




ವಿಮಾನಯಾನ, ಹಾಸ್ಪಿಟಲ್ ಮ್ಯಾನೇಜ್ಮೆಂಟ್‌ನಲ್ಲಿ ಬಹು ಬೇಡಿಕೆಯ ಉದ್ಯೋಗ-ಜಯಂತ್ ನಡುಬೈಲು



ಪುತ್ತೂರು: ವಿಮಾನಯಾನ, ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಇಂದು ಗುಣಮಟ್ಟದ ಬಹು ಬೇಡಿಕೆಯ ಉದ್ಯೋಗಗಳಿದ್ದು ಇಂದಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಖಾತ್ರಿಯಿಲ್ಲ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶದೊಂದಿಗೆ ಬೆರೆತು ಉದ್ಯೋಗ ಖಾತ್ರಿಯೊಂದಿಗೆ ಬದುಕಿ ತನ್ನ ತಂದೆ-ತಾಯಿಗೆ ಹೊರೆಯಾಗದೆ ತನ್ನ ಜೀವನ ಉಜ್ವಲಗೊಳಿಸಬೇಕೆನ್ನುವುದು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಉದ್ಧೇಶವಾಗಿದೆ ಎಂದು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ್ ನಡುಬೈಲುರವರು ಹೇಳಿದರು.






ಏರ್‌ಪೋರ್ಟ್ ಹಾಗೂ ವಿಮಾನಯಾನದ ವಿವಿಧ ಸಂಸ್ಥೆಯಲ್ಲಿ ಕನಸಿನ ಉದ್ಯೋಗ ಪಡೆಯಲು ಉತ್ತಮ ಅವಕಾಶವನ್ನು ಅಕ್ಷಯ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಅಕ್ಷಯ ಕೆರಿಯರ್ ಅಕಾಡೆಮಿ ಮಂಗಳೂರು ಇವುಗಳ ಸಹಯೋಗದಲ್ಲಿ ಪುತ್ತೂರು ಹಾಗೂ ಆಸುಪಾಸಿನಲ್ಲಿ ಪ್ರಪ್ರಥಮ ಬಾರಿಗೆ ಏವಿಯೇಷನ್ ಕೋರ್ಸ್ ಪರಿಚಯಿಸಿದ್ದು ಏವಿಯೇಶನ್ ಕೋರ್ಸ್‌ಗಳ ಬಗ್ಗೆ ಉಚಿತ ಕಾರ್ಯಾಗಾರವು ಡಿ.13ರಂದು ಸಂಪ್ಯ ಅಕ್ಷಯ ಕಾಲೇಜಿನ ಅಕ್ಷಯ ಆಡಿಟೋರಿಯಂನಲ್ಲಿ ನಡೆದಿದ್ದು ಈ ಕಾರ್ಯಗಾರದ ಉದ್ಘಾಟನೆಯನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಬಿಎ, ಬಿಕಾಂ, ಬಿಎಸ್ಸಿ ಪದವಿ ಡಿಗ್ರಿ ಮೂಲಕ ಉದ್ಯೋಗ ಪಡೆಯುವ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ಪದವಿಯೊಂದಿಗೆ ಹೊರ ಬಂದಾಗ ಅವರಿಗೆ ತಕ್ಕುದಾದ ಉದ್ಯೋಗ ಸಿಗುವುದು ಕಡಿಮೆ. ಇಂದಿನ ಕಾಲಘಟ್ಟದಲ್ಲಿ ಯಾವ್ಯಾವ ಕ್ಷೇತ್ರದಲ್ಲಿ ಎಷ್ಟೊಂದು ಉದ್ಯೋಗಗಳು ಇವೆ ಎಂಬುದು ಇಂದಿನ ಪೀಳಿಗೆಗೆ ಗೊತ್ತಾಗಿಲ್ಲ ಎಂದರು.
