ಕೆಯ್ಯೂರು: ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್‌ನಿಂದ 15 ದಿನಗಳ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ

0

ಕೆಯ್ಯೂರು: ಕೆಯ್ಯೂರು ಗ್ರಾಮ ಪಂಚಾಯತ್ ಹಾಗೂ ಕಂಪಾನಿಯಾ ನೆಮ್ಮದಿ ವೆಲ್‌ನೆಸ್ ಸೆಂಟರ್‌ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ 15 ದಿನಗಳ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರವು ಕೆಯ್ಯೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ  ನ.4 ರಿಂದ 18ರ ವರೆಗೆ ಪೂರ್ವಾಹ್ನದಿಂದ ಸಂಜೆಯವರೆಗೆ ನಡೆಯಲಿದೆ.  ಶಿಬಿರದ ಉದ್ಘಾಟನೆಯನ್ನು ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ್ ರಾವ್ ಬೊಳಿಕ್ಕಲರವರು ದೀಪ ಪ್ರಜ್ವಲಿಸುವ ಮೂಲಕ ಉಧ್ಗಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು ವಹಿಸಿದರು. ಮುಖ್ಯ ಅತಿಥಿಗಳಾಗಿ ಕೆಯ್ಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ, ಮಾಜಿ ಸದಸ್ಯ ಮೋಹನ್ ರೈ ಬೇರಿಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ದೇರ್ಲ ಒಕ್ಕೂಟ ಮಾಜಿ ಅಧ್ಯಕ್ಷ ಚಂದ್ರಶೇಖರ ರೈ ಇಳಾಂತಜೆ, ಕ್ರಿಬ್ಕೋ ಮಂಗಳೂರು ಪ್ರಕಾಶ್ ಆಳ್ವ ಇಳಾಂತಜೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೂರಾರು ಮಂದಿ ಇದರ ಪ್ರಯೋಜನ ಪಡೆದುಕೊಂಡರು. ನೆಮ್ಮದಿ  ವೆಲ್‌ನೆಸ್ ಸೆಂಟರಿನ ಕೆ.ಪ್ರಭಾಕರ ಸಾಲ್ಯಾನ್‌ರವರು ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರದಿಂದ ಜನರಿಗೆ ಆದ ಪ್ರಯೋಜನದ ಮಾಹಿತಿಯನ್ನು ತಿಳಿಸಿದರು.  ಈ ಸಂದರ್ಭದಲ್ಲಿ ಕೆಯ್ಯೂರು ಗ್ರಾ.ಪಂ.ಸದಸ್ಯರು, ಗ್ರಾಮಸ್ಥರು ಉಪಸ್ಥಿತಿಯಿದ್ದರು.  ಕೆಯ್ಯೂರು ಗ್ರಾ.ಪಂ.ಪ್ರಧಾನ ಕಾರ್ಯದರ್ಶಿ ಸುರೇಂದ್ರ ರೈ ಇಳಾಂತಜೆ, ಸ್ವಾಗತಿಸಿ, ವಂದಿಸಿದರು. 

ಫೂಟ್ ಪಲ್ಸ್ ಥೆರಪಿ ಆರೋಗ್ಯದೆಡೆಗೆ ಒಂದು ಹೆಜ್ಜೆ:

ಮೊದಲ ಬಾರಿಗೆ ಭಾರತದಲ್ಲಿ ಪರಿಚಯಿಸಲಾಗಿದ್ದು ವೈದ್ಯಕೀಯವಾಗಿ ಪ್ರಾಮಾಣಿಕವಾಗಿದೆ. ರಕ್ತ ಪರಿಚಲನೆ ಮತ್ತು ನರಗಳ ಯಾವುದೇ ವಿವಿಧ ಸರಳ ಮತ್ತು ದೀರ್ಘಕಾಲಿನ ಸಮಸ್ಯೆಗಳನ್ನು ಔಷಧಿರಹಿತವಾಗಿ, ಅಡ್ಡ ಪರಿಣಾಮವಿಲ್ಲದೆ ನಿವಾರಿಸಬಹುದಾಗಿದೆ. 30 ನಿಮಿಷ SGWÉR ಮತ್ತು GIR ಥೆರಪಿಯಿಂದ ನಮ್ಮ ದೇಹದಲ್ಲಿ 5ಕಿ.ಮೀ ವಾಕಿಂಗ್ ಮಾಡಿದಷ್ಟು ರಕ್ತ ಸಂಚಾರಕ್ಕೆ ಸಹಕಾರಿಯಾಗುತ್ತದೆ.

ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ದೇಶದಾದ್ಯಂತ 350 ಶಾಖೆಗಳನ್ನು ಹೊಂದಿದ್ದು, 10 ಲಕ್ಷಕ್ಕಿಂತ ಹೆಚ್ಚಿನ ಜನರು ಪರಿಹಾರ ಕಂಡುಕೊಂಡಿದ್ದಾರೆ. 

ಈ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು

*ಮಧುಮೇಹ *ಅಧಿಕ ರಕ್ತದೊತ್ತಡ *ಸಂಧಿವಾತ  *ವೆರಿಕೋಸ್ ವೇನ್ *ಸ್ನಾಯು ಸೆಳೆತ *ಊತ  *ಪಾರ್ಕಿನ್‌ಸನ್ *ಸಯಾಟಿಕಾ *ಸರ್ವಿಕಲ್ ಸ್ಪಾಂಡಿಲೈಟಿಸ್  *ನಿದ್ರಾಹೀನತೆ *ಥೈರಾಯಿಡ್ *ಪಾರ್ಶ್ವವಾಯು  *ಬೆನ್ನುನೋವು *ಬೊಜ್ಜು ನಿವಾರಣೆ  *ಬಿ.ಪಿ/ಶುಗರ್, ಕುತ್ತಿಗೆ ನೋವು, ಸೊರಿಯಾಸಿಸ್  *ಸಕ್ಕರೆ ಕಾಯಿಲೆಯಿಂದ ಬರುವ ಪಾದದ ಉರಿ  *ಮಾಂಸಖಂಡಗಳ ಸೆಳೆತದಿಂದ ಮುಕ್ತಿ ಹಾಗೂ ಪರಿಚಲನೆ  ಮತ್ತು ಇನ್ನಿತರ ಎಲ್ಲಾ ಕಾಯಿಲೆಗಳಿಗೆ ಉತ್ತಮ ಪರಿಹಾರ

LEAVE A REPLY

Please enter your comment!
Please enter your name here