ಕೇಂದ್ರ ಗೃಹಮಂತ್ರಿ ವಿಶೇಷ ಕಾರ್ಯಾಚರಣೆ ಪದಕಕ್ಕೆ ಪ್ರವೀಣ್ ನೆಟ್ಟಾರು ಪ್ರಕರಣದ ತನಿಖಾಧಿಕಾರಿ ಎನ್.ಐ.ಎ ಇನ್‌ಸ್ಪೆಕ್ಟರ್ ಷಣ್ಮುಗಂ ಆಯ್ಕೆ

0

ಪುತ್ತೂರು: ಕೇಂದ್ರ ಗೃಹಮಂತ್ರಿ ವಿಶೇಷ ಕಾರ್ಯಾಚರಣೆ 2023ರ ಪದಕಕ್ಕೆ ಬೆಳ್ಳಾರೆ ಪ್ರವೀಣ್ ನೆಟ್ಟಾರು ಪ್ರಕರಣದ ತನಿಖಾಧಿಕಾರಿ ಎನ್.ಐ.ಎ ಇನ್‌ಸ್ಪೆಕ್ಟರ್ ಷಣ್ಮುಗಂ ಅವರು ಆಯ್ಕೆಗೊಂಡಿದ್ದಾರೆ.


ಉನ್ನತ ಮಟ್ಟದ ಯೋಜನೆ, ದೇಶ, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ಮತ್ತು ಸಮಾಜದ ದೊಡ್ಡ ವರ್ಗಗಳ ಭದ್ರತೆಯ ಮೇಲೆ ಮಹತ್ವದ ಪ್ರಭಾವ ಬೀರುವ ಕಾರ್ಯಾಚರಣೆಗಳನ್ನು ಗುರುತಿಸುವ ಉದ್ದೇಶದಿಂದ ಈ ಪದಕವನ್ನು ನೀಡಲಾಗುತ್ತಿತ್ತು. 2022ರ ಜುಲೈ 26ರಂದು ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ನಡೆದಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ತಂಡ ಸಕ್ರೀಯವಾಗಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಈ ತಂಡದಲ್ಲಿ ಆಗಿನ ಸಂಪ್ಯ ಎಸ್.ಐ ಪ್ರಸ್ತುತ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಸ್.ಐ ಉದಯ ರವಿ ಸಹಿತ 9 ಮಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಇದೀಗ ತಂಡದ ಎನ್.ಐ.ಎ ಇನ್‌ಸ್ಪೆಕ್ಟರ್ ಅವರು ಕೇಂದ್ರ ಗೃಹಮಂತ್ರಿ ವಿಶೇಷ ಕಾರ್ಯಾಚರಣೆ ಪದಕಕ್ಕೆ ಆಯ್ಕೆಗೊಂಡಿದ್ದಾರೆ. ಷಣ್ಮುಗಂ ಅವರು ಮೂಲತಃ ಮೈಸೂರಿವರೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here