ಗುಣಮಟ್ಟದ ಜೀವನಕ್ಕೆ ಏವಿಯೇಶನ್ ಕೋರ್ಸ್ ದಾರಿ-ಸಂಪತ್ ಪಕ್ಕಳ:
ಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ ಪ್ರಾಸ್ತಾವಿಕವಾಗಿ ಮಾತನಾಡಿ, ೨೦೨೧ರಲ್ಲಿ ಮೂರು ವರ್ಷದ ಬಿಕಾಂ ಶಿಕ್ಷಣದೊಂದಿಗೆ ಏವಿಯೇಶನ್ ಸರ್ಟಿಫಿಕೇಟ್ ಕೋರ್ಸ್‌ನ್ನು ಹೊರ ತಂದೆವು. 2024ರಲ್ಲಿ ಮೊದಲ ಬ್ಯಾಚ್‌ನಲ್ಲಿ 24 ವಿದ್ಯಾರ್ಥಿಗಳಿದ್ದು, 12 ವಿದ್ಯಾರ್ಥಿಗಳಿಗೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಉದ್ಯೋಗ ಸಿಕ್ಕಿತ್ತು. 2024ರ ಬ್ಯಾಚ್‌ನಲ್ಲಿ 30 ವಿದ್ಯಾರ್ಥಿಗಲಿದ್ದು 24 ವಿದ್ಯಾರ್ಥಿಗಳು ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉದ್ಯೋಗ ದೊರಕಿದೆ. ಸಮಾಜದಲ್ಲಿ ಜೀವಿಸಲು ಗುಣಮಟ್ಟದ ಜೀವನದೊಂದಿಗೆ ಬದುಕನ್ನು ಉಜ್ವಲಗೊಳಿಸಲು ಉತ್ತಮ ಸಂಬಳದ ಅಗತ್ಯವಿದ್ದು ಇದು ಏವಿಯೇಶನ್ ಕೋರ್ಸ್ ಕರುಣಿಸುತ್ತದೆ.
ಕಾರ್ಯಾಗಾರ:
ಮಂಗಳೂರು, ಬೆಂಗಳೂರು ಏರ್‌ಪೋರ್ಟ್‌ನಲ್ಲಿರುವ ಪ್ರಸ್ತುತ ಉದ್ಯೋಗಾವಕಾಶಗಳು, ಕ್ಯಾಬ್ ಇನ್ ಕ್ರ್ಯೂ ಆಗೋದು ಹೇಗೆ?, ವಿಮಾನಯಾನದ ಅರ್ಹತೆಗಳೇನು?, ಏರ್‌ಪೋರ್ಟ್‌ನ ಕಾರ್ಯನಿರ್ವಹಣೆ ಹೇಗೆ, ಅದರ ಪೂರ್ವ ತಯಾರಿ ಹೇಗೆ ಮಾಡುವುದು, ಲೈವ್ ಗ್ರೂಮಿಂಗ್ ಮತ್ತು ಸಂವಹನ ಸಲಹೆಗಳು ಎಂಬುದರ ಬಗ್ಗೆ ಐಟಿ ಇಂಡಸ್ಟ್ರೀ ಉದ್ಯೋಗಿ, ಮೃದು ಕೌಶಲ್ಯದ ತರಬೇತಿದಾರೆ ನಿಶಾ, ಝೂಂಬಾ ಫಿಟ್ನೆಸ್ ಸರ್ಟಿಫೈ ಟ್ರೈನರ್ ದೇವಿಪ್ರಸಾದ್‌ರವರ ತರಬೇತಿ ಕಾರ್ಯಾಗಾರದೊಂದಿಗೆ ಅಕ್ಷಯ ಕಾಲೇಜಿನ ಕಳೆದ ವರ್ಷದ ವಿದ್ಯಾರ್ಥಿ ಜೀವನ್‌ರವರು ಪ್ರಸ್ತುತ ಏವಿಯೇಶನ್‌ನಲ್ಲಿ ಉದ್ಯೋಗದಲ್ಲಿದ್ದು ತನ್ನ ಜೀವನದ ಯಶೋಗಾಥೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಯಿತು.
ಅಕ್ಷಯ ಕೆರಿಯರ್ ಅಕಾಡೆಮಿಯ ಸ್ಥಾಪಕಿ ಜಯಶ್ರೀ, ಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ ವೇದಿಕಯೆಲ್ಲಿ ಉಪಸ್ಥಿತರಿದ್ದರು. ಅಕ್ಷಯ ಕೆರಿಯರ್ ಅಕಾಡೆಮಿಯ ಎಚ್.ಆರ್ ಮ್ಯಾನೇಜರ್ ಆಗಿರುವ ಭರತ್ ಕುಮಾರ್ ಓಲ್ತಾಜೆ ಸ್ವಾಗತಿಸಿ, ಡಿಪ್ಲೊಮಾ ಇನ್ ಏವಿಯೇಶನ್ ವಿದ್ಯಾರ್ಥಿನಿ ಸುಹಾಸಾರಾ ವಂದಿಸಿದರು. ಅಕ್ಷಯ ಕೆರಿಯರ್ ಅಕಾಡೆಮಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಾಮಿನಿ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಅಕ್ಷಯ ಕೆರಿಯರ್ ಅಕಾಡೆಮಿಯ ವಿದ್ಯಾರ್ಥಿನಿ ಹಿಮಾಲಿ ಕಾರ್ಯಕ್ರಮ ನಿರೂಪಿಸಿದರು.
