ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನಲ್ಲಿ ಪ್ರೀ ಕೆ ಜಿ , ಎಲ್ ಕೆ ಜಿ , ಯು ಕೆ ಜಿ ಮಕ್ಕಳ ಕ್ರೀಡಾಕೂಟ

0

ಕಾಣಿಯೂರು: ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕಾಣೆಯೂರಿನಲ್ಲಿ ಪ್ರೀ ಕೆ ಜಿ, ಎಲ್ ಕೆಜಿ ಮತ್ತು ಯುಕೆಜಿ ಮಕ್ಕಳ ಕ್ರೀಡಾಕೂಟವು ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು. ಸಂಸ್ಥೆಯ ಟ್ರಸ್ಟಿ ಹರಿಚರಣ್ ರೈ ಮಾದೋಡಿಯವರು ಧ್ವಜಾರೋಹಣವನ್ನು ನೆರವೇರಿಸಿ ಪುಟಾಣಿಗಳಿಗೆ ಶುಭ ಹಾರೈಸಿದರು. ಪುಟಾಣಿಗಳಾದ ಅಪ್ರಮೇಯ , ಚಾಲ್ಸಿಯ, ಮಾನ್ಯ, ಧನ್ವಿಕ್ ಆರ್ ನಾಯ್ಕ್, ಮನ್ಮಯಿ ಕ್ರೀಡಾಜ್ಯೋತಿಯನ್ನು ಕ್ರೀಡಾಂಗಣಕ್ಕೆ ತಂದು ಟ್ರಸ್ಟಿ ಹರಿಚರಣ್ ರೈ ಮಾದೋಡಿಯ ವರಿಗೆ ಹಸ್ತಾಂತರಿಸಿದರು. ಸಂಸ್ಥೆಯ ಮುಖ್ಯಗುರು ಸರಸ್ವತಿ ಎಂ ಮಕ್ಕಳನ್ನು ಹುರಿದುಂಬಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕಿಯರಾದ ಹೇಮಾ ನಾಗೇಶ್ ರೈ ,ಅನಿತಾ ಜೆ ರೈ, ಸವಿತಾ ಕೆ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಶ್ರುತಿ ,ಮೇಘನಾ, ಸುಚೇತ ಮತ್ತು ರಚನಾ ಸಹಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಜಯಚಂದ್ರ ಮತ್ತು ವನಿತಾ ಮಾರ್ಗದರ್ಶನ ನೀಡಿದರು.

LEAVE A REPLY

Please enter your comment!
Please enter your name here