ನ.22-24:ಸುದಾನದಲ್ಲಿ“ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವ”

0

ಪುತ್ತೂರು ; ಸಂಸಾರ ಜೋಡುಮಾರ್ಗ ಇದರ ಆಶ್ರಯದಲ್ಲಿ ರೋಟರಿ ಪುತ್ತೂರು ಎಲೈಟ್ ಸಹಭಾಗಿತ್ವದಲ್ಲಿ ನಿರತ ನಿರಂತ -ಬಹುವಚನಂ ಆಯೋಜನೆಯ ಮೂರು ದಿನಗಳ “ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವ” ವು ನ.22ರಿಂದ 24 ರವರೆಗೆ ಪುತ್ತೂರು ಮಂಜಲ್ಪಡ್ಪು ಸುದಾನ ವಿದ್ಯಾಸಂಸ್ಥೆಗಳ ಆವರಣದಲ್ಲಿರುವ ಎಡ್ವರ್ಡ್ ಹಾಲ್ ನಲ್ಲಿ ನಡೆಯಲಿದೆ.
ಮೂರು ದಿನಗಳಲ್ಲಿ ಐದು ಮಕ್ಕಳ ನಾಟಕಗಳನ್ನು ಆಯೋಜಿಸಲಾಗಿದ್ದು ಪ್ರತಿದಿನ ಸಂಜೆ 6.30 ಕ್ಕೆ ನಾಟಕ ಆರಂಭಗೊಳ್ಳಲಿದೆ.


ನ.22ರ ಬುಧವಾರ ಸಂಜೆ 6.30ರಿಂದ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಮಾಣಿ ಪೆರಾಜೆ ಇಲ್ಲಿಯ ವಿದ್ಯಾರ್ಥಿಗಳು ಅಭಿನಯಿಸುವ, ರಂಗ ನಿರ್ದೇಶಕ ಮೌನೇಶ ವಿಶ್ವಕರ್ಮ ನಿರ್ದೇಶನದ “ಆರೋಗ್ಯ ಸಿರಿ” ನಾಟಕ ಪ್ರದರ್ಶನಗೊಳ್ಳಲಿದೆ. ಸಂಜೆ 7.15 ರಿಂದ ಪುತ್ತೂರು ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿಗಳಿಂದ ಮೌನೇಶ ವಿಶ್ವಕರ್ಮ ನಿರ್ದೇಶನದ “ರೋಗಗಳ ಮಾಯದಾಟ” ನಾಟಕ ಪ್ರದರ್ಶನಗೊಳ್ಳಲಿದೆ.


ನ.23ರ ಗುರುವಾರ ಸಂಜೆ 6.30ರಿಂದ ಪುತ್ತೂರು ಶ್ರೀರಾಮಕೃಷ್ಣ ಪ್ರೌಢಶಾಲೆಯ ಅಭಿಜ್ಞಾನ ಮಕ್ಕಳ ನಾಟಕ ಬಳಗದಿಂದ ರಂಗಕರ್ಮಿ ಐಕೆ ಬೊಳುವಾರು ನಿರ್ದೇಶನದ “ಕಾರಂತಜ್ಜನಿಗೊಂದು ಪತ್ರ” ನಾಟಕ ಪ್ರದರ್ಶನವಾಗಲಿದೆ. ಬಳಿಕ ರೋಟರಿ ಪುತ್ತೂರು ಎಲೈಟ್ ಇದರ ಸದಸ್ಯರು ರಂಗ ನಿರ್ದೇಶಕ ಮೌನೇಶ ವಿಶ್ವಕರ್ಮರವರ ನಿರ್ದೇಶನದಲ್ಲಿ ಅಭಿನಯಿಸುವ ನಾಟಕ “ಅಯ್ಯೊಯ್ಯೋ ಮಾನವ..!” ಪ್ರದರ್ಶನವಾಗಲಿದೆ.


ನ.24 ಶುಕ್ರವಾರ ಸಂಜೆ 6.30 ರಿಂದ ಸಾಗರ ತುಮರಿಯ ಕಿನ್ನರ ಮೇಳದ ಕಲಾವಿದರು ರಂಗ ನಿರ್ದೇಶಕ ಸಾಲಿಯಾನ್ ಉಮೇಶ್ ನಾರಾಯಣ್ ನಿರ್ದೇಶನದಲ್ಲಿ ಅಭಿನಯಿಸುವ ನಾಟಕ”ಆನ್ಯಾಳ ಡೈರಿ” ಪ್ರದರ್ಶನಗೊಳ್ಳಲಿದೆ.
ಈ ಮೂರು ದಿನಗಳ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ರೋಟರಿ ಜಿಲ್ಲೆ 3181ರ ಡಿಸ್ಟ್ರಿಕ್ಟ್ ಪಬ್ಲಿಕ್ ಇಮೇಜ್ ಚೇರ್ಮೆನ್ ಕೆ.ವಿಶ್ವಾಸ್ ಶೆಣೈರವರು ಬಿಡುಗಡೆಗೊಳಿಸಿದರು, ಈ ಸಂದರ್ಭ ರೋಟರಿ ಪುತ್ತೂರು ಎಲೈಟ್ ಅಧ್ಯಕ್ಷ ಅಬ್ದುಲ್ ರಝಾಕ್ ಕಬಕಕಾರ್ಸ್, ಕಾರ್ಯದರ್ಶಿ ಆಸ್ಕರ್ ಆನಂದ್, ಡಾ.ಕೀರ್ತನ್ ಕಜೆ, ಸಂಸಾರ ಜೋಡುಮಾರ್ಗದ ನಿರ್ದೇಶಕ ಮೌನೇಶ ವಿಶ್ವಕರ್ಮ ಉಪಸ್ಥಿತರಿದ್ದರು.
ಮೂರು ದಿನಗಳ ಕಾಲ ನಡೆಯುವ ಮಕ್ಕಳ ನಾಟಕೋತ್ಸವದಲ್ಲಿ ರಂಗಾಸಕ್ತರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಸಾರ ಜೋಡುಮಾರ್ಗ ಇದರ ಆಶ್ರಯದಲ್ಲಿ ರೋಟರಿ ಪುತ್ತೂರು ಎಲೈಟ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದೆ.

LEAVE A REPLY

Please enter your comment!
Please enter your name here