




ಕಾಣಿಯೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡಾಡಿಕೊಪ್ಪದಲ್ಲಿ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂರವರ ಜನ್ಮದಿನದ ಪ್ರಯುಕ್ತ ಮಕ್ಕಳ ದಿನಾಚರಣೆ ಆಚರಿಸಲಾಯಿತು.





ಮಕ್ಳಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಬಳಿಕ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ನಾಯಕ ಯಶಸ್ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಉಪನಾಯಕ ಶಿವನ್, ಮಂತ್ರಿಗಳಾದ ಕೃತಿಕಾ, ಹಿಮಶ್ರೀ, ಗುಣಶ್ರೀ, ಪ್ರಣಮ್ಯ, ಶ್ರೇಯಾ, ಪ್ರತೊಶ್, ತೇಜಸ್, ಅಂಕಿತ್, ಕೀರ್ತನ್, ಆಕಾಶ್, ರಕ್ಷಣ್ ಉಪಸ್ಥಿತರಿದ್ದರು. ತೇಜಸ್ ಸ್ವಾಗತಿಸಿ ರಕ್ಷಣ್ ವಂದಿಸಿದರು. ಶಿವನ್ ನಿರೂಪಿಸಿದರು. ಶಾಲಾ ಮುಖ್ಯಗುರು ಜಯಂತ ವೈ ಮಾರ್ಗದರ್ಶನ ನೀಡಿದರು.












