೆ – ಸುಮಾ ಅಶೋಕ್ ರೈ

0

ಪುತ್ತೂರು: ಸುಮಾರು ಹತ್ತು ವರ್ಷಗಳಿಂದ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತೀ ದೀಪಾವಳಿಯಂದು ವಸ್ತ್ರ ವಿತರಣೆ ಕಾರ್ಯಕ್ರಮ‌ನಡೆಸುತ್ತಿದ್ದು ಇದು ಜನರ ಜೊತೆ ಸಹಭೋಜನ ನಡೆಸುವ ಏಕೈಕ ಉದ್ದೇಶವನ್ನು ಹೊಂದಿದ್ದು, ಜನತೆಯ ಆಶೀರ್ವಾದವೇ ನಮ್ಮ ಟ್ರಸ್ಟಿಗೆ ಆಧಾರವಾಗಿದೆ ಎಂದು ಟ್ರಸ್ಟಿನ‌ ಮುಖ್ಯಸ್ಥೆ ಸುಮಾ ಅಶೋಕ್ ರೈ ಹೇಳಿದರು.

ನ.13ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ‌ನಡೆಯಲಿರುವ ವಸ್ತ್ರ ವಿತರಣಾ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನುದ್ದೇಶಿಸಿ‌ ಮಾತನಾಡಿದರು.‌ ಸಭೆಯು ಟ್ರಸ್ಟ್ ಕಚೇರಿಯಲ್ಲಿ ನ.4ರಂದು ನಡೆಯಿತು.
ಹಲವು ವರ್ಷಗಳಿಂದ ಕೋಡಿಂಬಾಡಿ ರೈ ಎಸ್ಟೇಟ್ ನಲ್ಲಿ ನಡೆಯುತ್ತಿದ್ದ ವಸ್ತ್ರ ವಿತರಣಾ ಕಾರ್ಯಕ್ರಮವನ್ನು ಕಳೆದ ವರ್ಷ ಕಿಲ್ಲೆ ಮೈದಾನದಲ್ಲಿ ಆಯೋಜನೆ ಮಾಡಲಾಗಿತ್ತು. ಕಳೆದ ಬಾರಿ 30 ಸಾವಿರ ಮಂದಿ ಅನ್ನದಾನ ಹಾಗೂ ವಸ್ತ್ರ ದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಬಾರಿ 50 ಸಾವಿರಕ್ಕೂ‌ಮಿಕ್ಕಿ ಬಂಧುಗಳು ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕೆ ಬರುವ ಪ್ರತೀಯೊಬ್ಬರಿಗೂ ವಸ್ತ್ರದಾನ ಹಾಗೂ ಅನ್ನದಾನ ನಡೆಯುತ್ತದೆ. ಕಾರ್ಯಕ್ರಮದ ಆಹ್ವಾನ ನೀಡುವ ಉದ್ದೇಶದಿಂದ ಪ್ರತೀ ಗ್ರಾಮದಲ್ಲಿ ಟ್ರಸ್ಟ್ ಸಭೆಯನ್ನು ಆಯೋಜಿಸಲಾಗುತ್ತಿದೆ. ಅದೇ ದಿನ ಶಾಸಕರು ಹಾಗೂ ನಮ್ಮ ಟ್ರಸ್ಟಿನ ಪ್ರಮುಖರು, ಸದಸ್ಯರು ಫಲಾನುಭವಿಗಳ‌ಜೊತೆ ಸಹಭೋಜನ ಕಾರ್ಯಕ್ರಮವನ್ನು ನಡೆಸಲಿದ್ದು ಅದುವೇ ನಮ್ಮ‌ ಟ್ರಸ್ಟಿನ ಉದ್ದೇಶವಾಗಿದೆ. ಜಾತಿ, ಮತ, ಧರ್ಮ ರಾಜಕೀಯ ಬೇಧ ಭಾವವಿಲ್ಲದೆ ಪ್ರತೀಯೊಬ್ಬರೂ ಈ ಕಾರ್ಯಕ್ರಮದಲ್ಲಿ‌ಭಾಗವಹಿಸುವಂತೆ ಸುಮಾ ಅಶೋಕ್ ರೈ ಮನವಿ‌ ಮಾಡಿದರು. ಟ್ರಸ್ಟಿನ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ಸಹಿತ ಟ್ರಸ್ಟಿನ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ಧರು.

LEAVE A REPLY

Please enter your comment!
Please enter your name here