ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯಲ್ಲಿ ದೀಪಾವಳಿ ಆಚರಣೆ

0

ಪುತ್ತೂರು: ಒಡಿಯೂರು ಶ್ರೀ ಗುರುದೇವಾ ಬಳಗ , ವಜ್ರಮಾತಾ ವಿಕಾಸ ಕೇಂದ್ರ , ಗ್ರಾಮ ವಿಕಾಸ ಯೋಜನೆ ಹಾಗೂ ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಇವುಗಳ ಆಶ್ರಯದಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಣೆ ಕಾರ್ಯಕ್ರಮ ಇಲ್ಲಿನ ಕಣ್ಣನ್ ಕಾಂಪ್ಲೆಕ್ಸ್ ಸಭಾಭವನದಲ್ಲಿ ನ.13ರಂದು ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಇದರ ನಿವೃತ್ತ ಪ್ರಾಂಶುಪಾಲ ಗೋಪಿನಾಥ ಶೆಟ್ಟಿ ಮಾತನಾಡಿ , ನಾನಾ ರೀತಿಯ ಎಲ್ಲಾ ಹಿಂದೂ ಧರ್ಮಿಯರು,ಭೇದ ಭಾವವಿಲ್ಲದೇನೆ ಸಂಭ್ರಮ ,ಸಡಗರದಿಂದ ಆಚರಣೆ ಮಾಡುವಂತಹ ಹಬ್ಬವೇ ಬೆಳಕಿನ ಹಬ್ಬ ದೀಪಾವಳಿ. ಈ ಹಬ್ಬವೂ ಎಲ್ಲರ ಬಾಳಿನಲ್ಲೂ ನೆಮ್ಮದಿ ತರಲಿ ಹಾಗೂ ಸಮಾಜಕ್ಕೂ ಒಳ್ಳೆಯದಾಗಲಿಯೆಂದು ಶುಭ ಹಾರೈಸಿದರು.
ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗ ಇದರ ಪ್ರ.ಕಾ. ಹರಿಣಾಕ್ಷಿ ಜೆ .ಶೆಟ್ಟಿ ಮಾತನಾಡಿ , ಅಂಧಕಾರವನ್ನು ನೀಗಿಸಿ , ಮನಸ್ಸಿನ ಕಲ್ಮಶಗಳನ್ನು ತೊಡೆದುಹಾಕಿ , ಬೆಳಕನ್ನು ತುಂಬುವುದೇ ದೀಪಾವಳಿ ಆಚರಣೆಯ ಉದ್ದೇಶ ಜೊತೆಗೆ ಈ ಸಂಪ್ರದಾಯ ಮುಂದಿಗೂ ಬೆಳೆಯಲು ಹಾಗೂ ಉಳಿಯಲು ಸಹಕಾರಿಯೆಂದು ಹೇಳಿದರು.

ಯಕ್ಷಗಾನ ಕಲಾವಿದ ದಾಸಪ್ಪ ರೈ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗುರುದೇವಾ ಸೇವಾ ಬಳಗ ಇದರ ಅಧ್ಯಕ್ಷ ಸುದೀರ್ ನೊಂಡಾ, ಗ್ರಾಮ ವಿಕಾಸ ಯೋಜನೆ ಮೇಲ್ವಿಚಾರಕಿ ಸವಿತಾ ರೈ , ಒಡಿಯೂರು ಸೌಹಾರ್ದ ಸಹಕಾರಿ ಅಧ್ಯಕ್ಷೆ ಪವಿತ್ರ ವೇದಿಕೆಯಲ್ಲಿ ಹಾಜರಿದ್ದರು.
ಗುರು ದೇವಾ ಸೇವಾ ಬಳಗದ ಗೌರವ ಸಲಹೆಗಾರ ಜಯಪ್ರಕಾಶ್ ರೈ , ಗುರು ದೇವಾ ಸೇವಾ ಬಳಗದ ಜೊತೆ ಕಾರ್ಯದರ್ಶಿ ಭವಾನಿ ಶಂಕರ ಶೆಟ್ಟಿ , ವಜ್ರಮಾತ ಸೇವಾ ಬಳಗ ಅಧ್ಯಕ್ಷೆ ನಯನಾ ರೈ ಸಹಿತ ವಿವಿಧ ಸೇವಾ ಬಳಗ ಇದರ ಕಾರ್ಯಕಾರಿಣಿ ಸದಸ್ಯರು ಹಾಗೂ ಸಿಬ್ಬಂದಿಗಳೆಲ್ಲರೂ ಹಾಜರಿದ್ದರು.
ಇದಕ್ಕೂ ಮೊದಲು ಸಹಕಾರಿ ಕಛೇರಿಯಲ್ಲಿ ಧನಲಕ್ಷೀ ಪೂಜಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವು ಪ್ರಾರ್ಥನೆ ಮೂಲಕ ಆರಂಭಗೊಂಡಿತು.ಅಶೋಕ ಕುಮಾರ್ ನಿರೂಪಿಸಿ, ಭವಾನಿ ಶಂಕರ್ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here