ಪುತ್ತೂರು: ಬೆಂಗಳೂರು ಮೈತ್ರಿ ಸಂಸ್ಕೃತ ಸಂಸ್ಕೃತಿ ಪ್ರತಿಷ್ಠಾನವು ನ.19ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ”ಮೇಧಾನಮನಮ್- ಯೋಧನಮನಮ್, ಸಂಸ್ಕೃತೋತ್ಸವಃ” ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿಯ ಸಂಸ್ಕೃತ ಭಾಷಾ ವಿಷಯದಲ್ಲಿ ಅಧಿಕ ಅಂಕಗಳನ್ನು ಪಡೆದ ಪುತ್ತೂರಿನ ದೈವಿಕ್ ರಾಜೇಶ್ ( ರಾಜೇಶ್ ರಾವ್ ಮತ್ತು ಶ್ವೇತ ಹೆಗ್ಡೆ ದಂಪತಿ ಪುತ್ರ) ಮತ್ತು ನಿಶ್ಚಲ್ ಕೆ ಜೆ (PMGSY ಇಂಜಿನಿಯರ್ ಜನಾರ್ದನ್ ಗೌಡ ಮತ್ತು ಜ್ಯೋತಿ ದಂಪತಿ ಪುತ್ರ) ಅವರನ್ನು ಅಭಿನಂದಿಸಿತು.
ಕಾರ್ಯಕ್ರಮದಲ್ಲಿ ಹಿರಿಯ ವಾಗ್ಮಿ ಡಾ|| ಗುರುರಾಜ್ ಕರ್ಜಗಿ, ನಟ ಡಾ|| ಸುಚೇಂದ್ರಪ್ರಸಾದ್, ನ್ಯಾಯಮೂರ್ತಿ ವಿ.ಶ್ರೀಶಾನಂದ, ಹಾಸ್ಯ ಬರಹಗಾರ ಎಂ.ಎನ್ ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ದೈವಿಕ್ ರಾಜೇಶ್ ಮತ್ತು ನಿಶ್ಚಲ್ ಕೆ.ಜೆ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಮತ್ತು ವಿವೇಕಾನಂದ ಪಿಯು ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಪುರಸ್ಕಾರ ಪಡೆದುಕೊಂಡರು.