ಪುತ್ತೂರಿನಲ್ಲಿ ಹೆಸರಾಂತ ಸುಡುಮದ್ದು ವಿತರಕ ಸಂಸ್ಥೆ ಎ ವಿ ಪೈ ಪಟಾಕಿ ಮಳಿಗೆ ಕಿಲ್ಲೆ ಮೈದಾನಕ್ಕೆ ಸ್ಥಳಾಂತರ

0

ಪುತ್ತೂರು: ಸುಡುಮದ್ದುಗಳ ವಿತರಣೆಯಲ್ಲಿ ಕಳೆದ 68 ವರುಷಗಳ ಅನುಭವದೊಂದಿಗೆ ಪಾಮಾಣಿಕ ಸೇವೆಯನ್ನು ನೀಡಿ ಜನತೆಯ ಮನಗೆದ್ದಿರುವ, ಕೊಂಬೆಟ್ಟು ವರದರಾಯ ಪೈ ಇವರ ಮಾಲೀಕತ್ವದಲ್ಲಿ ಇಲ್ಲಿನ ಕೋರ್ಟ್‌ ರೋಡ್ ನಲ್ಲಿ ವ್ಯವಹರಿಸುತ್ತಿರುವ ಎ ವಿ ಪೈ ಪಟಾಕಿ ಮಳಿಗೆಯು ತಾತ್ಕಾಲಿಕವಾಗಿ ಪುತ್ತೂರಿನ ಕಿಲ್ಲೆ ಮೈದಾನಕ್ಕೆ ಸ್ಥಳಾಂತರಗೊಂಡಿದೆ. ‌

ಸಂಸ್ಥೆಯ ಗ್ರಾಹಕರು ಈ ಮೊದಲಿನಂತೆಯೇ ನಮ್ಮಲ್ಲಿ ವ್ಯವಹರಿಸುವಂತೆ ಮಾಲೀಕರು ವಿನಂತಿಸಿದ್ದಾರೆ. ದೀಪಗಳ ಹಬ್ಬಕ್ಕೆ ಪರಿಸರ ಸ್ನೇಹಿ, ರಾಸಾಯನಿಕ ಮುಕ್ತ ಹಸಿರು ಪಟಾಕಿಗಳು, ವರುಷದ ಎಲ್ಲಾ ದಿನಗಳಲ್ಲೂ ನಮ್ಮಲ್ಲಿ ಲಭ್ಯ. ದೈವ ಕೋಲ, ನೇಮ, ಯಕ್ಷಗಾನ, ಜಾತ್ರೆ, ಬ್ರಹ್ಮಕಲಶ, ಮದುವೆ, ಹಾಗೂ ಇನ್ನಿತರ ಹಲವು ಶುಭಕಾರ್ಯಗಳಿಗೆ ಜೊತೆಗೆ ಕೃಷಿಕಾರ್ಯ ಮಾಡುವ ವರ್ಗಕ್ಕೂ ಅಗತ್ಯವಿರುವ ಪಟಾಕಿ ಲಭ್ಯವಿದೆ. ಎಲ್ಲಾ ಋತುವಿನಲ್ಲೂ ಪಟಾಕಿ ಸ್ಪರ್ಧಾತ್ಮಕ ದರದಲ್ಲಿ ಸಿಗುತ್ತದೆಂದು ಮಾಲಕ ವರದರಾಯ ಪೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here