ಪುಣಚ: ಪುಣಚ ಗ್ರಾಮ ವಿಕಾಸ ವತಿಯಿಂದ ಸಾಮರಸ್ಯದ ತುಡಾರ್ ಹಚ್ಚೋಣ ಬನ್ನಿ ಕಾರ್ಯಕ್ರಮ, ಗೋಪೂಜೆ, ತುಳಸಿ ಪೂಜೆಯೊಂದಿಗೆ ಬೈಲು ದರ್ಖಾಸ್ ನಲ್ಲಿ ನ.13ರಂದು ನಡೆಯಿತು.
ಪುಣಚ ಮಹಿಷಮರ್ದಿನಿ ದೇವಸ್ಥಾನದಿಂದ ಶ್ರೀ ಮಹಿಷಮರ್ದಿನಿ ಸಿಂಗಾರಿ ಮೇಳ ತಂಡದ ಸದಸ್ಯರ ಚಂಡವಾದನ, ಶ್ರೀ ಮಹಮ್ಮಾಯಿ ಭಜನಾ ತಂಡದ ಕುಣಿತ ಭಜನೆಯ ಮುಖಾಂತರ ಸಾಮರಸ್ಯದ ತುಡರ್ ಬೆಳಗಿಸಿ ದೀಪಗಳ ಹಬ್ಬದ ಮೆರವಣಿಗೆ ಬೈಲು ದರ್ಖಾಸ್ ವರೆಗೆ ನಡೆದು, ಬಳಿಕ ಗೋಪೂಜೆ ತುಳಸಿಪೂಜೆ ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಆಶೀರ್ವಚನ ನೀಡಿ ಶುಭ ಸಂದೇಶ ನುಡಿದರು. ಮುಖ್ಯ ಅತಿಥಿಗಳಾಗಿ ವಿವೇಕಾನಂದ ಪಾಲಿಟೆಕ್ನಿಕ್ ವಿದ್ಯಾಸಂಸ್ಥೆಯ ಆಡಳಿತ ಸಮಿತಿಯ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ ಕಾರ್ಯಕ್ರಮದ ಕುರಿತು ಉಪನ್ಯಾಸ ನೀಡಿದರು. ಅತಿಥಿಗಳಾಗಿ ಶ್ರೀದೇವಿ ವಿದ್ಯಾ ಕೇಂದ್ರದ ನಿವೃತ್ತ ಮುಖ್ಯಗುರು ರಾಮಚಂದ್ರ ಭಟ್, ಬೈಲು ದರ್ಖಾಸ್ ಕುಟುಂಬದ ಹಿರಿಯ ಗೋಪಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಿರಿಜಾ ಕೊರಗಪ್ಪ ದಂಪತಿಗಳು ಸ್ವಾಮೀಜಿಗಳಿಗೆ ಫಲಪುಷ್ಪ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಶ್ರೀ ದೇವಿ ಗೀತಾ ಜ್ಞಾನ ಯಜ್ಞ ಪುಣಚ ಘಟಕದವರಿಂದ ಭಗವದ್ಗೀತೆ ಪುಸ್ತಕ ನೀಡಲಾಯಿತು. ಶ್ರೀ ದೇವಿ ವಿದ್ಯಾ ಕೇಂದ್ರದ ಮುಖ್ಯ ಶಿಕ್ಷಕಿ ರಜನಿ ಸಾಮರಸ್ಯ ಗೀತೆ ಹಾಡಿದರು. ಶಶಿಕಲಾ ಬೈಲು ದರ್ಖಾಸು ಸ್ವಾಗತಿಸಿ, ಶಶಿಧರ ಬೈಲು ದರ್ಖಾಸು ದನ್ಯವಾದ ನೀಡಿದರು. ಚೇತನ ಬೈಲಡ್ಕ ಕಾರ್ಯಕ್ರಮ ನಿರೂಪಿಸಿದರು.
ಗ್ರಾ.ಪಂ ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯರು ವಿವಿಧ ಕ್ಷೇತ್ರದ ಮುಖಂಡರು ಊರಿನ ಗಣ್ಯರು ಭಾಗವಹಿಸಿದರು. ಸೇರಿದ ಎಲ್ಲರಿಗೂ ಸಹ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಪುಣಚ ಗ್ರಾಮ ವಿಕಾಸ ಸಮಿತಿಯ ಪದಾಧಿಕಾರಿಗಳು ಸದಸ್ಯರು ಸಹಕರಿಸಿದರು.