ವಿವಿಧ ಬಗೆಯ ಲೈಟ್, ಫ್ಯಾನ್‌ ಗಳ ಸಂಪೂರ್ಣ ಹವಾನಿಯಂತ್ರಿತ ಮಳಿಗೆ ‘ಹೈಟೆಕ್ ಲೈಟಿಂಗ್ ಹೌಸ್’ -ಏಳ್ಮುಡಿಯ ಎಂ.ಜಿ.ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಶುಭಾರಂಭ

0

ಬೆಳೆಯುತ್ತಿರುವ ಪುತ್ತೂರಿಗೆ ಇಂತಹ ಸಂಸ್ಥೆಗಳು ಅಗತ್ಯ: ಅಶೋಕ್ ಕುಮಾರ್ ರೈ
ಬಹಳ ಸುಂದರವಾದ ಅಚ್ಚುಕಟ್ಟಿನ ವ್ಯವಸ್ಥೆ : ಹೇಮನಾಥ ಶೆಟ್ಟಿ ಕಾವು
ಈಗಿನ ಕಾಲಘಟ್ಟಕ್ಕೆ ಬೇಕಾದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ: ಎಂ.ಎಸ್.ಮಹಮ್ಮದ್

ಪುತ್ತೂರು: ಕಳೆದ 7 ವರುಷಗಳಿಂದ ದರ್ಬೆಯ ಗಿರಿಜಾ ಕ್ಲಿನಿಕ್‌ನ ಪಕ್ಕದಲ್ಲಿರುವ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ವ್ಯವಹರಿಸುತ್ತಿದ್ದ ಫ್ಯಾನ್ ಹಾಗೂ ವಿವಿಧ ಬಗೆಯ ಲೈಟ್ ಗಳ ಮಳಿಗೆ ’ಹೈಟೆಕ್ ಲೈಟಿಂಗ್ ಹೌಸ್’ ಏಳ್ಮುಡಿಯ ಎಂ.ಜಿ.ಕಾಂಪ್ಲೆಕ್ಸ್ ನಲ್ಲಿರುವ ಅಪೋಲೋ ಮೆಡಿಕಲ್ ನ ಪ್ರಥಮ ಮಹಡಿಗೆ ಸ್ಥಳಾಂತರಗೊಂಡು ನ.6ರಂದು ಉದ್ಘಾಟನೆಗೊಂಡಿತು.


ಶಾಸಕ ಅಶೋಕ್ ಕುಮಾರ್ ರೈರವರು ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ ಬೆಳೆಯುತ್ತಿರುವ ಪುತ್ತೂರಿಗೆ ಅತೀ ಅಗತ್ಯವಿರುವ ಸಂಸ್ಥೆ ಇದಾಗಿದ್ದು ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸಲಿ. ಕ್ವಾಲಿಟಿ ವಸ್ತುಗಳನ್ನು ಮಾರಾಟ ಮಾಡುವುದರೊಂದಿಗೆ ಸಂಸ್ಥೆ ಮತ್ತಷ್ಟು ಜನಪ್ರಿಯತೆಯನ್ನು ಪಡೆಯಲಿ. ಇತರ ಉದ್ಯಮಗಳ ಜೊತೆಗೆ ಇಂತಹ ಉದ್ಯಮಗಳು ಬೆಳೆದಾಗ ಪುತ್ತೂರು ಬೆಳೆಯಲು ಸಾಧ್ಯ. ಸಂಸ್ಥೆ ಇನ್ನಷ್ಟು ಬೆಳಯಲು ಸಾಧ್ಯ ಎಂದರು.


ಕೆ.ಪಿ.ಸಿ.ಸಿ. ಸಂಯೋಜಕ ಹೇಮನಾಥ ಶೆಟ್ಟಿ ಕಾವುರವರು ಮಾತನಾಡಿ ನಾವು ಇಂತಹ ಮಳಿಗೆಗಳನ್ನು ಇತರ ಪೇಟೆ ಪಟ್ಟಣಗಳಲ್ಲಿ ಮಾತ್ರ ನೋಡಲು ಸಾಧ್ಯ. ಆದರೆ ಇದೀಗ ಬೆಳೆಯುತ್ತಿರುವ ನಮ್ಮ ಪುತ್ತೂರಿನಲ್ಲಿ ಪ್ರಾರಂಭವಾಗಿರುವುದು ಸಂತಸ ತಂದಿದೆ. ಬಹಳ ಸುಂದರವಾದ ಅಚ್ಚುಕಟ್ಟಿನ ವ್ಯವಸ್ಥೆ ಇಲ್ಲಿದೆ. ಗ್ರಾಹಕರು ತಮಗಿಷ್ಟವಾದ ವಸ್ತುಗಳನ್ನು ಆಯ್ಕೆ ಮಾಡಲು ವಿಪುಲ ಅವಕಾಶವನ್ನು ಕಲ್ಪಿಸಲಾಗಿದೆ. ಸಂಸ್ಥೆ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.


ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್ ರವರು ಮಾತನಾಡಿ ನಾವೆಲ್ಲರೂ ಸಂಸ್ಥೆಯ ಗ್ರಾಹಕರಾಗಬೇಕಾಗಿದೆ. ಸಂಸ್ಥೆಯಲ್ಲಿ ಈಗಿನ ಕಾಲಘಟ್ಟಕ್ಕೆ ಬೇಕಾದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಹೈಟೆಕ್ ಲೈಟಿಂಗ್ ಹೌಸ್ ಬೆಳೆಯುತ್ತಿರುವ ಪುತ್ತೂರಿಗೆ ಬೆಳಕು ನೀಡುವ ಸಂಸ್ಥೆಯಾಗಿ ಬೆಳೆಯಲಿ ಎಂದರು.


ಅಸಯ್ಯದ್ ಆಲಿ ತಂಞಳ್ ಕುಂಬೋಳ್, ಅಸಯ್ಯದ್ ಪೂಕೋಯ ತಂಞಳ್ ಪುತ್ತೂರುರವರು ದುವಾ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಜಿಲ್ಲಾ ಕಾಂಗ್ರೆಸ್ ಸಂಯೋಜಕರಾದ ಮೊಹಮ್ಮದ್ ಬಡಗನ್ನೂರು, ಆಲಿಕುಂಞಿ ಹಾಜಿ ಕೊರಿಂಗಿಲ, ಏಳ್ಮುಡಿ ಎಂ.ಜಿ. ಕಾಂಪ್ಲೆಕ್ಸ್ ನ ಮಾಲಕರಾದ ಎಂ.ಜಿ.ರಝಾಕ್, ಮೊಹಮ್ಮದ್ ಹಾಜಿ ಕುಕ್ಕುವಳ್ಳಿ, ಪುತ್ತೂರು ತಾಜ್ ಅಸೋಸಿಯೇಶನ್‌ನ ಸಿದ್ದಿಕ್, ಜಿ.ಹೆಚ್. ಆಯೂಬ್ ವಹಬಿ ಜೆ.ಎಮ್ ಕೊರಿಂಗಿಲ, ಹಮೀದ್ ಕೊಮ್ಮೆಮಾರ್, ಮೂಸ ಮದನಿ ಇರ್ದೆ, ರಮೇಶ್ ಶೆಟ್ಟಿ ಕೊಮ್ಮಂಡ ಸಹಿತ ಹಲವಾರು ಗಣ್ಯರು ಆಗಮಿಸಿ ಶುಭಹಾರೈಸಿದರು.ಸಂಸ್ಥೆಯ ಮಾಲಕರಾದ ನೌಫಲ್ ಬೆಟ್ಟಂಪಾಡಿ ಸ್ವಾಗತಿಸಿ, ವಂದಿಸಿದರು.


ವಿಶಾಲವಾದ ಮಳಿಗೆ :
ಇತರ ದೊಡ್ಡದೊಡ್ಡ ಪೇಟೆ ಪಟ್ಟಣಳಲ್ಲಿ ಕಾಣಸಿಗುವಂತಹ ಶೋರೂಂ ಬೆಳೆಯುತ್ತಿರುವ ನಮ್ಮ ಪುತ್ತೂರಿನಲ್ಲಿ ತನ್ನ ಗ್ರಾಹಕವರ್ಗಕ್ಕೆ ಸೇವೆ ನೀಡಬೇಕೆನ್ನುವ ದೃಷ್ಟಿಯಿಂದ ಮಾಲಕರು ಇದೀಗ ಸಂಸ್ಥೆಯನ್ನು ವಿಸ್ತೃತ ಕಟ್ಟಡಕ್ಕೆ ಸ್ಥಳಾಂತರ ಮಾಡಿದ್ದಾರೆ. ಹೊಸ ಶೋರೂಂ ಮೂರು ಅಂತಸ್ತನ್ನು ಹೊಂದಿದ್ದು, ಪ್ರಥಮ ಮಹಡಿಯಲ್ಲಿ ಶೋಲೈಟ್, ಎರಡನೇ ಅಂತಸ್ತಿನಲ್ಲಿ ಫ್ಯಾನ್ಸಿ ಲೈಟ್ ಹಾಗೂ ಫ್ಯಾನ್ ಗಳ ಬೃಹತ್ ಸಂಗ್ರಹವಿದೆ. ಮೂರನೇ ಅಂತಸ್ತಿನಲ್ಲಿ ವಿಶಾಲವಾದ ದಾಸ್ತಾನು ಕೊಠಡಿಯನ್ನು ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತ ಶೋರೂಂ ಇದಾಗಿದ್ದು, ಗ್ರಾಹಕರಿಗೆ ತಮ್ಮಿಷ್ಟದ ವಸ್ತುಗಳ ಆಯ್ಕೆಗೆ ವಿಫುಲ ಅವಕಾಶವನ್ನು ಕಲ್ಪಿಸಲಾಗಿದೆ.

