ಪುತ್ತೂರು: ಜೆಸಿಐ ಪುತ್ತೂರು, ಕಹಳೆನ್ಯೂಸ್ ನೇತೃತ್ವದಲ್ಲಿ ದೀಪಾ ಇವೆಂಟ್ಸ್ ಸಂಚಾಲಕತ್ವದಲ್ಲಿ ಮುಳಿಯ ಸಂಸ್ಥೆ ನೇತೃತ್ವದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ಗೂಡುದೀಪದ ಸ್ಪರ್ಧೆ ಕಾರ್ಯಕ್ರಮವನ್ನು ಶಾಸಕ ಅಶೋಕ್ ರೈ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ಹಳೆಯ ಕಾಲದಲ್ಲಿ ಮನೆಯಲ್ಲೇ ಗೂಡುದೀಪ ತಯಾರು ಮಾಡುತ್ತಿದ್ದರು. ಆದರೆ ಈಗ ಎಲ್ಲವೂ ರೆಡಿಮೆಡ್ ಆಗಿ ಸಿಗುವ ಕಾರಣ ಸಾಂಪ್ರದಾಯಿಕ ಶೈಲಿಯ ಗೂಡುದೀಪಕ್ಕೆ ಪ್ರೋತ್ಸಾಹ ನೀಡುವ ಅಗತ್ಯತೆ ಇದೆ. ಗೂಡುದೀಪ ತಯಾರಿಕೆಯೂ ಒಂದು ಕಲೆಯಾಗಿದೆ. ಅದನ್ನು ಉಳಿಸುವ ಕಾರ್ಯ ನಡೆಯಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಶ್ರೀ ಮಹಾಲಿಂಹೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್, ಕಹಳೆ ನ್ಯೂಸ್ ನ ಶ್ಯಾಂ, ಜೆಸಿಐ ಅಧ್ಯಕ್ಷ ಸುಹಾಸ್ ಮರಿಕೆ, ರಂಗನಟ ರವಿರಾಮಕುಂಜ ಉಪಸ್ಥಿತರಿದ್ದರು.