ಪುತ್ತೂರು: ಪ್ರಮುಖ ಕಂಪನಿಯ ಉಪಯೋಗಿಸಿದ ಕಾರುಗಳ ಖರೀದಿ ಹಾಗೂ ಮಾರಾಟದ ಜೊತೆಗೆ ಸಾಲ ಸೌಲಭ್ಯಗಳನ್ನು ಕೂಡ ಗ್ರಾಹಕ ವರ್ಗಕ್ಕೆ ತ್ವರಿತಗತಿಯಲ್ಲಿ ಕಲ್ಪಿಸಿಕೊಡಲಿರುವಂತಹ ಪ್ರಶಾಂತ್ ಯಾದವ್ ಮಾಲೀಕತ್ವದ ವಿಶಾಲ ಮಳಿಗೆ ಶ್ರೀ ಕೃಷ್ಣ ಕಾರ್ಸ್ ಕೆಮ್ಮಾಯಿಯ ವಿಷ್ಣು ಸಂಕೀರ್ಣದಲ್ಲಿ ನ.10 ರಂದು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶುಭಾರಂಭಗೊಂಡಿತು. ಮಾಲೀಕರ ಹೆತ್ತವರಾದ ಸೀತಾ ನಾರಾಯಣ ಮಣಿಯಾಣಿ ದೀಪ ಪ್ರಜ್ವಲನೆ ಮಾಡಿ ಉದ್ಘಾಟನೆ ನೆರವೇರಿಸಿದರು. ಅರ್ಚಕ ರಾಮ ಪ್ರಸಾದ್ ಭಟ್ ಸಂಪ್ಯ ಪೂಜಾ ಕೈಂಕರ್ಯ ನೆರವೇರಿಸಿ, ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಹರಸಿದರು.
ಸಂಕೀರ್ಣದ ಮಾಲೀಕ ದೇವಪ್ಪ ಗೌಡ ಕೆಮ್ಮಾಯಿ, ಅರಣ್ಯ ಇಲಾಖೆ ಉದ್ಯೋಗಿ ತೇಜ್ ಕುಮಾರ್, ವಿಶ್ವ ಏಕ ಕೆಮ್ಮಾಯಿ, ಮನೋಜ್ ಏಕ ಕೆಮ್ಮಾಯಿ, ಶಿಲ್ಪಾಶ್ರೀ ತೇಜ್ ಕುಮಾರ್, ಬನ್ನೂರು ಗ್ರಾ.ಪಂ.ಅಧ್ಯಕ್ಷೆ ಸ್ಮೀತಾ, ಕೋಡಿಂಬಾಡಿ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಮಾ. ಅವೀಶ್ ಸೇಡಿಯಾಪು, ಕೃಷ್ಣ ಮಣಿಯಾಣಿ ಕಕ್ಕೆಪದವು, ಸೇಡಿಯಾಪು ಕೋಸ್ಟಲ್ ಕೊಕನಟ್ ಇಂಡಸ್ಟ್ರೀಸ್ ಮಾಲೀಕ ಡೆನ್ನೀಸ್ ಮಸ್ಕರೇನ್ಹಸ್, ಧನರಾಜ್ ಭಟ್ ಬಡೆಕ್ಕಿಲ, ಬೊಳುವಾರು ಸ್ನೇಹ ಸಿಲ್ಕ್ ಮಾಲೀಕ ಸತೀಶ್ ಎಸ್, ಸುಬ್ರಹ್ಮಣ್ಯ ಅಟೋವರ್ಕ್ಸ್ ಮಾಲೀಕ ನಿತೀಶ್, ಸೈಂಟ್ ಅಂತೋನಿ ವುಡ್ ವರ್ಕ್ಸ್ ನ ಮೆಲ್ವಿನ್ ಜ್ಯೋತಿ, ಅಭಿನ್ ಇಂಜಿನಿಯರಿಂಗ್ ವರ್ಕ್ಸ್ ನ ಜಯರಾಮ್, ಶ್ರೀಕಾಂತ್ ಯಾದವ್, ಶರತ್ ಸಹಿತ ಹಲವಾರು ಅತಿಥಿಗಳು ಹಾಜರಿದ್ದರು. ಸುರೇಂದ್ರ, ರಮೇಶ್, ಶಶಿಕಾಂತ್, ತಮ್ಮು ರೈ ಸಾಮೆತ್ತಡ್ಕ, ಪರಮೇಶ್ವರ ಪೂಜಾರಿ, ಬಾಲಕೃಷ್ಣ ಗೌಡ, ಮಂಜುನಾಥ್, ಚಂದ್ರಶೇಖರ ಹಾಗೂ ವಿನುತ್ ಬಳಗ ವಿವಿಧ ರೀತಿಯಲ್ಲಿ ಸಹಕಾರ ನೀಡಿದರು. ಸಂತೋಷ್ ಕುಲಾಲ್ ಸೇಡಿಯಾಪು ನಿರ್ವಹಿಸಿ, ಮಾಲೀಕ ಪ್ರಶಾಂತ್ ಯಾದವ್ ಸ್ವಾಗತಿಸಿ, ನೇತ್ರಾ ಪ್ರಶಾಂತ್ ಹಾಗೂ ಸಾನ್ವಿ ಪ್ರಶಾಂತ್ ವಂದಿಸಿದರು.
ಮೊದಲ ಗ್ರಾಹಕರಾದ ಡೆನ್ನಿಸ್ ಮಸ್ಕರೇನ್ಹಸ್ :
ಸೇಡಿಯಾಪು ಕೋಸ್ಟಲ್ ಕೊಕನಟ್ ಸಂಸ್ಥೆ ಮಾಲೀಕ ಡೆನ್ನಿಸ್ ಮಸ್ಕರೇನ್ಹಸ್ ನೂತನ ಮಳಿಗೆಗೆ ಪ್ರಥಮ ಗ್ರಾಹಕರಾಗಿ , ಕಾರು ಖರೀದಿಸಿದರು. ಈ ವೇಳೆ ಮಾಲೀಕರ ತಂದೆ ನಾರಾಯಣ ಮಣಿಯಾಣಿ ಕಾರಿನ ಕೀ ನೀಡಿ ಶುಭಹಾರೈಸಿದರು.
ಯಾವುದೇ ಹಳೇಯ ಕಾರುಗಳ ಖರೀದಿ ಮತ್ತು ಮಾರಾಟ ವ್ಯವಹಾರವನ್ನು ಉತ್ತಮ, ಯೋಗ್ಯ ರೀತಿಯ ಬೆಲೆಯೊಂದಿಗೆ ಸಂಸ್ಥೆಯೂ ಒದಗಿಸಿಕೊಡಲು ಸದಾ ಬದ್ಧವಾಗಿದ್ದು, ಸಾಲ ಸೌಲಭ್ಯಗಳ ವ್ಯವಸ್ಥೆಯೂ ತ್ವರಿತವಾಗಿ ಸಿಗಲಿದ್ದು, ಗ್ರಾಹಕರೆಲ್ಲಾರೂ ಸಹಕಾರ ನೀಡಿ, ಪ್ರೋತ್ಸಾಹಿಸುವಂತೆ ಮಾಲೀಕ ಪ್ರಶಾಂತ್ ಯಾದವ್ ಎಲ್ಲರ ಬೆಂಬಲ ಕೋರಿದ್ದಾರೆ.