ಗ್ರಾಹಕರ ಸಹಕಾರಕ್ಕೆ ಆಭಾರಿಯಾಗಿದ್ದೇವೆ
ಕಳೆದ ಏಳು ವರುಷಗಳಿಂದ ದರ್ಬೆಯ ಗಿರಿಜಾ ಕ್ಲಿನಿಕ್ ನ ಪಕ್ಕದಲ್ಲಿರುವ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ವ್ಯವಹರಿಸುತ್ತಿದ್ದ ನಮ್ಮ ಸಂಸ್ಥೆಯು ಇದೀಗ ಏಳ್ಮುಡಿಯ ಎಂ.ಜಿ.ಕಾಂಪ್ಲೆಕ್ಸ್ ನ ವಿಸ್ತೃತ ಕಟ್ಟಡಕ್ಕೆ ಸ್ಥಳಾಂತರಗೊಂಡು ಉದ್ಘಾಟನೆ ಗೊಂಡಿದೆ. ಸಂಸ್ಥೆಯು ಉದ್ಘಾಟನಾ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದ್ದು, ಮುಂದಿನ ಕೆಲದಿನಗಳವರೆಗೆ ಕೊಡುಗೆಗಳು ಮುಂದುವರೆಯಲಿದೆ. ಪ್ರತೀ ಫ್ಯಾನ್ಸಿ ಲೈಟ್ ಗಳ ಮೇಲೆ ಶೇಕಡಾ 30 ರಿಂದ ಶೇಕಡಾ 50ರ ವರೆಗೆ ರಿಯಾಯಿತಿ ದೊರೆಯಲಿದೆ. ಕ್ರಾಂಮ್ಟನ್ ಕಂಪೆನಿಯ ಫ್ಯಾನ್ ಗಳ ಅಽಕೃತ ಡೀಲರ್ ಆಗಿರುವ ನಾವು 2599ರೂಪಾಯಿಯ ಕ್ರಾಂಮ್ಟನ್ ಕಂಪೆನಿಯ ಫ್ಯಾನ್ ಗಳು 2 ವರುಷ ವ್ಯಾರಂಟಿಯೊಂದಿಗೆ ಕೇವಲ 1499 ರೂಪಾಯಿಗೆ ನೀಡುತ್ತಿದ್ದೇವೆ. ಫಿಲಿಪ್ಸ್ ಕಂಪೆನಿಯ 9ವಾಲ್ಟ್ ಎಲ್.ಇ.ಡಿ. ಬಲ್ಬುಗಳು ಕೇವಲ 70 ರೂಪಾಯಿಗೆ ನೀಡುತ್ತಿದ್ದೇವೆ. 599 ಬೆಲೆಯ ಫಿಲಿಪ್ಸ್ ಕಂಪೆನಿಯ ಟ್ಯೂಬ್ ಲೈಟ್‌ಗಳು ಕೇವಲ 170ರೂಪಾಯಿಗೆ ನೀಡುತ್ತಿದ್ದೇವೆ. ಕಳೆದ ಹಲವಾರು ವರುಷಗಳಿದ ಗ್ರಾಹಕರೆಲ್ಲರೂ ನಮಗೆ ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದಾರೆ ಅವರೆಲ್ಲರಿಗೂ ನಾವು ಆಭಾರಿಯಾಗಿದ್ದೆವೆ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.
-ನೌಫಾಲ್ ಬೆಟ್ಟಂಪಾಡಿ, ಮಾಲಕರು

LEAVE A REPLY

Please enter your comment!
Please enter your name here