ಏರ್‌ಲೈನ್ಸ್‌ನ ಉದ್ಯೋಗಿ ಅಕ್ಷಯ ಕಾಲೇಜಿನ ಹಿರಿಯ ವಿದ್ಯಾರ್ಥಿ ಜೀವನ್..
ಅಕ್ಷಯ ಕಾಲೇಜಿನ ಹಿರಿಯ ವಿದ್ಯಾರ್ಥಿ ಜೊತೆಗೆ ಯೂನಿಯನ್ ಲೀಡರ್ ಕೂಡ ಆಗಿರುವ ಜೀವನ್ ಭವಿಷ್ಯದಲ್ಲಿ ಈಗೆಯೇ ಆಗುತ್ತೇನೆ ಎಂದು ಕನಸು ಮನಸ್ಸಿನಲ್ಲಿ ಎಣಿಸಿರಲಿಲ್ಲ. ಅಕ್ಷಯ ಕಾಲೇಜಿನಲ್ಲಿ ಬಿಕಾಂ ಪದವಿಯೊಂದಿಗೆ ಏವಿಯೇಶನ್ ಶಿಕ್ಷಣ ಪಡೆದುಕೊಂಡಿದ್ದ ಜೀವನ್‌ರವರು ತನ್ನ ಕೊನೆಯ ಸೆಮೆಸ್ಟರ್ ಪರೀಕ್ಷೆಯನ್ನು ಬರೆಯುವ ಮೊದಲೇ ಏರ್‌ಲೈನ್ಸ್‌ನಲ್ಲಿ ಉದ್ಯೋಗ ಗಳಿಸಿರುತ್ತಾರೆ. ಜೀವನ್‌ನ ವೈಯಕ್ತಿಕ ಕೌಶಲ್ಯವು ಅವನಿಗೆ ಏರ್‌ಲೈನ್ಸ್‌ನಲ್ಲಿ ಉದ್ಯೋಗ ಸಿಕ್ಕಿದೆ. ಈವಾಗ ಕೊನೆಯ ಹಾಗೂ ಐದನೇ ಸೆಮೆಸ್ಟರ್ ಬರೆಯುವ ಏವಿಯೇಶನ್ ಹಾಗೂ ಬಿಸಿನೆಸ್ ಹೊಟೇಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಮಾರಿಶಶ್‌ನಲ್ಲಿ ನಾಲ್ಕು ತಿಂಗಳ ಇಂಟರ‍್ನ್‌ಶಿಪ್‌ನೊಂದಿಗೆ ಮಾಸಿಕ ರೂ.40 ಸಾವಿರ ಸ್ಟೈಪೆಂಡರಿ, ಹಾಂಕಾಂಗ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ರೂ.90 ಸಾವಿರ ಸ್ಟೈಪೆಂಡರಿ ಸಿಗಲು ಕಾರಣವಾಗಿದೆ.
ಏವಿಯೇಶನ್ ಕೋರ್ಸ್‌ಗಳು..
ಪುತ್ತೂರಿನ ಸುಮಾರು 42 ವಿದ್ಯಾರ್ಥಿಗಳಿಗೆ ವಿವಿಧ ಏರ್‌ಪೋರ್ಟ್ ಹಾಗೂ ಏರ್‌ಲೈನ್ಸ್‌ಗಳಲ್ಲಿ ಉದ್ಯೋಗ ದೊರಕಿಸಿಕೊಟ್ಟ ಹೆಮ್ಮೆಯ ಸಂಸ್ಥೆ ಅಕ್ಷಯ ಕೆರಿಯರ್ ಅಕಾಡೆಮಿ ಆಗಿದೆ. ಅಕ್ಷಯ ಕೆರಿಯರ್ ಅಕಾಡೆಮಿಯಲ್ಲಿ ಈಗಾಗಲೇ ಡಿಪ್ಲೋಮ ಇನ್ ಏವಿಯೇಷನ್ ಅಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್(1 ವರ್ಷ), ಸರ್ಟಿಫಿಕೇಷನ್ ಇನ್ ಏರ್ಪೋರ್ಟ್ ಮ್ಯಾನೇಜ್ಮೆಂಟ್ ಅಂಡ್ ಹಾಸ್ಪಿಟಾಲಿಟಿ(6 ತಿಂಗಳು), ಸರ್ಟಿಫಿಕೇಷನ್ ಇನ್ ಕ್ಯಾಬಿನ್ ಅಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್(6 ತಿಂಗಳು)ಕೋರ್ಸ್‌ಗಳು ಲಭ್ಯವಿದ್ದು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಬಹುದಿದ್ದು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ +918105727611 +917338676611 +918088381678 ಸಂಪರ್ಕಿಸಬೇಕಾಗಿ ಸಂಸ್ಥೆಯು ತಿಳಿಸಿದೆ.





