ಪುತ್ತೂರು: ಕಳೆದ 21 ವರ್ಷಗಳಿಂದ ಚಿನ್ನಾಭರಣಗಳ ಉದ್ಯಮದಲ್ಲಿ ವಿವಿಧ ವಿನ್ಯಾಸದ ಚಿನ್ನಾಭರಣಗಳನ್ನು ತಯಾರಿಸಿಕೊಟ್ಟು ಅಸಂಖ್ಯಾತ ಗ್ರಾಹಕರ ಮೆಚ್ಚುಗೆಗೆ ಪಾತ್ರರಾದ, ಕೋರ್ಟ್ ರಸ್ತೆಯ ಡಿಸೈನರ್ ಕಾಂಪ್ಲೆಕ್ಸ್ನಲ್ಲಿ ವ್ಯವಹರಿಸುತ್ತಿರುವ ಆಶಾ ಜ್ಯುವೆಲ್ ವರ್ಕ್ಸ್ 22ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿದ್ದು ದೀಪಾವಳಿ ಪ್ರಯುಕ್ತ ನ.13ರಂದು ಬೆಳಿಗ್ಗೆ ಧನಲಕ್ಷ್ಮೀಪೂಜೆ ನಡೆಯಿತು.
ಬೆಳಿಗ್ಗೆ ಬೆಳ್ಳಾರೆ ವಿಶ್ವೇಶ್ವರ ಭಟ್ರವರ ಪೌರೋಹಿತ್ಯದಲ್ಲಿ ಪೂಜಾ ವಿಧಿವಿಧಾನ ನಡೆಯಿತು. ಸಂಸ್ಥೆಯ ಮಾಲಕ ಡಿ. ಸಂತೋಷ್ ಕುಮಾರ್ ಮತ್ತು ಮಮತಾ ಸಂತೋಷ್ ದಂಪತಿ ಅತಿಥಿಗಳನ್ನು ಸ್ವಾಗತಿಸಿದರು. ಸುಬ್ರಾಯ ಆಚಾರ್ಯ, ಆಶಾಲತಾ ಆಚಾರ್ಯ, ಸೀತಾರಾಮ ಆಚಾರ್ಯ ಶಾಂತಿನಗರ, ಕೃಷ್ಣಯ್ಯ ಆಚಾರ್ಯ, ಶ್ರೀನಿವಾಸ ಆಚಾರ್ಯ, ಭಾನುಪ್ರಕಾಶ್ ಆಚಾರ್ಯ, ಉದಯ ಕುಮಾರ್, ಶ್ರೀಧರ ಆಚಾರ್ಯ, ಪ್ರಕಾಶ ಆಚಾರ್ಯ, ವಾಸು ಆಚಾರ್ಯ, ರಾಜೇಶ ಆಚಾರ್ಯ, ಗಣೇಶ ಆಚಾರ್ಯ, ಅಶೋಕ ಆಚಾರ್ಯ, ಲಕ್ಷ್ಮಣ ಆಚಾರ್ಯ, ಸವಿತಾ ಪುಣಚ, ಶಿವಾನಿ, ಸಾನ್ವಿ, ಮಾನ್ವಿ ಸಹಕರಿಸಿದರು.